ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಲಿಂ.ಪಂ.ಪಂಚಾಕ್ಷರ ಗವಾಯಿಗಳ ೮೦ನೇ ಹಾಗೂ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ೧೪ನೇ ಪುಣ್ಯ ಸ್ಮರಣೋತ್ಸವ ಮತ್ತು ಗಣನೀಯ ಸೇವಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಚಿತ್ರದುರ್ಗ ಜು.೦೧ : ದೇಶದ ಆಯಾ ಭಾಗದಲ್ಲಿ ದಾರ್ಶನಿಕರು ಬಹು ದೊಡ್ಡ ಕ್ರಾಂತಿಯನ್ನು ಮಾಡಿದ್ದಾರೆ. ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ್ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಆಪಾರವಾದ ಸಾಧನೆಯನ್ನು ಮಾಡಿದ್ದಾರೆ. ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಸಂಗೀತ ಲೋಕದಲ್ಲಿ ಭಾರತದ ಹಿಮಾಲಯದೆತ್ತರಕ್ಕೆ ಕೊಂಡ್ಯೂದಿದ್ದಾರೆ. ಒಳ್ಳೆಯ ಗುರುವಿಗೆ ಓಳ್ಳೆಯ ಶಿಷ್ಯ ಲಭ್ಯವಾದರೆ ಯಾವ ಮಟ್ಟಕ್ಕೆ ಆತ ದಾರ್ಶನಿಕನಾಗುತ್ತಾನೆ ಎಂಬುದಕ್ಕೆ ಈ ಇಬ್ಬರು ಗವಾಯಿಗಳು ಸಾಕ್ಷಿಯಾಗಿದ್ದಾರೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ನಗರದ ಹೊಳಲ್ಕೆರೆ ರಸ್ತೆಯ ಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಲಿಂ.ಪಂ.ಪಂಚಾಕ್ಷರ ಗವಾಯಿಗಳ ೮೦ನೇ ಹಾಗೂ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ೧೪ನೇ ಪುಣ್ಯ ಸ್ಮರಣೋತ್ಸವ ಮತ್ತು ಗಣನೀಯ ಸೇವಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಪುಟ್ಟರಾಜ್ ಗವಾಯಿಗಳ ಶಿಷ್ಯ ವೃಂದ ನಮ್ಮ ಚಿತ್ರದುರ್ಗದಲ್ಲಿ ಇರುವುದರಿಂದ ಅವರ ಸ್ಮರಣೆಯ ಕಾರ್ಯಕ್ರಮ ನಡೆಯುತ್ತಿದೆ.ಹಾನಗಲು ಕುಮಾರಸ್ವಾಮಿಯವರಿಗೆ ಪಂಚಾಕ್ಷರಿ ಗವಾಯಿಗಳು ಶಿಷ್ಯರಾಗಿ ಸಿಕ್ಕರೆ ಇದೇ ಪಂಚಾಕ್ಷರಿ ಗವಾಯಿಗಳಿಗೆ ಪುಟ್ಟರಾಜ್ ಗವಾಯಿಗಳು ಶಿಷ್ಯರಾಗಿ ಸಿಕ್ಕಿದ್ದಾರೆ. ಇಬ್ಬರು ಕೂಡ ಹಾನಗಲು ಕುಮಾರಸ್ವಾಮಿ ಯವರು ಹಾಕಿ ಕೊಟ್ಟ ಮಾರ್ಗದರ್ಶನದ ಮೂಲಕ ನಡೆದಿರುವ ಪರಿಣಾಮವಾಗಿ ಇಂದು ನಡೆಯುವ ವೀರಶ್ವರ ಪುಣ್ಯಾಶ್ರಮದಲ್ಲಿ ಜಾತ್ಯಾತೀತವಾಗಿ ಕಾರ್ಯಕ್ರಮ ನಡೆಯುತ್ತಿದೆ. ನಾವೆಲ್ಲರು ಯಾವ ಸಾಧನೆಯನ್ನು ಮಾಡಲು ಆಗಿಲ್ಲ ಆದರೆ ದೃಷ್ಟಿ ಇಲ್ಲದವರು ಈ ನೆಲದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ ಇವರನ್ನು ಪಡೆದ ಸಂಗೀತ ಕ್ಷೇತ್ರ ಪಾವನವಾಗಿದೆ ಎಂದರು.
