ದೇಹದಲ್ಲಿ ವಿಟಮಿನ್ಸ್ , ಖನಿಜಾಂಶಗಳ ಕೊರತೆ ಕಾಡಿದರೆ ಈ ಆಹಾರಗಳ ಸೇವನೆ ಅತ್ಯಗತ್ಯ…

ದೇಹವು ಸಂಪೂರ್ಣವಾಗಿ ವಿಟಮಿನ್, ಖನಿಜಾಂಶ ಇತ್ಯಾದಿಗಳಿಂದ ಸಮ್ಮಿಲಿತವಾಗಿರುವುದು. ಇವುಗಳು ಸಮ ಪ್ರಮಾಣದಲ್ಲಿ ಇದ್ದರೆ ಆಗ ಯಾವುದೇ ಸಮಸ್ಯೆಗಳು ಆಗದು. ಆದರೆ ಇದರಲ್ಲಿ ಸ್ವಲ್ಪ ಏರುಪೇರಾದರೂ ಆಗ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ದೇಹದಲ್ಲಿ ಯಾವುದೇ ಅಂಶದ ಕೊರತೆಯು ಆಗಿದೆ ಎನ್ನುವುದರ ಲಕ್ಷಣಗಳು ದೇಹದಲ್ಲಿ ಕಾಣಿಸುವುದು. ಅದನ್ನು ಗುರುತಿಸಿಕೊಂಡು ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು. ಇವುಗಳ ಕೊರೆ ನೀಗಿಸಲು ಕೆಲವು ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿಕೊಳ್ಳಿ.

ವಿಟಮಿನ್ ​ಬಿ12 ಕೊರತೆ

  • ವಿಟಮಿನ್ ಬಿ12 ಕಾಡಿದರೆ, ಆಗ ಇದರಿಂದ ನಿಶ್ಯಕ್ತಿ, ಬಳಲಿಕೆ, ಮನಸ್ಥಿತಿ ಬದಲಾವಣೆ ಮತ್ತು ನೆನಪಿನ ಶಕ್ತಿ ಕುಂದುವಿಕೆ ಸಮಸ್ಯೆಯು ಕಾಡಬಹುದು. ಇದನ್ನು ನಿವಾರಣೆ ಮಾಡಲು ಕೆಲವು ಆಹಾರಗಳನ್ನು ಸೇರ್ಪಡೆ ಮಾಡಿಕೊಂಡರೆ ಒಳ್ಳೆಯದು.
  • ಮೊಟ್ಟೆ: ಮೊಟ್ಟೆಯನ್ನು ವಿವಿಧ ರೀತಿಯಿಂದ ಬಳಕೆ ಮಾಡಿಕೊಳ್ಳಬಹುದು ಮತ್ತು ಇದರಲ್ಲಿ ವಿಟಮಿನ್ ಬಿ12 ಉತ್ತಮ ಪ್ರಮಾಣದಲ್ಲಿದೆ.
  • ಪಾಲಕ್ ಸೊಪ್ಪು: ವಿಟಮಿನ್ ಬಿ12 ಅತ್ಯಧಿಕ ಪ್ರಮಾಣದಲ್ಲಿ ಇರುವ ಪಾಲಕವು ಇತರ ಕೆಲವು ಪೋಷಕಾಂಶಗಳನ್ನು ಕೂಡ ಹೊಂದಿದೆ.
  • ಚೀಸ್: ವಿಟಮಿನ್ ಬಿ12 ಪಡೆಯಲು ಡೈರಿ ಉತ್ಪನ್ನವಾದ ಚೀಸ್ ಅನ್ನು ಆಹಾರ ಪದ್ಧತಿಯಲ್ಲಿ ಬಳಸಿದರೆ ಒಳ್ಳೆಯದು. ಇದು ತುಂಬಾ ರುಚಿಕರ ಕೂಡ
  • ಹಾಲು: ನಿಯಮಿತವಾಗಿ ಇದನ್ನು ಪಡೆಯಬೇಕಾದರೆ ಆಗ ಹಾಲನ್ನು ಸೇವನೆ ಮಾಡುವುದು ಅಗತ್ಯ.

