ಕೊತ್ತಂಬರಿ ಸೊಪ್ಪಿನ ಎಲೆಗಿಂತ ಕಾಂಡದಲ್ಲೇ ಇದೆ 80% ರುಚಿ? ಎಷ್ಟು ದಿನ ಈ ರುಚಿಯ ಗುಟ್ಟನ್ನು ತಿಳಿಯದೆ ಎಲ್ಲವನ್ನು ಬಿಸಾಕುತ್ತಿದ್ದೀರಾ?
ನಮ್ಮ ಭಾರತೀಯ ಅಡುಗೆಮನೆಗಳಲ್ಲಿ, ವಿಶೇಷವಾಗಿ ಕರ್ನಾಟಕದ ಮನೆಗಳಲ್ಲಿ ಕೊತ್ತಂಬರಿ ಸೊಪ್ಪಿಗೆ ವಿಶೇಷ ಸ್ಥಾನವಿದೆ. ಸಾರು, ಪಲ್ಯ, ಬಿರಿಯಾನಿ ಏನೇ ಇರಲಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸದಿದ್ದರೆ. ಆ ಅಡುಗೆ ಅಪೂರ್ಣ ಎನಿಸುತ್ತದೆ.
ಸಾಮನ್ಯವಾಗಿ ನಾವೆಲ್ಲರೂ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ತಂದ ತಕ್ಷಣ ಮಾಡುವ ಮೊದಲ ಕೆಲಸವೆಂದರೆ- ಎಲೆಗಳನ್ನು ಮಾತ್ರ ಬಿಡಿಸಿಕೊಂಡು, ಅದರ ದಪ್ಪನೆಯ ಕಾಂಡ ಮತ್ತು ಬೇರುಗಳನ್ನು ಕಸದ ಬುಟ್ಟಿಗೆ ಎಸೆದುಬಿಡುತ್ತೇವೆ. ಆದರೆ ಅಡುಗೆ ತಜ್ಞರ ಪ್ರಕಾರ ಮತ್ತು ಬಾಣಸಿಗರು ಹೇಳುವ ಪ್ರಕಾರ ನಾವು ಮಾಡುವ ಅತಿದೊಡ್ಡ ತಪ್ಪು ಇದೇ? ನೀವು ನಂಬಲೇಬೇಕು, ಕೊತ್ತಂಬರಿಯ ನಿಜವಾದ 80% ರಷ್ಟು ರುಚಿ ಮತ್ತು ಸುವಾಸನೆ ಅಡಗಿರುವುದು ಎಲೆಗಳಲಿ,್ಲ ಅಲ್ಲ ಬದಲಾಗಿ ನಾವು ಕಸವೆಂದು ಬಿಸಾಡುವ ಕಾಂಡ ಮತ್ತು ಬೇರುಗಳಲ್ಲಿ?
ಹೋಟೆಲ್ ಶೈಲಿಯ ರುಚಿಯನ್ನು ಮನೆಯಲ್ಲೇ ಪಡೆಯಲು ಕೊತ್ತಂಬರಿಯ ಪ್ರತಿಯೊಂದು ಭಾಗವನ್ನು ಹೇಗೆ ಬಳಸಬೇಕು? ಎಂಬ ಸಂಪೂರ್ಣ ಮಾಹಿತಿ.
- ಕೊತ್ತಂಬರಿ ಕಾಂಡ- ರುಚಿಯ ಅಸಲಿ ಖಜಾನೆ?