ಭಾರತ ಸರ್ಕಾರ ಪಂಚಾಕ್ಷರ ಗವಾಯಿಗಳನ್ನು ಗುರುತಿಸಲಿಲ್ಲ ಆದರೆ ಇವರ ಶಿಷ್ಯರಾದ ಪುಟ್ಟರಾಜ್ ಗವಾಯಿಗಳಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡುವುದರ ಮೂಲಕ ಗೌರವಿಸಿದೆ. ಇದು ಸಂಗೀತ ಕ್ಷೇತ್ರಕ್ಕೆ ನೀಡಿದ ಬಹು ದೊಡ್ಡ ಕಾಣಿಕೆಯಾಗಿದೆ. ಇಂದಿನ ದಿನದಲ್ಲಿ ಸಮಾಜದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡಿರುವುದು ಸ್ವಾಗತಾರ್ಹವಾಗಿದೆ. ಇವರ ಸೇವೆ ಸಮಾಜಕ್ಕೆ ಮತ್ತಷ್ಟು ಸಿಗಲಿ ಎಂದು ಆಶಿಸಿದ ಶ್ರೀಗಳು, ಚಿತ್ರದುರ್ಗದಲ್ಲಿ ಹಲವಾರು ರೀತಿಯ ಸಾಧಕರಿದ್ದಾರೆ ಅವರಿಗೆ ಉತ್ತಮ ರೀತಿಯ ಸಹಕಾರವನ್ನು ನೀಡಬೇಕಿದೆ ಎಂದು ಶ್ರೀಗಳು ತಿಳಿಸಿದರು.
ಚಿತ್ರದುರ್ಗದಲ್ಲಿ ಸಣ್ಣ-ಪುಟ್ಟ ಕಾರ್ಯಕ್ರಮಗಳಿಗೆ ಸೈಟ್‌ಬಾಬಣ್ಣ ರವರು ಸಹಕಾರ ನೀಡಿದ್ದಾರೆ, ಈ ಕಾರ್ಯಕ್ರಮದ ನೆಪದಲ್ಲಿ ನಮಗೆ ಬಂದ ಡಾಕ್ಟರೇಟ್ ಪದವಿಯ ಸಂಭ್ರಮ ಮಾಡಿದ್ದಾರೆ. ನಮ್ಮ ಸಮಾಜದಲ್ಲಿ ಉತ್ತಮವಾದ ಕೆಲಸವನ್ನು ಮಾಡುವವರು ಬರಬೇಕಿದೆ ಇಂತಹ ಸಂಖ್ಯೆ ಹೆಚ್ಚಾಗಬೇಕಿದೆ. ಚಿತ್ರದುರ್ಗದಲ್ಲಿ ಕೊಡುಗೈ ದಾನಿಗಳ ಸಂಖ್ಯೆ ಹೆಚ್ಚಾಗಿದೆ ಅವರನ್ನು ಬಳಸಿಕೊಳ್ಳಬೇಕಿದೆ. ಚಿತ್ರದುರ್ಗದಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಸಹಾ ಜನತೆ ತಂಬು ಹೃದಯದ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.