ಕಬ್ಬಿಣಾಂಶ ಕೊರತೆ

  • ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದರೆ ಅದಕ್ಕೆ ಅನಿಮಿಯಾ ಅಥವಾ ರಕ್ತಹೀನತೆ ಎಂದು ಕರೆಯುತ್ತಾರೆ.ಇದ್ದ ಕ್ಕಿದಂತೆ ಮೈ ಬೆವರಲು ಶುರುವಾಗುವುದು, ಏನೂ ದೈಹಿಕ ಕೆಲಸ ಮಾಡದಿದ್ದರೂ ಕೂಡ, ಪದೇ ಪದೇ ಆಯಾಸ ಆಗುವುದು, ತಲೆ ಸುತ್ತು ಬರುವುದು, ನಾಲ್ಕು ಹೆಜ್ಜೆ ನಡೆಯಲು ಕೂಡ ಕಷ್ಟವಾಗುವುದು, ಈ ಆರೋಗ್ಯ ಸಮಸ್ಯೆಯ ಪ್ರಮುಖ ಲಕ್ಷಣಗಳು.
  • ಈ ಬಗ್ಗೆ ವೈದ್ಯರು ಹೇಳುವ ಪ್ರಕಾರ, ಯಾವಾಗ ದೇಹದಲ್ಲಿ ಕೆಂಪು ರಕ್ತ ಕಣಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾಗು ತ್ತವೆಯೋ, ಅಂತಹ ಸಂದರ್ಭದಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ಈ ಸಮಸ್ಯೆ ಕಾಣಿಸಿಕೊಂಡ ಮೇಲೆ ಆಹಾರ ಪದ್ಧತಿ ಹೀಗಿರಲಿ
  • ಕಬ್ಬಿಣಾಂಶದ ಪ್ರಮಾಣ ಹೆಚ್ಚಾಗಿರುವ ಕುಂಬಳಕಾಯಿ ಬೀಜಗಳನ್ನು ಸೇವನೆ ಮಾಡಬೇಕು
  • ಅಧಿಕ ಪ್ರಮಾಣದ ಪ್ರೋಟೀನ್, ವಿವಿಧ ಬಗೆಯ ಖನಿಜಾಂಶ ಗಳು, ಕಬ್ಬಿಣಾಂಶ ಹಾಗೂ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನ ಒಳಗೊಂಡಿರುವ ಮೊಟ್ಟೆಯನ್ನು ಸೇವನೆ ಮಾಡಬೇಕು.
  • ಹಸಿರೆಲೆ ತರಕಾರಿಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು.
  • ಅಧಿಕ ಕಬ್ಬಿಣಾಂಶ ಇರುವಂತಹ ಕೇಲ್ ಮತ್ತು ಪಾಲಕ್ ಸೊಪ್ಪನ್ನು ಆಹಾರ ಕ್ರಮದಲ್ಲಿ ಸೇರಿಸಬೇಕು.
  • ಪ್ರತಿದಿನ ಕಪ್ಪು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡಬೇಕು.
  • ಸಸ್ಯಜನ್ಯ ಕಬ್ಬಿಣಾಂಶ ಮತ್ತು ಪ್ರೋಟೀನ್ ಅಂಶ ಒಳಗೊಂಡಿ ರುವ ಬೇಳೆಕಾಳುಗಳನ್ನು ಆಹಾರಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು.

