Crime News: ಒಂದು ತಿಂಗಳ ಮಗುವನ್ನು ಓವನ್​​​ನಲ್ಲಿ ಸುಟ್ಟು ಕೊಂದ ತಾಯಿ!

ಪೊಲೀಸರು ತನಿಖೆ ಆರಂಭಿಸಿದಾಗ, ರಾತ್ರಿ ಮಗುವಿಗೆ ಹಾಲುಣಿಸಿದ ನಂತರ ತೊಟ್ಟಿಲಲ್ಲಿ ಮಲಗಿಸುವ ಬದಲು ಓವನ್​​ನಲ್ಲಿ ಮಲಗಿಸಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆದರೆ ಈ ಮಹಿಳೆ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾಳೆಯೇ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೃದಯ ವಿದ್ರಾವಕ ಘಟನೆಯೊಂದು ಅಮೆರಿಕದ ಮಿಸೌರಿಯಲ್ಲಿ ನಡೆದಿದೆ. ತಾಯಿಯೊಬ್ಬಳು ತನ್ನ ಮಗುವನ್ನು ಸುಟ್ಟು ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆದರೆ ತಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲವೆಂದು ಹೇಳಿದ್ದರೂ ಕೂಡ ಮಹಿಳೆಯ ಮೇಲೆ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿದ್ದು, ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ತಾಯಿಯ ಹೇಳಿಕೆಯ ಪ್ರಕಾರ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು ಓವಲ್​​ನಲ್ಲಿಟ್ಟು ಸ್ವಿಚ್ ಹಾಕಿ ಮಲಗಿದ್ದಳು . ಇದರಿಂದ  ಮಗು  ಸುಟ್ಟು ಕರಕಲಾಗಿ ಸಾವನ್ನಪ್ಪಿದೆ. ಇದೀಗ ತಾಯಿ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾಳೆಯೇ ಅಥವಾ ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾನ್ಸಾಸ್ ನಗರದಲ್ಲಿ ಈ ಘಟನೆ ನಡೆದಿದೆ. ಸುದ್ದಿ ಸಂಸ್ಥೆಯೊಂದರ ಪ್ರಕಾರ, ಮರಿಯಾ ಥಾಮಸ್ ತನ್ನ ನವಜಾತ ಮಗುವನ್ನು ಕೊಂದ ಆರೋಪ ಹೊತ್ತಿದ್ದಾರೆ. ಶುಕ್ರವಾರ, ಕಾನ್ಸಾಸ್ ಸಿಟಿ ಪೊಲೀಸರಿಗೆ ಮರಿಯಾ ಎಂಬ ಮಹಿಳೆ ತನ್ನ ಮಗುವನ್ನು ಒಲೆಯಲ್ಲಿ ಸುಟ್ಟು ಸಾಯಿಸಿದ್ದಳು ಎಂಬ ಮಾಹಿತಿ ಸಿಕ್ಕಿತು. ಪೊಲೀಸರು ತನಿಖೆ ಆರಂಭಿಸಿದಾಗ, ರಾತ್ರಿ ಮಗುವಿಗೆ ಹಾಲುಣಿಸಿದ ನಂತರ ತೊಟ್ಟಿಲಲ್ಲಿ ಮಲಗಿಸುವ ಬದಲು ಓವನ್​​ನಲ್ಲಿ ಮಲಗಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ.

ಬೆಳಗ್ಗೆ ಎದ್ದಾಗ ಅಕಸ್ಮಾತ್ ಮಗುವನ್ನು ಒಲೆಯಲ್ಲಿ ಮಲಗಿಸಿರುವುದು ಅರಿವಾಯಿತು. ಓವಮ್​​ ತೆರೆದು ನೋಡಿದಾಗ ಅದರಲ್ಲಿ ಮಗು ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಉಸಿರುಗಟ್ಟಿಸಿ ಸುಟ್ಟು ಕರಕಲಾದ ಕಾರಣ ಮಗು ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಸದ್ಯ ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಅಲ್ಲದೆ, ಆಕೆಯ ಫೋನ್ ವಶಪಡಿಸಿಕೊಂಡು ತನಿಖೆಗೆ ಕಳುಹಿಸಲಾಗಿದೆ. ಈ ಘಟನೆಯ ನಂತರ ಇಡೀ ಕಾನ್ಸಾಸ್ ನಗರದಲ್ಲಿ ಸಂಚಲನ ಮೂಡಿಸಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *