ಸಮುದಾಯದ ಹಿತಕ್ಕಾಗಿ ಸಿಎಂ ಸಿದ್ದರಾಮಯ್ಯ ಬದ್ಧ: ಡಿ.ಸುಧಾಕರ್.

ಚಿತ್ರದುರ್ಗ ಆ. 25

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ನಿಮ್ಮನ್ನು ಕಡೆಗಣಿಸುವಂತಹ ಭಾವನೆ ಇಲ್ಲ. ಅವರಿಗೆ ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ಇದೆ. ನಿಮ್ಮ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳನ್ನು ಶೀಘ್ರವಾಗಿ ಭೇಟಿ ಮಾಡಿಸಲಾಗುವುದು ಇದರ ಬಗ್ಗೆ ಗಡುವು ಕೊಡುವುದು ಬೇಡ ಎಂದು  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ತಿಳಿಸಿದರು.


ಚಿತ್ರದುರ್ಗ ನಗರದ ಶ್ರೀ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದವತಿಯಿಂದ ಹಮ್ಮಿಕೊಂಡಿದ್ದ “ರಾಜ್ಯ ಮಟ್ಟದ 33ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಸಮಾವೇಶ” ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಬ್ರಾಹಿಂ ಸಾಹೇಬ್ ರವರು ಈ ಸಮುದಾಯಕ್ಕೆ ಗೌರವ ತಂದು ಕೊಟ್ಟವರು..

ನಾನು ಓದುವಾಗ ಕಾಲೇಜಿನಲ್ಲಿ ಸೀಟು ಕೊಡಿಸಿದವರು ಇಬ್ರಾಹಿಂ ಸಾಹೇಬರು.ಪಿಂಜಾರ ಸಮುದಾಯ ಎಲ್ಲಾ ಸಮುದಾಯದವರೊಂದಿಗೆ  ಬಾಂಧವ್ಯವನ್ನು ಹೊಂದಿದೆ.ಕಾಂಗ್ರೆಸ್ ಸರ್ಕಾರ ಮುಸ್ಲಿಂರ ಪರ ಅಲ್ಪ ಸಂಖ್ಯಾತರ ಪರ ಇದೆ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳ ಬಗ್ಗೆ ಕಾಳಜಿಯನ್ನು ಹೊಂದಿದೆ.ನಮ್ಮ ಗೆಲುವಿನಲ್ಲಿ ನಿಮ್ಮ ಪಾತ್ರ ಅತ್ಯಮೂಲ್ಯವಾಗಿದೆ..

ಈ ಸರ್ಕಾರ ನಿಮ್ಮ ಜೊತೆಯಲ್ಲಿ ಇರುತ್ತದೆ ಎಂದ ಸಚಿವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ನಿಮ್ಮನ್ನು ಕಡೆಗಣಿಸುವಂತಹ ಭಾವನೆ ಇಲ್ಲ. ಅವರಿಗೆ ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ಇದೆ. ನಿಮ್ಮ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳನ್ನು ಶೀಘ್ರವಾಗಿ ಭೇಟಿ ಮಾಡಿಸಲಾಗುವುದು ಇದರ ಬಗ್ಗೆ ಗಡುವು ಕೊಡುವುದು ಬೇಡ ಎಂದು ಮನವಿ ಮಾಡಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘದ ರಾಜ್ಯಾಧ್ಯಕ್ಷರಾದ ಜಲೀಲ್‍ಸಾಬ್ ಮಾತನಾಡಿ, ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘವು ಸ್ಥಾಪನೆಯಾಗಿ 33 ವರ್ಷ ಕಳೆದರೂ ಸಹ ನಾವು ಹಾಗೆಯೇ ಇದ್ದೇವೆ.ರಾಜ್ಯದಲ್ಲಿ ನಮ್ಮ ಸಮುದಾಯದವರು 15 ರಿಂದ 20 ಲಕ್ಷ ಇದ್ದೇವೆ.. ಆದರೆ ಸಮೀಕ್ಷೆಯಲ್ಲಿ ನಮ್ಮ ಸಮುದಾಯವನ್ನು ಕಡಿಮೆ ತೋರಿಸುತ್ತಿದ್ದಾರೆ.ನಮ್ಮ ಸಮುದಾ ಯದಲ್ಲಿ ರಾಜ್ಯಮಟ್ಟದ ಅಧಿಕಾರಿಗಳಿಲ್ಲ..

ಏಕೆಂದರೆ ನಮ್ಮಲ್ಲಿ ಹೊಂದಾಣಿಕೆ, ಒಗ್ಗಟ್ಟಿನ ಕೊರತೆಯಿದೆ ಜೊತೆಯಲ್ಲಿ ನಾವು ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. 1994-95 ರಲ್ಲಿ ಸರ್ಕಾರ ಮುಸ್ಲಿಂರಲ್ಲಿಯೇ ಅತ್ಯಂತ ಹಿಂದುಳಿದ ನಮ್ಮನ್ನು ಕೇಟಗರಿ -1 ಗೆ ಸೇರಿಸಿದರು ನಾವೆಲ್ಲ ಒಂದೇ.. ಇಸ್ಲಾಂ ಧರ್ಮ ಒಂದೇ. ಇಸ್ಲಾಂ ಧರ್ಮದಲ್ಲಿ ಜಾತಿಗಳಿಲ್ಲ ಆದರೆ ಸರ್ಕಾರ ಜಾತಿ ಗುರುತಿಸಿ   ಕೇಟಗರಿ -1, ಕೇಟಗರಿ-2 ಮಾಡಿದೆ ಎಂದು ವಿಷಾಧಿಸಿದರು.