ಮೆಗ್ನೀಸಿಯಮ್ ಕೊರತೆ

  • ದೇಹದಲ್ಲಿ ಮೆಗ್ನೀಸಿಯಮ್ ಅಂಶದ ಕೊರತೆ ಉಂಟಾದರೂ ಕೂಡ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ.
  • ಉದಾಹರಣೆಗೆ ನಿಶ್ಯಕ್ತಿ, ಮಾನಸಿಕ ಆರೋಗ್ಯದ ಸಮಸ್ಯೆ, ಅಸ್ಥಿರಂಧ್ರತೆ ಮತ್ತು ಸ್ನಾಯುಗಳಲ್ಲಿ ಸೆಳೆತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ವಿಶೇಷವಾಗಿ ರಾತ್ರಿ ಮಲಗಿದ ಸಂದರ್ಭದಲ್ಲಿ ಕಾಲಿನಲ್ಲಿ ಸೆಳೆತದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ…
  • ಕೋಕೋ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಇರುವ ಡಾರ್ಕ್ ಚಾಕಲೇಟ್ ನಲ್ಲಿ 64 ಮಿಲಿಗ್ರಾಂ ನಷ್ಟು ಮೆಗ್ನೀಸಿ ಯಮ್ ಅಂಶ ಕಂಡು ಬರುತ್ತದೆ. ಹಾಗಾಗಿ ಮಿತವಾಗಿ ಡಾರ್ಕ್ ಚಾಕಲೇಟ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
  • ಬಾದಾಮಿ ಮತ್ತು ಗೋಡಂಬಿ ಬೀಜಗಳಲ್ಲಿ ಮೆಗ್ನೀಸಿಯಮ್ ಅಂಶ ಯಥೇಚ್ಚವಾಗಿ ಕಂಡು ಬರುವುದರಿಂದ, ಇಂತಹ ಆರೋಗ್ಯಕಾರಿ ಬೀಜಗಳನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು
  • ಪಾಲಕ್ ಸೊಪ್ಪು: ಈ ಹಸಿರೆಲೆ ತರಕಾರಿಯಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಇದೆ ಮತ್ತು ಮೆಗ್ನಿಶಿಯಂ ಕೂಡ ಅತ್ಯಧಿಕ ಪ್ರಮಾಣದಲ್ಲಿದೆ.
  • ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಅಂಶ ಹೆಚ್ಚಾಗಿದೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 37 ಮಿಲಿ ಗ್ರಾಂನಷ್ಟು ಮೆಗ್ನೀಸಿಯಮ್ ಅಂಶವಿದೆ.

ಸತುವಿನ ಕೊರತೆ

  • ಸತುವಿನ ಕೊರತೆಯಿಂದಾಗಿ ಅತಿಸಾರ, ಕೂದಲು ಉದುರುವಿಕೆ, ಪ್ರತಿರೋಧಕ ಶಕ್ತಿ ಕುಗ್ಗುವುದು ಮತ್ತು ಗಾಯಗಳು ಒಣಗುವುದು ನಿಧಾನವಾಗುವುದು. ಈ ಸಮಸ್ಯೆ ಇರುವವರು, ಇಂತಹ ಆಹಾರಗಳನ್ನು ಸೇವಿಸಬೇಕು…
  • ಓಟ್ಸ್: ಇದನ್ನು ಉಪಾಹಾರದಲ್ಲಿ ಬಳಕೆ ಮಾಡಿದರೆ ಸತು ದೇಹಕ್ಕೆ ಸಿಗುವುದು.
  • ಕುಂಬಳಕಾಯಿ ಬೀಜ: ವೈವಿಧ್ಯಮಯವಾಗಿರುವ ಇದನ್ನು ಬಳಕೆ ಮಾಡಿಕೊಂಡರೆ ಆಗ ಸತುವಿನ ಅಂಶವು ಅತ್ಯಧಿಕ ಪ್ರಮಾಣ ದಲ್ಲಿ ಲಭ್ಯವಾಗುವುದು.
  • ಕಡಲೆಕಾಳು: ಇದನ್ನು ವಿವಿಧ ರೀತಿಯ ಖಾದ್ಯಗಳಲ್ಲಿ ಬಳಸಿದರೆ ಆಗ ಸತುವಿನ ಅಂಶವು ದೇಹಕ್ಕೆ ಲಭ್ಯವಾಗುವುದು.
  • ಗೋಡಂಬಿ: ಸತುವಿನ ಅಂಶವು ಉತ್ತಮ ಪ್ರಮಾಣದಲ್ಲಿ ಇರುವ ಮತ್ತೊಂದು ಅದ್ಭುತ ಆಹಾರವೆಂದರೆ ಅದು ಗೋಡಂಬಿ.

