ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 28
ದೇಶ ಸ್ವಾತಂತ್ರ್ಯವಾದ ನಂತರ ದೇಶ ವಿಭಜನೆಗೆ ಕಾಂಗ್ರೆಸ್ ಕಾರಣವೆಂದು ಹಲವಾರು ಜನ ನಂಬಿದ್ದಾರೆ ಆದರೆ ದೇಶ ವಿಭಜನೆಗೆ ಕಾಂಗ್ರೆಸ್ ಕಾರಣವಲ್ಲ, ಅದಕ್ಕೆ ಕಾರಣ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾ ಸಭಾ ಕಾರಣ ಇದರ ಬಗ್ಗೆ ನಮ್ಮವರು ತಿಳಿದುಕೊಂಡು ವಿಭಜನೆಗೆ ಕಾಂಗ್ರೆಸ್ ಕಾರಣ ಎನ್ನುವವರಿಗೆ ಸೂಕ್ತವಾದ ಉತ್ತರವನ್ನು ನೀಡುವಂತೆ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಪದಾಧಿಕಾರಿಗಳಿಗೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್ಪೀರ್ ಕರೆ ನೀಡಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಹಾತ್ಮಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಕಾಂಗ್ರೆಸ್ ಸ್ಥಾಪನೆಯಾಗಿ ಇಂದಿಗೆ 140 ವರ್ಷವಾಗಿದೆ, ದೇಶವನ್ನು ಬ್ರಟಿಷರು ಆಳ್ವಿಕೆಯನ್ನು ನಡೆಸುತ್ತಿದ್ದಾಗ ಅದರಿಂದ ಮುಕ್ತವಾಗಲು ನಮ್ಮ ಮಹಾನ್ ನಾಯಕರುಗಳು ಕಾಂಗ್ರೆಸ್ನ್ನು ಹುಟ್ಟು ಹಾಕಿದರು, ಇದರ ಮೂಲಕ ನಮ್ಮ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತರನ್ನಾಗಿ ಮಾಡಿದರು. ನಮ್ಮ ದೇಶಕ್ಕೆ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ನಮ್ಮಲ್ಲಿನ ಒಳಜಗಳ, ಒಗ್ಗಟ್ಟು ಇಲ್ಲದಿರುವುದು, ಒಬ್ಬರನ್ನು ಕಂಡರೇ ಇನ್ನೊಬ್ಬರಿಗೆ ಆಗದಿರುವುದು ಈ ರೀತಿಯಾಗಿ ಹಲವಾರು ಪ್ರಾಂತ್ಯಗಳಲ್ಲಿ ಕಂಡು ನಮ್ಮಲ್ಲಿ ಒಡಕನ್ನು ಮೂಡಿಸಿ ದೇಶವನ್ನು ತಮ್ಮ ಕೈವಶ ಮಾಡಿಕೊಂಡು ಸುಮಾರು 200 ವರ್ಷಗಳ ಕಾಲ ಆಳ್ವಿಕೆಯನ್ನು ನಡೆಸಿದರು. ಕಾಂಗ್ರೆಸ್ ತ್ಯಾಗ ಬಲಿದಾನದ ಮೂಲಕ ಈ ದೇಶವನ್ನು ಬ್ರಟಿಷರ ದಾಸ್ಯದಿಂದ ಮುಕ್ತಗೊಳಿಸಿದರು. ದೇಶ ವಿಭಜನೆಗೆ ಕಾಂಗ್ರೆಸ್ ಕಾರಣವಲ್ಲಿ ಇದಕ್ಕೆ ಅಂದಿನ ಮುಸ್ಲಿಂ ಲೀಗ್ ಹಾಗೂ ಹಿಂದೂ ಮಹಾ ಸಭಾ ಕಾರಣವಾಗಿದೆ ಎಂದರು.
ದೇಶ ಸ್ವಾತಂತ್ರ್ಯವಾದರೂ ಸಹಾ ಅಂದು ದೇಶದಲ್ಲಿ 256 ರಾಜ್ಯಗಳು ತಮ್ಮ ಆಳ್ವಿಕೆಯನ್ನು ನಡೆಸುತ್ತಿದ್ದರು ಇವರ ಜೊತೆಯಲ್ಲಿ ಮಾತುಕತೆಯನ್ನು ಆಡುವುದರ ಮೂಲಕ ಎಲ್ಲರನ್ನು ಒಂದುಗೂಡಿಸಿದ ಕೀರ್ತಿ ಸರ್ದಾರ ವಲ್ಲಬಾಯಿ ಪಟೇಲ್ಗೆ ಸಲುತ್ತದೆ, ಅವರ ಪ್ರಯತ್ನದಿಂದ ದೇಶ ಒಂದಾಗಿ ಭಾರತ ಎಂದು ನಾಮಕರಣ ಮಾಡಲಾಯಿತು. ನಮ್ಮಲ್ಲಿ ಹಲವಾರು ಜಾತಿ, ಧರ್ಮ, ಭಾಷೆ. ವಿಭಿನ್ನವಾದ ಸಂಸ್ಕøತಿಗಳು ಇವೆ ಇವುಗಳನ್ನು ಎಲ್ಲಾ ಒಂದೂಗೂಡಿಸಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚನೆ ಮಾಡಿ ನಮಗೆ ನೀಡಿದರು ಇದರ ಅಡಿಯಲ್ಲಿ ನಾವುಗಳು ಇಂದು ಜೀವನವನ್ನು ನಡೆಸಲಾಗುತ್ತಿದೆ. ಸಂವಿಧಾನದಲ್ಲಿ ಎಲ್ಲರಿಗೂ ಸಹಾ ಸಮಾನತೆ, ಸಹಬಾಳ್ವೆಯನ್ನು ಕಲ್ಪಿಸಿದೆ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಹಲವಾರು ಕೂಡುಗೆಯನ್ನು ನೀಡಿದೆ, ಇದ್ದಲ್ಲದೆ ನೀರಾವರಿಯನ್ನು ನಿರ್ಮಾಣ ಮಾಡುವುದರ ಮೂಲಕ ಭೂಮಿಯಲ್ಲಿ ಹಸಿರು ಕ್ರಾಂತಿಯನ್ನು ಮಾಡಿದರು. ಇದರೊಂದಿಗೆ ಶಿಕ್ಷಣಕ್ಕಾಗಿ ವಿಶ್ವ ವಿದ್ಯಾನಿಲಯಗಳನ್ನು ಸ್ಥಾಪನೆ ಮಾಡಿ ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು.
