
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 24 ಚಿತ್ರದುರ್ಗ ನಗರದ ಬಿಡಿ ರಸ್ತೆಗೆ ನರೇಂದ್ರ ಮೋದಿಯವರ ಹೆಸರು ಹಾಗೂ ಮುಖ್ಯವೃತ್ತಕ್ಕೆ “ಶ್ರೀ ನರೇಂದ್ರ ಮೋದಿ ವೃತ್ತ” ಎಂದು ನಾಮಕರಣ ಇಡುವುದಕ್ಕೆ ಕಾಂಗ್ರೆಸ್ ಓಬಿಸಿ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ನಿನ್ನೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರಾದ
ಜೆ.ಶಶಿಧರ್ರವರು ಕಾಶ್ಮೀರದ ಪಹಲ್ಯಾಮ್ ಕರಾಳ ಘಟನೆಗೆ ಪ್ರತೀಕರವಾಗಿ ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳು
ಆಪರೇಷನ್ ಸಿಂಧೂರ ಎಂಬ ಕಾಯಾಚರಣೆಯನ್ನು ಯಶಸ್ವಿಯಾಗಿ ನಡೆಸಿ, ಶತ್ರು ದೇಶವನ್ನು ಸದೆಬಡೆದು ರಾಜತಾಂತ್ರಿಕವಾಗಿ
ಹಾಗೂ ಯುದ್ಧ ಮೂಲಕವಾಗಿ ಇಡೀ ವಿಶ್ವಕ್ಕೆ ಭಾರತ ಕೀರ್ತಿಯನ್ನು ಮತ್ತು ಸೇವೆಯ ಶಕ್ತಿಯನ್ನು ತಿಳಿಸಿ ಭಾರತ ಕೀರ್ತಿ
ಪತಾಕೆಯನ್ನು ಹಾರಿಸಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಹೆಸರನ್ನು ಬಿ.ಡಿ.ರಸ್ತೆಗೆ “ಶ್ರೀ ನರೇಂದ್ರ ಮೋದಿ ರಸ್ತೆ”
ಎಂದು ಹಾಗೂ ಮುಖ್ಯವೃತ್ತಕ್ಕೆ “ಶ್ರೀ ನರೇಂದ್ರ ಮೋದಿ ವೃತ್ತ” ಎಂದು ನಾಮಕರಣ ಮಾಡುವಂತೆ ಸಭೆಯಲ್ಲಿ ಅಜೇಂಡವನ್ನು
ತರಲಾಗಿತ್ತು. ಇದಕ್ಕೆ ಸಭೆ ಸಮ್ಮತಿಯನ್ನು ಸೂಚಿಸಿತ್ತು, ಆದರೆ ಮುಖ್ಯ ರಸ್ತೆಗೆ ಬಹು ಕಾಲದಿಂದಲೂ ಬಿ.ಡಿ.ರಸ್ತೆ ಎಂದು
ಕರೆಯಲಾಗುತ್ತಿತ್ತು ಅದಕ್ಕೆ ಪ್ರತ್ಯೇಕವಾಗಿ ಯಾವ ಹೆಸರು ಸಹಾ ಇರಲ್ಲಿಲ್ಲ ಅಲ್ಲದೆ ಮುಖ್ಯ ವೃತ್ತಕ್ಕೆ ಗಾಂಧಿ ವೃತ್ತ ಅಥವಾ
ಸಂತೇಪೇಟೆ ಎಂದು ಕರೆಯಲಾಗುತ್ತಿತ್ತು ಅಲ್ಲದೆ ಜನರ ಬಾಯಿಯಲ್ಲಿಯೂ ಸಹಾ ಅದೇ ಮುಂದುವರೆದಿತ್ತು ಆದರೆ ಈಗ ಹೊಸದಾಗಿ
ಹೆಸರನ್ನು ಇಡುವ ಅಗತ್ಯ ಇರಲಿಲ್ಲ ಎಂದಿದ್ದಾರೆ.
ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾಗಾಂಧಿಯವರು ಬಾಂಗ್ಲಾ ದೇಶದ ಮೇಲೆ ಯುದ್ದವನ್ನು ನಡೆಸಿ ಜಯವನ್ನು ತಂದು
ಕೊಟ್ಟಿದ್ದರು ಅಗ ಅವರ ಹೆಸರನ್ನು ಎಲ್ಲಿಯೂ ಸಹಾ ಇಡಲಿಲ್ಲ ಈಗ ಅಮೇರಕದ ಅಧ್ಯಕ್ಷರ ಮಾತು ಕೇಳಿ ಯುದ್ದವನ್ನು ನಿಲ್ಲಿಸಿದ
ವ್ಯಕ್ತಿಯ ಹೆಸರನ್ನು ನಮ್ಮ ನಗರದಲ್ಲಿ ಇಡುವುದು ಸೂಕ್ತವಲ್ಲ ಎಂದಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಇನ್ನೂ ಹಲವಾರು ಕಡೆಯಲ್ಲಿ ಬೀದಿಗಳಿಗೆ ಹೆಸರು ಇಲ್ಲ ಅಂತಹ ಕಡೆಗಳಲ್ಲಿ ಬೇಕಾದರೆ ಮೋದಿಯವರ
ಹೆಸರನ್ನು ಇಡಲಿ, ಆದರೆ ಐತಿಹಾಸಿಕವಾಗಿ ಬಹು ವರ್ಷಗಳಿಂದ ಇದ್ದ ಹೆಸರನ್ನು ಈಗ ದಿಢಿರನೆ ಬದಲಾವಣೆ ಮಾಡುವುದು ಸರಿಯಲ್ಲ
ಈಗ ಇದ್ದ ಹಾಗೇ ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಎನ್.ಡಿ.ಕುಮಾರ್ ನಗರಸಭೆಯ ಪೌರಾಯುಕ್ತರನ್ನು ಆಗ್ರಹಿಸಿದ್ದಾರೆ.