
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 12 ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ತಾಲ್ಲೂಕು ನಿವೃತ್ತಿ ನೌಕರರ ಸಂಘ ಅಸ್ಥಿತ್ವದಲ್ಲಿ ಇದ್ದು, ಕೇಂದ್ರದಲ್ಲಿ ಜಿಲ್ಲಾ ನಿವೃತ್ತಿ ನೌಕರರ ಸಂಘ ಮಾತ್ರ ಅಸ್ಥಿತ್ವದಲ್ಲಿ ಇದ್ದು, ತಾಲ್ಲೂಕು ನಿವೃತ್ತಿ ನೌಕರರ ಸಂಘ ಅಸ್ತಿತ್ವದಲ್ಲಿ ಇರಲಿಲ್ಲ. ಇದರಿಂದ ತಾಲ್ಲೂಕಿನ ನಿವೃತ್ತ ನೌಕರರ ಸಮಸ್ಯೆಗಳನ್ನು ಸೂಕ್ತ ಕಾಲದಲ್ಲಿ ಹಾಗೂ ತ್ವರಿತವಾಗಿ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಲು ವಿಫಲವಾಗಿರುವುದರಿಂದ ಚಿತ್ರದುರ್ಗ ತಾಲ್ಲೂಕಿನಲ್ಲಿ ಜೂ. 15 ರಂದು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘವನ್ನು ಅಸ್ಥಿತ್ವಕ್ಕೆ ತರಲಾಗುತ್ತಿದೆ ಎಂದು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರಾದ ನಾಗರಾಜ ಸಂಗಮ ತಿಳಿಸಿದ್ದಾರೆ.
ಚಿತ್ರದರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ತಾಲ್ಲೂಕಿನ ನಿವೃತ್ತ ನೌಕರರು ಇತರೆ ತಾಲ್ಲೂಕಿನಲ್ಲಿ ಇದ್ದಂತೆ ಇಲ್ಲಿಯೂ ತಾಲ್ಲೂಕು ನಿವೃತ್ತ ಸಂಘ ಹಾಗೂ ನಿವೃತ್ತ ನೌಕರರು ಅನೇಕ ಸಭೆಗಳನ್ನು ಸೇರಿ ಚರ್ಚಿಸಿ ಚಿತ್ರದುರ್ಗದಲ್ಲಿ ಎಲ್ಲಾ ತಾಲ್ಲೂಕಿನಲ್ಲಿ ಇರುವಂತೆ ಒಂದು ಚಿತ್ರದುರ್ಗ ತಾಲ್ಲೂಕಿನ ನಿವೃತ್ತ ನೌಕರರ ಸಂಘ ಮತ್ತು ಮನೋರಂಜನಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿ ಸಂಘವನ್ನು ನೊಂದಣೆ ಮಾಡಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ನಿವೃತ್ತರಾದ ಎಲ್ಲಾ ನೌಕರರುಗಳನ್ನು ಈ ಸಂಘದಲ್ಲಿ ನೊಂದಣೆ ಮಾಡಿಸುವುದು. ನೊಂದಣೆಯಾದ ನಿವೃತ್ತಿ ನೌಕರರಿಗೆ ಪ್ರತಿ ಮಾಹೆಯಲ್ಲಿ ಪಿಂಚಣಿ ಬರಲಾಗುತ್ತಿರುವ ಬಗ್ಗೆ ನಿಗಾ ವಹಿಸುವುದು. ನಿವೃತ್ತಿ ನೌಕರರಿಗೆ ಅವರ ಕುಟುಂಬದಲ್ಲಿ ಯಾರಾದರೂ ವಿನಾಕಾರಣ ತೊಂದರೆ ನೀಡುತ್ತಿದ್ದಲ್ಲಿ ಅಂತಹ ನೌಕರರ ಸಹಾಯಕ್ಕೆ ಧಾವಿಸುವುದು. ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ವರ್ಷದಲ್ಲಿ 2 ಬಾರಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ತಜ್ಞ ವೈದ್ಯರಿಂದ ಚಿಕಿತ್ಸೆಗಳನ್ನು ಉಚಿತವಾಗಿ ಸಲಹೆ ತಪಾಸಣೆ ಮಾಡುವುದು. ರಾಜ್ಯ ಹಾಗೂ ಜಿಲ್ಲಾ ನಿವೃತ್ತ ನೌಕರರ ಸಂಘಗಳು ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅವರುಗಳೊಂದಿಗೆ ಕೈ ಜೋಡಿಸುವುದು. ನೊಂದಣೆಯಾದ ನೌಕರರು ಒಂದು ಪಕ್ಷಮೃತ ಹೊಂದಿದಲ್ಲಿ ಅವರಿಗೆ ಗೌರವ ಸೂಚಿಸಿ ಸಂಘದಿಂದ ಅಲ್ಪ ಸಹಾಯಧನ ನೀಡುವುದು. 