ಪೊಟ್ಯಾಸಿಯಮ್ ಕೊರತೆ

  • ಪೊಟ್ಯಾಸಿಯಮ್ ಕೊರತೆಯಾದರೆ ಆಗ ಇದರಿಂದ ಮಲಬದ್ಧತೆ, ಸೆಳೆತ,ದುರ್ಬಲ ಸ್ನಾಯುಗಳು ಮತ್ತು ಅಸಾಮಾನ್ಯ ಹೃದಯಬಡಿತವು ಕಂಡುಬರುವುದು.
  • ಸೇರ್ಪಡೆ ಮಾಡಬೇಕಾದ ಆಹಾರಗಳು
  • ಬಾಳೆಹಣ್ಣು
  • ಪೊಟ್ಯಾಸಿಯಮ್ ದೇಹಕ್ಕೆ ಸಿಗಬೇಕಾದರೆ ಆಗ ನಿಯಮಿತವಾಗಿ ಬಾಳೆಹಣ್ಣು ಸೇವಿಸಿ.
  • ಅವಕಾಡೊ
  • ಮೆಗ್ನೀಸಿಯಮ್ ಜತೆಗೆ ಇದರಲ್ಲಿ ಪೊಟಾಶಿಯಂ ಅಂಶವು ಇದೆ.
  • ಗೆಣಸು
  • ರುಚಿಕರ ಮತ್ತು ಪೋಷಕಾಂಶಗಳು ಇದರಲ್ಲಿ ಸಮೃದ್ಧವಾಗಿದೆ. ಇದು ಪೊಟಾಶಿಯಂ ಮಟ್ಟವನ್ನು ಹೆಚ್ಚಿಸಲು ಸಹಕಾರಿ.
  • ಪಾಲಕ್ ಸೊಪ್ಪು: ಈ ತರಕಾರಿಯಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇವೆ. ಇದನ್ನು ಸೇವನೆ ಮಾಡಿದರೆ ಹಲವಾರು ಲಾಭಗಳು ಸಿಗುವುದು.
  • ಬೀಟ್ ರೂಟ್: ಸಲಾಡ್, ಪಲ್ಯ ಮತ್ತು ಜ್ಯೂಸ್ ಮಾಡಿಕೊಂಡು ಕೂಡ ಬೀಟ್ ರೂಟ್ ಸೇವನೆ ಮಾಡಿದರೆ ದೇಹಕ್ಕೆ ಪೊಟಾಶಿಯಂ ಅಂಶವು ಸಿಗುವುದು.

ಈಸ್ಟೋಜನ್ ಅತಿಯಾಗಿರುವುದನ್ನು ಹೊರಹಾಕಲು

  • ಈಸ್ಟ್ರೋಜನ್ ಮಟ್ಟವು ಅತಿಯಾಗಿದ್ದರೆ ಆಗ ತೂಕ ಹೆಚ್ಚಳ, ಮನಸ್ಥಿತಿ ಬದಲಾವಣೆ, ಋತುಚಕ್ರ ಸಂದರ್ಭ ಅತಿಯಾದ ರಕ್ತ ಸ್ರಾವ ಮತ್ತು ಆಯಾಸ ಕಂಡುಬರುವುದು. ಈ ಸಮಸ್ಯೆ ಇರುವ ವರು, ಇಂತಹ ಆಹಾರಗಳನ್ನು ಸೇವಿಸಬೇಕು…
  • ಬಹುದಳವಿರುವ ತರಕಾರಿಗಳು
  • ಬ್ರಾಕೋಲಿ, ಹೂಕೋಸು ಮತ್ತು ಬ್ರಸೆಲ್ ಮೊಗ್ಗು ಈಸ್ಟ್ರೋಜನ್ ಪ್ರಮಾಣ ತಗ್ಗಿಸುವುದು.
  • ಕ್ಯಾರೆಟ್
  • ನಾರಿನಾಂಶವು ಅಧಿಕವಾಗಿ ಇರುವ ಕ್ಯಾರೇಟ್ ಈಸ್ಟ್ರೋಜನ್ ಮಟ್ಟ ತಗ್ಗಿಸಲು ಸಹಕಾರಿ.

Source : https://vijaykarnataka.com/lifestyle/health/never-ignore-these-body-signs-its-clearly-showing-you-are-deficient-in-vitamins-and-minerals/articleshow/110898021.cms?story=6

Leave a Reply

Your email address will not be published. Required fields are marked *