ಚಿತ್ರದುರ್ಗ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಕಾಂಗ್ರೆಸ್ ಅಂದಿನ ದಿನಮಾನದಲ್ಲಿ ಬ್ರಿಟಿಷರ ವಿರುದ್ದ ಹೋರಾಟವನ್ನು ಮಾಡುವುದರ ಮೂಲಕ ದೇಶವನ್ನು ಅವರಿಂದ ಬಿಡಿಸಿಕೊಟ್ಟಿದೆ, ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮಾಡದಿದ್ದವರು ಇಂದು ನಾವು ಹೋರಾಟವನ್ನು ಮಾಡಿರುವುದಾಗಿ ಬಿಂಬಿಸುತ್ತಿದ್ದಾರೆ. ಧರ್ಮ, ಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತುವುದರ ಮೂಲಕ ಅವರ ರಾಜಕೀಯ ಬೇಳೇಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಎಲ್ಲಾ ಜನಾಂಗದ ಹಿತಾಸಕ್ತಿಯನ್ನು ಕಾಯುತ್ತಿದೆ ಎಂದರು.
ಕೆಪಿಸಿಸಿ ವಕ್ತಾರರು, ಬಳ್ಳಾರಿ ಜಿಲ್ಲೆಯ ಉಸ್ತುವಾರಿಗಳಾದ ಬಾಲರಾಜ್ ಯಾದವ್ ಮಾತನಾಡಿ, ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ಬಂದ ಬ್ರಟಿಷರ್ ನಮ್ಮಲ್ಲಿನ ಆಸಂಘಟಿತೆ, ಒಡಕು, ಅನಕ್ಷರತೆ, ಶಿಕ್ಷಣದ ಕೂರತೆಯನ್ನು ಕಂಡು ನಮ್ಮಲ್ಲಿ ಬಿರಕನ್ನು ಮೂಡಿಸಿ ದೇಶದಲ್ಲಿ ಅಧಿಕಾರವನ್ನು ಹಿಡಿದು ಹಲವಾರು ವರ್ಷಗಳ ಕಾಲ ಅಧಿಕಾರವನ್ನು ನಡೆಸಿದರು. ನಮ್ಮ ಮೇಲಿನ ದಬ್ಬಾಳಿಕೆಯನ್ನು ಕಂಡ ಹಲವಾರು ಜನತೆ ಇದನ್ನು ವಿರೋಧಿಸಿ ಕಾಂಗ್ರೆಸ್ ಸಂಸ್ಥೆಯನ್ನು ಸ್ಥಾಪನೆ ಮಾಡಿ ಬ್ರಟಿಷರ ವಿರುದ್ದ ಹೋರಾಟವನ್ನು ಪ್ರಾರಂಭ ಮಾಡಿದರು. ಇದರ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಅಂದು ಬ್ರಟಿಷರ ವಿರುದ್ದ ಕಾಂಗ್ರೆಸ್ ಹೋರಾಟವನ್ನು ನಡೆಸಿದರೆ ಇಂದು ಬಿಜೆಪಿಯ ವಿರುದ್ದ ಹೋರಾಟವನ್ನು ನಡೆಸಬೇಕಿದೆ. ಬಿಜೆಪಿ ಧರ್ಮ, ಜಾತಿ ಜಾತಿಗಳ ಮಧ್ಯೆ ಕಿತ್ತಾಟವನ್ನು ತಂದಿಟ್ಟು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದರೆ ಬಿಜೆಪಿ ಪ್ರಜಾಪ್ರಭುತ್ವದ ಅಳಿವಿಗಾಗಿ ಹೋರಾಟವನ್ನು ನಡೆಸುತ್ತಿದೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ. ಪಿ. ಸಂಪತ್ ಕುಮಾರ್, ಮೈಲಾರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನಿಗೌಡ, ಸಾಧಿಕ್, ಮದುಗೌಡ, ಎಸ್.ಸಿ.ಘಟಕದ ಅಧ್ಯಕ್ಷ ಮಂಜುನಾಥ್, ಖುದ್ದುಸ್ ರಾಮನಾಯ್ಕ್, ಲಕ್ಷ್ಮೀಕಾಂತ, ರಫಿ, ಯತೀಶ್ ಸುಂದಿಪ್ ಮುನಿರಾಜ್, ಸರ್ದಾರ್ ಸೇರಿದಂತೆ ಇತರರ ಭಾಗವಹಿಸಿದ್ದರು.
Views: 19