ಅನೇಕರಿಗೆ ತಿಳಿದಿಲ್ಲದ ವಿಷಯವೆಂದರೆ, ಕೊತ್ತಂಬರಿ ಎಲೆಗಳು ಕೇವಲ ಅಂದಕ್ಕೆ ಮತ್ತು ಮೃದುವಾದ ಪರಿಮಳಕ್ಕೆ ಮಾತ್ರ ಸೀಮಿತ. ಆದರೆ ಅಡುಗೆಗೆ ಬೇಕಾದ ಗಾಢವಾದ ರುಚಿ ಮತ್ತು ಗಟ್ಟಿತನ ಇರುವುದು ಅದರ ಕಾಂಡಗಳಲ್ಲಿಯೇ. ಸಂಶೋಧನೆ ಮತ್ತು ಅನುಭವಗಳ ಪ್ರಕಾರ, ಕೊತ್ತಂಬರಿಯ ಸುಮಾರು 80% ದಷ್ಟು ಪ್ಲೇವರ್ ಈ ಕಾಂಡಗಳಲ್ಲಿ ಅಡಕವಾಗಿರುತ್ತದೆ. ಇದನ್ನು ಬಳಸುವುದು ಹೇಗೆ? ನೀವು ಸಾಂಬಾರ್, ಕುರ್ಮಾ, ಗ್ರೇವಿಗಳಿಗೆ ಮಸಾಲೆ ರುಬ್ಬುತ್ತಿದ್ದರೆ, ಬರೀ ಎಲೆಗಳ ಬದಲಿಗೆ ಎಳೆಯ ಮತ್ತು ದಪ್ಪನೆಯ ಕಾಂಡಗಳನ್ನು ರುಬ್ಬಿ ನೋಡಿ. ಇದು ಮಸಾಲೆಗೆ ಅತ್ಯುದ್ಬುತವಾದ ಮತ್ತು ಗಾಢವಾದ ಪರಿಮಳವನ್ನು ನೀಡುತ್ತದೆ. ರಸಂ ಮಾಡುವಾಗ ಅದು ಕುದಿಯುವ ಹಂತದಲ್ಲಿ ಕಾಂಡವನ್ನು ಜಜ್ಜಿ ಹಾಕಿದರೆ ರಸಂನ ರುಚಿ ದುಪ್ಪಟ್ಟಾಗುತ್ತದೆ. ಹಾಗೆಯೇ ಒಗ್ಗರಣೆ ಹಾಕುವಾಗ ಈರುಳ್ಳಿಯ ಜೊತೆಗೆ ಸಣ್ಣದಾಗಿ ಹೆಚ್ಚಿದ ಕಾಂಡಗಳನ್ನು ಸೇರಿಸಿ ಹುರಿದರೆ, ಎಣ್ಣೆಯಲ್ಲಿ ಅದರ ಸುವಾಸನೆ ಚೆನ್ನಾಗಿ ಬೆರೆತು ಅಡುಗೆ ರುಚಿಕರವಾಗುತ್ತದೆ. - ಕೊತ್ತಂಬರಿ ಬೇರು- ಶೆಫ್‌ಗಳ ರಹಸ್ಯ ಅಸ್ತç
ನೀವು ಎಂದಾದರೂ ಯೋಚಿಸಿದ್ದೀರಾ? ಸ್ಟಾರ್ ಹೋಟೆಲ್‌ಗಳಲ್ಲಿ ಸಿಗುವ ವೆಜ್ ಕುರ್ಮಾ, ಚಿಕನ್ ಕರಿಯಂತಹ ಗ್ರೇವಿಗಳು, ಸೂಪ್‌ಗಳು ಏಕೆ ಅಷ್ಟು ಸುವಾಸನೆಯುಕ್ತವಾಗಿರುತ್ತದೆ ಎಂದು? ಅದರ ಗುಟ್ಟು ‘ಕೊತ್ತಂಬರಿ ಬೇರು’ ಬೇರುಗಳಲ್ಲಿ ಮಣ್ಣಿನ ಗುಣದೊಂದಿಗೆ ಕೂಡಿದ ಬಲವಾದ ಸುಗಂಧ ಇರುತ್ತದೆ. ಎದನ್ನು ಬಳಸುವುದು ಹೇಗೆ? ಬೇರುಗಳನ್ನು ಬಳಸುವ ಮುನ್ನ ಅವುಗಳನ್ನು ನೀರಿನಲ್ಲು ಚೆನ್ನಾಗಿ ನೆನೆಸಿ, ಮಣ್ಣನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಚಗೊಳಿಸುವುದು ಬಹಳ ಮುಖ್ಯ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಾಡುವಾಗ ಅದರ ಜೊತೆಗೆ ಎರಡು ಕೊತ್ತಂಬರಿ ಬೇರುಗಳನ್ನು ಸೇರಿಸಿ ರುಬ್ಬಿ ನೋಡಿ ಇದು ಮಾಂಸಾಹಾರಿ ಅಡುಗೆಗಳಿಗೆ ಮತ್ತು ಬಿರಿಯಾನಿಗೆ ಹೇಳಿ ಮಾಡಿಸಿದ ಹದವನ್ನು ನೀಡುತ್ತದೆ. ದೀರ್ಘಕಾಲ ಕುದಿಯುವ ಸಾಂಬಾರ್ ಅಥವಾ ಸೂಪ್ ಗಳಲ್ಲಿ ಬೇರುಗಳನ್ನು ಜಜ್ಜಿ ಹಾಕಿದರೆ, ಅದು ನಿಧಾನವಾಗಿ ರಸ ಬಿಟ್ಟು ಅಡುಗೆಯ ಘಮವನ್ನು ಹೆಚ್ಚಿಸುತ್ತದೆ. - ಕೊತ್ತಂಬರಿ ಎಲೆ ಅಂತಿಮ ಸ್ಪರ್ಶಕ್ಕೆ ಮಾತ್ರ
