IMD Warning :ಚಂಡಮಾರುತದ ಹಿನ್ನೆಲೆಯಲ್ಲಿ ಕೊಂಕಣ-ಗೋವಾ-ಮಹಾರಾಷ್ಟ್ರ ಕರಾವಳಿಯಲ್ಲಿ ಜೂನ್ 8 ರಿಂದ 10 ರವರೆಗೆ ಅತಿ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿದ ಮೀನುಗಾರರು ಮರಳುವಂತೆ ಸೂಚಿಸಲಾಗಿದೆ.

IMD Warning : ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಸಂಜೆ ಚಂಡಮಾರುತ ಎದ್ದಿದೆ ಎನ್ನುವುದನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತಕ್ಕೆ ‘ಬಿಪರ್ಜೋಯ್’ ಎನ್ನುವ ಹೆಸರನ್ನು ಬಾಂಗ್ಲಾದೇಶ ಇಟ್ಟಿದೆ. ಇದರ ಅರ್ಥ ‘ವಿಪತ್ತು’. ಈ ಚಂಡಮಾರುತ ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಗಂಟೆಗೆ ನಾಲ್ಕು ಕಿಲೋಮೀಟರ್ ವೇಗದಲ್ಲಿ ಉತ್ತರದ ಕಡೆಗೆ ಚಲಿಸುತ್ತಿದೆ ಎಂದು IMD ಬುಲೆಟಿನ್ ನಲ್ಲಿ ತಿಳಿಸಿದೆ.
ಇದು ಬಹುತೇಕ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ಕ್ರಮೇಣ ತೀವ್ರ ರೂಪ ಪಡೆಯುವ ಸಾಧ್ಯತೆ ಇದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕೊಂಕಣ-ಗೋವಾ-ಮಹಾರಾಷ್ಟ್ರ ಕರಾವಳಿಯಲ್ಲಿ ಜೂನ್ 8 ರಿಂದ 10 ರವರೆಗೆ ಅತಿ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿದ ಮೀನುಗಾರರು ಮರಳುವಂತೆ ಸೂಚಿಸಲಾಗಿದೆ.
IMD ಹೇಳಿದ್ದೇನು? :
ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಉಂಟಾಗುವ ವಾಯು ಭಾರ ಕುಸಿತ ಕೇರಳ ಕರಾವಳಿಯತ್ತ ಆಗಮಿಸುವ ಮುಂಗಾರಿನ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು ಎಂದು ಐಎಂಡಿ ಸೋಮವಾರ ಹೇಳಿತ್ತು. ಆದರೆ, ಕೇರಳಕ್ಕೆ ಮುಂಗಾರು ಆಗಮನದ ದಿನಾಂಕವನ್ನು ಹವಾಮಾನ ಇಲಾಖೆ ನೀಡಿಲ್ಲ.
ಜೂನ್ 8 ಅಥವಾ 9 ರಂದು ಕೇರಳದಲ್ಲಿ ಮಾನ್ಸೂನ್ ಅಪ್ಪಳಿಸಬಹುದೆಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ‘ಸ್ಕೈಮೆಟ್ ವೆದರ್’ ತಿಳಿಸಿದೆ. ಆದರೆ ಈ ಅವಧಿಯಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದಲ್ಲಿನ ಹವಾಮಾನ ವೈಪರೀತ್ಯಗಳು ಮಾನ್ಸೂನ್ ಆಗಮನದ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿದೆ. ಇದರ ಪರಿಣಾಮದಿಂದ ಮಾನ್ಸೂನ್ ಕರಾವಳಿ ಪ್ರದೇಶಗಳನ್ನು ತಲುಪಬಹುದು. ಆದರೆ ಪಶ್ಚಿಮ ಘಟ್ಟಗಳನ್ನು ಮೀರಿ ಹೋಗುವುದು ಸಾಧ್ಯಾವಾಗುವುದಿಲ್ಲ.
ಜೂನ್ 7 ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಸ್ಕೈಮೆಟ್ ಮೊದಲೇ ಮುನ್ಸೂಚನೆ ನೀಡಿತ್ತು. ಅದು ಮೂರು ದಿನಗಳ ಮೊದಲು ಅಥವಾ ನಂತರ ಹೀಗೆ ಸ್ವಲ್ಪ ವ್ಯತ್ಯಾಸ ಆಗಬಹುದು ಎಂದು ಕೂಡಾ ಹೇಳಿತ್ತು. ಈ ಅವಧಿಯಲ್ಲಿ ನೈಋತ್ಯ ಮುಂಗಾರು ಆಗಮಿಸುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಹೇಳಿತ್ತು. ಲಕ್ಷದ್ವೀಪ, ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ಸತತ ಎರಡು ದಿನಗಳಲ್ಲಿ ನಿಗದಿತ ಮಳೆಯಾದಾಗ ಮಾನ್ಸೂನ್ ಪ್ರಾರಂಭವಾಯಿತು ಎಂದು ಪರಿಗಣಿಸಲಾಗುತ್ತದೆ. ಆದರೂ ಮಾನ್ಸೂನ್‌ನ ಆರಂಭ ಅಷ್ಟೇನೂ ಶಕ್ತಿಯುತವಾಗಿರುವುದಿಲ್ಲ.
ಕೇರಳದಲ್ಲಿ ಸೋಮವಾರವೂ ಉತ್ತಮ ಮಳೆಯಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ಮಾನ್ಸೂನ್ ಆಗಮನಕ್ಕೆ ಅನುಕೂಲಕರ ವಾತಾವರಣವಿದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಡಿಎಸ್ ಪೈ ಹೇಳಿದ್ದಾರೆ. ಚಂಡಮಾರುತವು ದುರ್ಬಲಗೊಂಡ ನಂತರ, ಮುಂಗಾರು ದಕ್ಷಿಣ ಪರ್ಯಾಯ ದ್ವೀಪದಿಂದ ಮುನ್ನಡೆಯಲಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳವನ್ನು ತಲುಪುತ್ತದೆ. ಇಡು ಅನೇಕ ಬಾರಿ ಏಳು ದಿನಗಳ ಮುಂಚಿತವಾಗಿಯೂ ಆಗಬಹುದು ಅಥವಾ ವಿಳಂಬವಾಗಿಯೂ ಆಗಬಹುದು
Source:https://zeenews.india.com/kannada/india/severe-storm-alert-imd-warning-biparjoy-cyclone-139025