ಕಾಂಗ್ರೆಸ್ ಸರ್ಕಾರ, ಬೆಲೆ ಏರಿಕೆ ಸರ್ಕಾರ : ಹನುಮಂತೇಗೌಡ ಆಕ್ರೋಶ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ನ. 10ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದಾಗಿನಿಂದಲೂ ಜನಸಾಮಾನ್ಯರ ಗೋಳು ಕೇಳುವವರಿಲ್ಲ ಆಡು ಮುಟ್ಟಲಾರದ ಸೊಪ್ಪಿಲ್ಲ ಸಿದ್ದರಾಮಯ್ಯ ಬೆಲೆ ಏರಿಸಲಾರದ ವಸ್ತುಗಳಿಲ್ಲ ಆ ರೀತಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಈಗ ನಂದಿನಿ ತುಪ್ಪ ಮೊಸರು ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ಜನರು ಹೈರಾಣಾಗಿದ್ದಾರೆ ಎಂದು ಬಿಜೆಪಿ ಮುಖಂಡರಾದ ಹನುಮಂತೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸರ್ಕಾರದ ಸಚಿವ ಪ್ರಿಯಾಂಕ ಖರ್ಗೆ ಅವರ ಮಾತು ಕೇಳಿ ಆರ್‍ಎಸ್‍ಎಸ್ ಗಮನದಲ್ಲಿಟ್ಟುಕೊಂಡು ಸರ್ಕಾರಿ ಜಾಗದಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಪರವಾನಿಗೆ ಪಡೆಯುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದರು. ಆಗ ಸ್ಥಳೀಯ ನ್ಯಾಯಾಲಯವು ಆದೇಶವನ್ನು ತಡೆ ಹಿಡಿದನ್ನು ಇಂದು ರಾಜ್ಯ ಸರ್ವೋಚ್ಚ ನ್ಯಾಯಾಲಯವು ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಮಜಾಗೊಳಿಸಿದ್ದು ಇದರಿಂದ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಮುಂದೆ ಸುಪ್ರೀಂನಲ್ಲಿ ಹೋದರೂ ಸಹ ರಾಜ್ಯ ಸರ್ಕಾರದ ಮೇಲ್ಮಮನವಿಯನ್ನು ವಜಾ ಆಗುವುದು ನಿಶ್ಚಿತ ಎಂದು ನಮಗೆಲ್ಲರಿಗೂ ವಿಶ್ವಾಸ ಇದೆ ಎಂದು ಹನುಮಂತೇಗೌಡ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಕೋಮು ಗಲಭೆಗಳು ನಡೆಸುವಂತಹ ಸಮಾಜ ಘಾತುಕ ಶಕ್ತಿಗಳನ್ನು ನಿಷೇಧಿಸುವುದನ್ನು ಅವರು ನಮ್ಮ ಬ್ರದರ್ಸ್ ಎಂದು ಹೇಳಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ವೈಯಕ್ತಿಕ ಪ್ರತಿಷ್ಠೆಗಾಗಿ ಇಂತಹ ನಾಟಕಗಳನ್ನು ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇನ್ನಾದರೂ ಸರ್ಕಾರ ಇಂತಹ ದುಸ್ಸಾಹಸಗಳಿಗೆ ಕೈ ಹಾಕದೆ ಬುದ್ದಿ ಕಲಿತು ಕೆಟ್ಟ ವಿಚಾರಗಳನ್ನು ಬಿಟ್ಟು ಸರ್ಕಾರ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂದು ಸರ್ಕಾರಕ್ಕೆ ಹನುಮಂತೇಗೌಡ ಎಚ್ಚರಿಸಿದ್ದಾರೆ.ರಾಜ್ಯದ ಆರ್‍ಎಸ್‍ಎಸ್ ಹಾಗೂ ಸಂಘ ಸಂಸ್ಥೆಗಳ ಮೇಲೆ ವಿಶೇಷವಾಗಿ ನೂರು ವರ್ಷಗಳ ಇತಿಹಾಸವುಳ್ಳ ಸಮಾಜಮುಖಿ ಕೆಲಸಯನ್ನು ಮಾಡುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಪ್ರಯತ್ನಿಸುತ್ತಿದ್ದು ಸಂಘವನ್ನು ನಿಷೇಧಿಸಲು ಪ್ರಯತ್ನಿಸುತ್ತಿದ್ದು ಈ ಸರ್ಕಾರ ಇಂದಿಗೂ ಸಫಲವಾಗುವುದಿಲ್ಲ ಎಂದು ಹೇಳಿದ್ದಾರೆ.

Views: 9

Leave a Reply

Your email address will not be published. Required fields are marked *