ಮುಂದಿನ ದಿನದಲ್ಲಿ ಗಾನಯೋಗಿ ಸಂಗೀತ ಬಳಗಕ್ಕೆ ನಮ್ಮಿಂದಲೂ ಸಹಾ ಸಹಕಾರ, ಸಹಾಯ ಸಿಗಲಿದೆ. ಚಿತ್ರದುರ್ಗ ಕಲೆ,ಕ್ರೀಡೆ ಸಾಹಿತ್ಯಕ್ಕೆ ಹೆಸರಾಗಿದೆ,ಇದಕ್ಕೆ ಪ್ರೋತ್ಸಾಹ ನೀಡಬೇಕಿದೆ. ಮನೆಯಲ್ಲಿರುವ ಜನತೆಗೆ ಗಾನಯೋಗಿ ಸಂಗೀತದ ಮೂಲಕ ನಿಮ್ಮ ಒಳಗಡೆ ಇರುವ ಪ್ರತಿಭೆಯನ್ನು ಆನಾವರಣ ಮಾಡಲಾಗಿದೆ. ಮುಂದಿನ ದಿನದಲ್ಲಿ ನಮ್ಮಿಂದ ಯಾವುದೇ ಕಾರ್ಯಕ್ರಮವಾದರೂ ಸಹಾ ಅದರಲ್ಲಿ ಗಾನಯೋಗಿ ಸಂಗೀತ ಬಳಗಕ್ಕೆ ಒಂದು ಕಾರ್ಯಕ್ರಮ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಶ್ರೀಗಳು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ಎಂ.ತೋಟಪ್ಪ ಉತ್ತಂಗಿ ವಹಿಸಿದ್ದರು. ಕಲ್ಬುರ್ಗಿಯ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಮ್ಮ ರುದ್ರಪ್ಪ, ಡಿ.ಎಸ್.ಸುರೇಶ್ ಬಾಬು, ನಿವೃತ್ತ ಪ್ರಚಾರ್ಯರಾದ ಸಿ.ಎಂ. ಚಂದ್ರಪ್ಪ, ಶ್ರೀ ಗಾನಯೋಗಿ ಸಂಗೀತ ಬಳಗದ ಗೌರವಾಧ್ಯಕ್ಷರಾದ ಎಸ್.ವಿ.ಗುರುಮೂರ್ತಿ, ಉಪಾಧ್ಯಕ್ಷರಾದ ಎಲ್.ಎಸ್.ಚಿನ್ಮಯಾನಂದ, ಕಾರ್ಯದರ್ಶಿ ನಂದೀಶ್, ಉಪ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಮಾ ರಾಜಶೇಖರ್ ಭಾಗವಹಿಸಲಿದ್ದಾರೆ. ಶ್ರೀಮತಿ ಪ್ರೇಮ ಬಾಲಚಂದ್ರಪ್ಪ ಮತ್ತು ಶ್ರೀಮತಿ ನಳಿನಾ ರವರಿಂದ ಉಪನ್ಯಾಸ ನೇರವೇರಿತು.

ಇದೇ ಸಂದರ್ಭದಲ್ಲಿ ಗಣನೀಯ ಸೇವಾ ಸಾಧಕರಾದ ಜಿಲ್ಲಾ ಆಸ್ಪತ್ರೆಯ ಶುಶ್ರೂಷಕರಾದ ಎಂ.ಮಲ್ಲಣ್ಣ, ಲಿಂಗನ ಬಂಡಿಯ ತಬಲವಾದಕರಾದ ಸಿದ್ದೇಶ್ ಕುಮಾರ್ ಹಾಗೂ ಕೀ ಬೋರ್ಡ ವಾದಕರಾದ ಸಾಯಿಪ್ರಸಾದ್ ರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗಾನಶ್ರೀಯವರು ಭರತನ್ಯಾಟವನ್ನು ನಡೆಸಿಕೊಟ್ಟರು.

ಇದಕ್ಕೂ ಮುನ್ನಾ ನಗರದ ನೀಲಕಂಠೇಶ್ವರ ದೇವಾಲಯದಿಂದ ಉಭಯ ಶ್ರೀಗಳ ಭಾವಚಿತ್ರದೊಂದಿಗೆ ಪುಷ್ಪಾಲಂಕೃತ ಬೆಳ್ಳಿ ರಥದಲ್ಲಿ ಹೊಳಲ್ಕೆರೆ ರಸ್ತೆಯ ಮೂಲಕ ಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪ ತಲುಪಿತು.ಗಾನಯೋಗಿ ಬಳಗದವರಿಂದ ಪ್ರಾರ್ಥನೆ ಸಲ್ಲಿಸಿದರೆ, ಶ್ರೀಮತಿ ಉಮಾ ರಮೇಶ್ ಸ್ವಾಗತಿಸಿದರು, ನಿವೃತ್ತ ಉಪನ್ಯಾಸಕರಾದ ಜ್ಞಾನಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವರಾಜ ಕಟ್ಟಿ ವಂದಿಸಿದರು, ಶ್ರೀಮತಿ ರಶ್ಮಿ, ಶ್ರೀಮತಿ ವಿದ್ಯಾ ಪ್ರತಾಪ್ ಕಾರ್ಯಕ್ರಮ ನಿರೂಪಿಸಿದರು.