15 ನೊಂದಣೆಯಾದ ಎಲ್ಲಾ ನೌಕರರಿಗೆ ಕಡ್ಡಾಯವಾಗಿ ಹಿರಿಯ ನಾಗರೀಕರ ಗುರುತಿನ ಚೀಟಿ ವಿತರಣೆಗೆ ಸಹಕರಿಸುವುದು. ಸರ್ಕಾರದ ಹಿರಿಯ ನಾಗರೀಕರಿಗೆ ನೀಡಲಾದ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕ ಕಚೇರಿ ಬ್ಯಾಂಕ್‍ಗಳಲ್ಲಿ ಕಡ್ಡಾಯವಾಗಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನೊಂದಣೆಯಾದ ನೌಕರರು ಒಂದು ಪಕ್ಷಮೃತರಾದಲ್ಲಿ ಅವರ ಪತ್ನಿ ರವರಿಗೆ ಉಚಿತವಾಗಿ ಕುಟಂಬ ಪಿಂಚಣಿಗೆ ಸಹಕರಿಸುವುದು. ರೋಸ್ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ನೀಡಲು ಸರ್ಕಾರಕ್ಕೆ ಒತ್ತಡ ತರುವುದು ಹಾಗೂ ಇನ್ನು ‘ಇತರೆ ಹಲವಾರು ಸಮಸ್ಯೆಗಳ ಕುರಿತು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜೂನ್ 15 ರಂದು ಸಂಘವನ್ನು ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ, ಸಂಸದರಾದ ಗೋವಿಂದ ಎಂ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್ಪೀರ್, ಅಪರ ಜಿಲ್ಲಾಧಿಕಾರಿಗಳಾದ ಬಿ.ಟಿ.ಕುಮಾರಸ್ವಾಮಿ. ಪೊಲೀಸ್ ಉಪಾಧೀಕ್ಷರಾದ ಪಿ.ಕೆ.ದಿನಕರ ಹಾಗೂ ಜಿಲ್ಲಾ ನಿವೃತ್ತ ನೌಕರರ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರುಗಳು ವಿವಿಧ ಇಲಾಖೆಗಳ ವೃಂದದ ನೌಕರುಗಳ ಸಂಘದ ಅಧ್ಯಕ್ಷರುಗಳು ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕಿನ ನಿವೃತ್ತ ಸಂಘದ ಅಧ್ಯಕ್ಷರುಗಳು ಈ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.
ಈ ಸಮಾರಂಭದಲ್ಲಿ 2024-25ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಕುಮಾರಿ ಪಿ.ಎನ್.ಶ್ರೇಯಾ ಹಾಗೂ ಡಿ.ವಿ.ವರಣ್ ವಂಶಿ ಇವರುಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು.
ಈ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ಬಿ.ಕೆ.ಹನುಮಂತಪ್ಪ, ಕಾರ್ಯಧ್ಯಕ್ಷರಾದ ಹೆಚ್.ಗೋವಿಂದಯ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಎಂ.ಜಿ.ಸೂರ್ಯ ನಾರಾಯಣ್, ಓ.ಮಾದಯ್ಯ, ಶ್ರೀಮತಿಪ್ರೇಮಾ, ಖಜಾಂಚಿ ಚಿನ್ನಪ್ಪ ಕೃಷ್ಣಮೂರ್ತಿ ಮನರಂಜನಾ ಕೇಂದ್ರದ ಉಪಾಧ್ಯಕ್ಷರಾದ ಪಿ.ಎಸ್.ಶಿವಕುಮಾರ್, ಸಹ ಕಾರ್ಯದರ್ಶಿ, ತಿಪ್ಪೇಸ್ವಾಮಿ.ಎ ಖಜಾಂಚಿ ಹಾಲಾನಾಯ್ಕ.ಎಸ್ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ 8747825425/9448565470/9611773140 ದೂರವಾಣಿ ಯನ್ನು ನಿವೃತ್ತ ನೌಕರರು ಸಂಪರ್ಕ ಮಾಡಬಹುದಾಗಿದೆ.