ಎಲೆಗಳು ತುಂಬಾ ಮೃದುವಾಗಿರುತ್ತದೆ. ಮತ್ತು ಅವುಗಳಲ್ಲಿರುವ ಸಾರಭೂತ ತೈಲಗಳು ಹೆಚ್ಚಿನ ಶಾಖಕ್ಕೆ ಬೇಗನೇ ಆವಿಯಾಗುತ್ತವೆ. ಹಾಗಾಗಿ, ಎಲೆಗಳನ್ನು ಅಡುಗೆಯ ಆರಂಭದಲ್ಲಿ ಕುದಿಯುವಾಗ ಹಾಕಿದರೆ ಅದರ ತಾಜಾ ಸುವಾಸನೆ ನಾಶವಾಗುತ್ತದೆ. ಅದನ್ನು ಬಳಸುವುದು ಹೇಗೆ? ಎಲೆಗಳನ್ನು ಯಾವಾಗಲೂ ಅಡುಗೆ ಪೂರ್ತಿಯಾಗಿ, ಒಲೆಯಿಂದ ಕೆಳಗಿಳಿಸಿದ ನಂತರವೇ ಬಳಸಬೇಕು. ಅದು ಕೇವಲ ‘ಗಾರ್ನಿಶ್’ ಮಾಡಲು, ಅಂದರೆ ಅಂದ ಹೆಚ್ಚಿಸಲು ಮತ್ತು ತಾಜಾ ಪರಿಮಳ ನೀಡಲು ಮಾತ್ರ ಸೀಮಿತ. ಹಸಿ ಚಟ್ಲಿ, ಕೋಸಂಬರಿ ಅಥವಾ ಮೊಸರು ಬಜ್ಜಿಗಳಲ್ಲಿ ಎಲೆಗಳನ್ನು ಬಳಸುವುದು ಸೂಕ್ತ. - ಯಾವ ಅಡುಗೆಗೆ ಏನು ಬಳಸಬೇಕು?
ಸರಳವಾಗಿ ಹೇಳಬೇಕೆಂದರೆ, ಸಾಂಬಾರ್, ರಸಂ ಮತ್ತು ಮಸಾಲೆ ರುಬ್ಬಲು ಕಾಂಡಗಳನ್ನು ಬಳಸಿ. ಅಂತಿಮವಾಗಿ ಅಡುಗೆಯ ಅಂದ ಹೆಚ್ಚಿಸಲು ಮತ್ತು ತಾಜಾ ಪರಿಮಳಕ್ಕೆ ಎಲೆಗಳನ್ನು ಬಳಸಿ.
ಇಂದಿನ ದಿನಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಕೊತ್ತಂಬರಿ ಸೊಪ್ಪಿನ ಕಟ್ಟು ತಂದು ಅರ್ಧದಷ್ಟು ಭಾಗವನ್ನು ಕಸಕ್ಕೆ ಎಸುಯುವುದು ಹಣವನ್ನು ಪೋಲು ಮಾಡಿದಂತೆ. ಕಾಂಡ ಮತ್ತು ಬೇರುಗಳನ್ನು ಬಳಸುವುದರಿಂದ ಹಣ ಉಳಿತಾಯವಾಗುವುದಲ್ಲದೆ, ಅಡುಗೆಗೆ ‘ಹೋಟೆಲ್ ಸ್ಟೆöÊಲ್’ ರುಚಿ ಸಿಗುತ್ತದೆ. ಇನ್ನು ಮುಂದೆ ಕೊತ್ತಂಬರಿ ಸೊಪ್ಪು ತಂದಾಗ ಕಾಂಡ ಮತ್ತು ಬೇರುಗಳನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಹೆಚ್ಚಿ ಅಥವಾ ಪೇಸ್ಟ್ ಮಾಡಿ ಫ್ರಿಡ್ಜ್ ನಲ್ಲಿ ಪ್ರತ್ಯೇಕವಾಗಿಡಿ. ಮುಂದಿನ ಬಾರಿ ಸಾಂಬಾರ್ ಮಾಡುವಾಗ ಕಾಂಡದ ಪೇಸ್ಟ್ ಬಳಸಿ ನೋಡಿ- ಮನೆಯವರೆಲ್ಲರೂ “ಇವತ್ತು ಅಡುಗೆಯಲ್ಲಿ ಏನು ಸ್ಪೆಷಲ್ ಹಾಕಿದ್ದೀರಾ”? ಎಂದು ಕೇಳುವುದು ಖಂಡಿತ!
Views: 3