 
ನಮ್ಮ ಸಮುದಾಯದವರು ಸಹ ಯಾರು ವಿಧಾನಸೌಧಕ್ಕೆ ಹೋಗಿಲ್ಲ  ಸಮಸ್ಯೆಗಳನ್ನು ಹೇಳಿಕೊಳ್ಳಲಿಕ್ಕೆ ಆಗುತ್ತಿಲ್ಲ.ಕೆಲವು ಕಡೆ ನಮ್ಮ ಸಮುದಾಯದವರಿಗೆ ವಸತಿ ಸೌಕರ್ಯಗಳಿಲ್ಲ. ಮೂಲಭೂತ ಸೌಕರ್ಯ ಕೊರತೆ ಗಳನ್ನು ಅನುಭವಿಸುತ್ತಿದ್ದೇವೆ.ಆದ್ದರಿಂದ ವಿಶೇಷ ಯೋಜನೆಯಡಿ ನಮ್ಮ ಸಮುದಾಯಕ್ಕೆ ಒದಗಿಸಬೇಕು. ನಮ್ಮ ಸಮುದಾಯದವರು ಶಿಕ್ಷಣವಂತರಾಗಬೇಕು ಇಲ್ಲದೇ ಹೋದರೆ ನಾವು ಏನು ಮಾಡಲಿಕ್ಕೆ ಆಗುವುದಿಲ್ಲ. ಸಮಪಾಲು. ಸಮಬಾಳು ಎಂದು ಹೇಳುತ್ತಾರೆ ಆದರೆ ನಮಗೆ ಏನೂ ಸಿಕ್ಕಿಲ್ಲ..

ನಮ್ಮ ಸಮುದಾಯದ ಕಾರ್ಯಕ್ರಮಗಳಿಗೆ ಮುಖಂಡರನ್ನು ಆಹ್ವಾನಿಸುತ್ತೇವೆ, ಆದರೆ ಅವರು ಯಾರು ಸಹ ಬರುವುದಿಲ್ಲ.ಏಕೆಂದರೆ ನಮ್ಮ ಸಮುದಾಯದಿಂದ ಅವರಿಗೆ ಏನು ಆಗುವುದಿಲ್ಲ ಎಂಬ ತಾತ್ಸಾರ ಭಾವನೆ ಬಂದಿದೆ ಎಂದರು.
ಅಲ್ಪಸಂಖ್ಯಾತ ಕಲ್ಯಾಣ ನಿಧಿಯಲ್ಲಿ ನಮ್ಮ ಸಮುದಾಯಕ್ಕೆ ಶೇ. 25%ರಷ್ಟು ಅನುದಾನವನ್ನು ನಿಗದಿ ಮಾಡ ಬೇಕು, ಎರಡು ವರ್ಷ ಕಳೆದರೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿಕ್ಕೆ ಆಗಿಲ್ಲ..

ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿಕ್ಕೆ ಆಗಿಲ್ಲ.ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಘುಮೂರ್ತಿರವರಲ್ಲಿ  ನವೆಂಬರ್ -20 ರೊಳಗೆ ಮುಖ್ಯಮಂತ್ರಿ ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿಕ್ಕೆ ಅವಕಾಶ ಮಾಡಿ ಕೊಡಬೇಕೆಂದು ವಿನಂತಿ ಮಾಡಿ ನಮ್ಮ ಸಮುದಾಯ ಯಾವುದೇ ಕಾರಣಕ್ಕೂ ಬೀದಿಗೆ ಇಳಿಯುವುದಿಲ್ಲ. ನಾವು ಶಾಂತಿ ಪ್ರಿಯರು. ನಮ್ಮನ್ನು ಕಡೆಗಣಿಸಬೇಡಿ ಎಂದರು. 


ಸಮಾವೇಶದ ಸಾನಿದ್ಯವನ್ನು ಡಾ,ಬಸವಕುಮಾರ ಶ್ರೀಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರಾದ ರಘುಮೂರ್ತಿ,ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ವಕ್ರ್ವನ ಬೋರ್ಡನ ಮಾಜಿ ಅಧ್ಯಕ್ಷರಾದ ಅನ್ವರ್ ಬಾಷಾ, ನಗರಾಭೀವೃದ್ದಿ ಪ್ರಾದಿಕಾರದ ಅಧ್ಯಕ್ಷರಾದ ತಾಜ್ ಪೀರ್, ಜಿಲ್ಲಾಧ್ಯಕ್ಷರಾದ ರಷೀದ್ ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸಲೀಮಾ, ರಾಜ್ಯ ಉಪಾಧ್ಯಕ್ಷರಾದ ಹಾಜಿ ಜೆ.ಡಿ.ನಡಾಫ್, ಮೌಲಾಸಾಬ್ ಬೆಂಡಿಗೇರಿ, ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲಿಂ ನಾಗ್ತೆ, ಕೋಶಾಧ್ಯಕ್ಷರಾದ ಶಹಾಬುದ್ದೀನಸಾಬ್, ರಾಜ್ಯ ಕೋರ್ ಕಮಿಟಿ ಸದಸ್ಯರಾದ ದಾದಾಖಲಂದರ್, ಸಹ ಕಾರ್ಯದರ್ಶೀ ಲಾಲಾಸಾಬ ಸಧಾಫ್, ಸಂಘಟನಾ ಕಾರ್ಯದರ್ಶಿ ಮುದಕವಿ, ಪ್ರೋ.ಸನಾವುಲ್ಲಾ ಮೆಹಬೂಬ್ ಅಲಿ ಶ್ರೀಮತಿ ಶಬಾನಾ ಸೇರಿದಂತೆ ಇತರರು ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಕೀಲರ ಸಮಾವೇಶವನ್ನು ನಡೆಸಲಾಯಿತು.

Views: 78

Leave a Reply

Your email address will not be published. Required fields are marked *