ವಿರಾಟ್ ಕೊಹ್ಲಿ ಅವರ ರಣಜಿ ಟ್ರೋಫಿ ಪದಾರ್ಪಣೆ ನಿರಾಶಾದಾಯಕವಾಗಿದೆ. ಡೆಲ್ಲಿ ತಂಡದ ಪರ ಆಡಿದ ಅವರು ಕೇವಲ 6 ರನ್ ಗಳಿಸಿ ಬೌಲ್ಡ್ ಆದರು. 13 ವರ್ಷಗಳ ಬಳಿಕ ರಣಜಿ ಕ್ರಿಕೆಟ್ಗೆ ಮರಳಿದ್ದ ಕೊಹ್ಲಿ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಇದರಿಂದ ಅಭಿಮಾನಿಗಳು ನಿರಾಶರಾಗಿದ್ದಾರೆ.

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರು ರಣಜಿ ಕ್ರಿಕೆಟ್ನಲ್ಲಿ ಆಡೋಕೆ ಬಂದಿದ್ದಾರೆ. ಡೆಲ್ಲಿ ತಂಡದ ಪರ ಅವರು ಆಡುತ್ತಿದ್ದಾರೆ. ಕೊಹ್ಲಿ ಆಟವನ್ನು ನೋಡಲು ಬಂದ ಅಭಿಮಾನಿಗಳಿಗೆ ಅವರು ನಿರಾಸೆ ಮಾಡಿದ್ದಾರೆ. ಬೌಂಡರಿ ಸಿಡಿಸಿದ ಮರು ಬಾಲ್ನಲ್ಲಿ ಕೊಹ್ಲಿ ಬೋಲ್ಡ್ ಆಗಿದ್ದಾರೆ. ಆರು ರನ್ಗೆ ವಿಕೆಟ್ ಒಪ್ಪಿಸಿ ಅವರು ಪೆವಿಲಿಯನ್ ಸೇರಿದ್ದಾರೆ. ಈ ಮೂಲಕ ಇಲ್ಲಿಯೂ ಅವರು ಕಳಪೆ ಫಾರ್ಮ್ ಮುಂದುವರಿದಿದೆ.
ವಿರಾಟ್ ಕೊಹ್ಲಿ ಅವರು ಸುಮಾರು 13 ವರ್ಷಗಳ ಬಳಿಕ ರಣಜಿ ಕ್ರಿಕೆಟ್ ಆಡಿದ್ದಾರೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರೈಲ್ವೆ ತಂಡ ಕೇವಲ 241 ರನ್ಗಳಿಗೆ ಆಲ್ಔಟ್ ಆಯಿತು. ಮೊದಲ ದಿನ ಕೊಹ್ಲಿ ಮೈದಾನಕ್ಕೆ ಇಳಿಯಲಿಲ್ಲ. ಹೀಗಾಗಿ, ಅಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ನಿರಾಸೆ ಆಯಿತು. ಎರಡನೇ ದಿನ ಕೊಹ್ಲಿ ಅವರು ಡೆಲ್ಲಿ ಪರ ಬ್ಯಾಟ್ ಬೀಸಿದರು. ಇಲ್ಲಿಯೂ ಆಗಿದ್ದು ನಿರಾಸೆಯೇ.
ಕೊಹ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ಹರ್ಷೋದ್ಘಾರ ಮಾಡಿದರು. ಮೊದಲು ನಿಧಾನ ಗತಿಯಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಒಂದು ಬೌಂಡರಿ ಸಿಡಿಸಿದರು. ಮತ್ತೆ ಅದೇ ರೀತಿಯಲ್ಲಿ ಬ್ಯಾಟ್ ಬೀಸಲು ಹೋಗಿ ಕ್ಲೀನ್ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು. ಹಿಮಾಂಶು ಸಂಗ್ವಾನ್ ಅವರ ಮಾರಕ ದಾಳಿಗೆ ಕೊಹ್ಲಿ ತತ್ತರಿಸಿ ಹೋದರು. ಈ ಮೂಲಕ ಇಲ್ಲಿಯೂ ಕೊಹ್ಲಿ ಕಳಪೆ ಪ್ರದರ್ಶನ ಮುಂದುವರಿದಿದೆ.
ವಿರಾಟ್ ಕೊಹ್ಲಿ ಅವರು ಔಟ್ ಆಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ಬೇಸರದಿಂದ ಹೊರ ನಡೆಯಲು ಆರಂಭಿಸಿದರು. ಅವರ ಆಟ ನೋಡಬೇಕು ಎಂದು ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ ಆಗಿದೆ.