ಗೆಣಸನ್ನು ಹೆಚ್ಚು ತಿಂದರೆ ಅದರಿಂದ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತದೆ. ಗೆಣಸನ್ನು ಅತಿಯಾಗಿ ಸೇವಿಸುವುದರಿಂದ ಅದರಲ್ಲಿರುವ ವಿಟಮಿನ್ ಎ ವಿಷತ್ವವನ್ನು ಉಂಟುಮಾಡಬಹುದು. ಇದರಿಂದ ಚರ್ಮದ ಮೇಲೆ ದದ್ದುಗಳು ಮತ್ತು ತಲೆನೋವು ಉಂಟಾಗುತ್ತದೆ.
ಗೆಣಸು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಈ ಗಡ್ಡೆಯನ್ನು ಬೇಯಿಸಿಕೊಂಡು ತಿನ್ನಬಹುದು, ಪಲ್ಯ ಮಾಡಬಹುದು, ಸಾಂಬಾರ್ ಮಾಡಬಹುದು, ಬೋಂಡ ಕೂಡ ಮಾಡಿಕೊಂಡು ತಿನ್ನಬಹುದು.
ಜೀವಸತ್ವಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಗೆಣಸು ನಿಮ್ಮ ಚರ್ಮ, ಹೃದಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪಿಷ್ಟ, ಫೈಬರ್, ಪ್ರೋಟೀನ್, ಖನಿಜಗಳಾದ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್‌ಗಳಾದ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಎ ಗೆಣಸಿನಲ್ಲಿದೆ.
ಗೆಣಸು ಗೋಧಿ ಅಥವಾ ಅಕ್ಕಿಗಿಂತ ಹೆಚ್ಚಿನ ಮಟ್ಟದ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಪ್ರೊ-ವಿಟಮಿನ್ ಎ, ವಿಟಮಿನ್ ಸಿ ಮತ್ತು ಖನಿಜಗಳನ್ನು ನೀಡುತ್ತವೆ.
ಗೆಣಸು ಫೈಬರ್ ಭರಿತ ಆಹಾರವಾಗಿದ್ದು, ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನೀಸಿಯಂ ಮೊದಲಾದ ಅಂಶಗಳನ್ನು ಒದಗಿಸುತ್ತದೆ.