Chocolate Day 2024 :ಚಾಕೊಲೇಟ್ ನಾಲಗೆ ರುಚಿ ನೀಡುವುದು ಮಾತ್ರವಲ್ಲ ಅದರೊಂದಿಗೆ ಕೆಲವು ಆರೋಗ್ಯಕರ ಪ್ರಯೋಜನಗಳನ್ನು ಕೂಡಾ ಹೊಂದಿದೆ.
- ಈ ಚಾಕೊಲೇಟ್ ಆರೋಗ್ಯಕ್ಕೆ ಅಮೃತವಾಗಿದೆ
- ಡಾರ್ಕ್ ಚಾಕೊಲೇಟ್ ತಿನ್ನುವ ಪ್ರಯೋಜನಗಳು
- ಅಧ್ಯಯನದಿಂದಲೂ ಬಹಿರಂಗ

Chocolate Day 2024 : ಸಂಗಾತಿಗಳು ಪರಸ್ಪರ ಚಾಕೊಲೇಟ್‌ಗಳನ್ನು ನೀಡುವ ಮೂಲಕ ಚಾಕೊಲೇಟ್ ದಿನವನ್ನು ಆಚರಿಸುತ್ತಾರೆ .ಈ ಚಾಕೊಲೇಟ್ ನಾಲಗೆ ರುಚಿ ನೀಡುವುದು ಮಾತ್ರವಲ್ಲ ಅದರೊಂದಿಗೆ ಕೆಲವು ಆರೋಗ್ಯಕರ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಆದರೆ ಇದಕ್ಕಾಗಿ ಸರಿಯಾದ ಚಾಕೊಲೇಟ್ ಅನ್ನು ಖರೀದಿಸುವುದು ಬಹಳ ಮುಖ್ಯ. ಹಾಗಾದರೆ ಚಾಕೊಲೇಟ್ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ನೋಡೋಣ.
ಈ ಚಾಕೊಲೇಟ್ ಆರೋಗ್ಯಕ್ಕೆ ಅಮೃತವಾಗಿದೆ :
ಮಾರುಕಟ್ಟೆಯಲ್ಲಿ ಹಲವು ಬಗೆಯ ಚಾಕಲೇಟ್ ಗಳು ಲಭ್ಯವಿದ್ದರೂ ಅವೆಲ್ಲವೂ ಆರೋಗ್ಯಕರ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಆದರೆ ಡಾರ್ಕ್ ಚಾಕೊಲೇಟ್ ತೆಗೆದುಕೊಂಡರೆ ಖಂಡಿತವಾಗಿಯೂ ಕೆಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಡಾರ್ಕ್ ಚಾಕೊಲೇಟ್ ತಿನ್ನುವ ಪ್ರಯೋಜನಗಳು :
-ಹೃದ್ರೋಗವನ್ನು ತಡೆಗಟ್ಟುತ್ತದೆ
-ಅಧಿಕ ರಕ್ತದೊತ್ತಡದಲ್ಲಿ ಪ್ರಯೋಜನಕಾರಿ
-ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
-ಮಧುಮೇಹದಲ್ಲಿ ಪ್ರಯೋಜನಕಾರಿ
-ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ
-ಒತ್ತಡವನ್ನು ಕಡಿಮೆ ಮಾಡುತ್ತದೆ
ಅಧ್ಯಯನದಿಂದಲೂ ಬಹಿರಂಗ :
ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, 2014ರಲ್ಲಿ ನಡೆಸಿದ ಅಧ್ಯಯನವು, ಯಾವುದೇ ಗಿಲ್ಟ್ ಇಲ್ಲದೆ ಚಾಕೊಲೇಟ್ ತಿನ್ನುವ ಮಹಿಳೆಯರು ತಮ್ಮ ತೂಕವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದನ್ನು ತೋರಿಸಿದೆ. ಅದೇ ಸಮಯದಲ್ಲಿ, ಹೆದರಿ ಹೆದರಿ ಚಾಕೊಲೇಟ್ ತಿನ್ನುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯಂತೆ.
ಪ್ರತಿದಿನ ಇಷ್ಟು ಚಾಕೊಲೇಟ್ ತಿನ್ನಬಹುದು :
ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದಕ್ಕಾಗಿ ನಿಗದಿತ ಪ್ರಮಾಣದಲ್ಲಿ ತಿನ್ನುವುದು ಅವಶ್ಯಕ. ಪ್ರತಿದಿನ ಒಂದು ಚದರ ಅಥವಾ ಸಣ್ಣ ಚಾಕೊಲೇಟ್ ಅನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡಬಹುದು.
( ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1