ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ದಬಾಂಗ್ ದೆಹಲಿ ಕೆಸಿ 12ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ದೆಹಲಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ ಅಬ್ಬರಿಸಿತು. ಮೊದಲಾವಧಿಯಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ದಬಾಂಗ್ ದೆಹಲಿ ಪ್ರಶಸ್ತಿ ಎತ್ತಿ ಸಂಭ್ರಮಿಸಿದರು.
ಫೈನಲ್ ಪಂದ್ಯದಲ್ಲಿ ದಬಾಂಗ್ ದೆಹಲಿ 31-28 ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿತು.
ಮೊದಲಾವಧಿಯ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ ಸ್ಥಿರ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತು. ಈ ಅವಧಿಯಲ್ಲಿ ನೀರಜ್ ನರ್ವಾಲ್ (8 ಅಂಕ), ಅಜಿಂಕ್ಯ ಪವಾರ್ (6 ಅಂಕ) ಅಬ್ಬರಿಸಿದರು. ಈ ಅವಧಿಯಲ್ಲಿ ದಬಾಂಗ್ ದೆಹಲಿ ತಂಡ ದಾಳಿಯಲ್ಲಿ 13 ಅಂಕಗಳ ಮುನ್ನಡೆ ಸಾಧಿಸಿತು. ಈ ವೇಳೆ ಪುಣೇರಿ ಪಲ್ಟನ್ ಮೂರು ಬಾರಿ ಸೂಪರ್ ಟ್ಯಾಕಲ್ ಮಾಡಿ ಆಲ್‌ಔಟ್ ಆಗುವ ಭೀತಿಯಿಂದ ಪಾರಾಗಿತ್ತು. ಆದರೆ 15ನೇ ನಿಮಿಷದಲ್ಲಿ ದಬಾಂಗ್ ದೆಹಲಿ ಅಬ್ಬರದ ಪ್ರದರ್ಶನ ನೀಡಿ ಪುಣೇರಿ ಪಲ್ಟನ್ ತಂಡವನ್ನು ಆಲೌಟ್ ಮಾಡಿತು. ಈ ಅವಧಿಯಲ್ಲಿ ದಬಾಂಗ್ ದೆಹಲಿ 20-14 ಅಂಕಗಳಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯ ಆಟದಲ್ಲಿ ಪುಣೇರಿ ಪಲ್ಟನ್ ಪುಟಿದೇಳುವ ಸೂಚನೆಯನ್ನು ನೀಡಿತು. ಆದರೆ ಈ ಪ್ಲ್ಯಾನ್‌ಗೆ ಆರಂಭದಲ್ಲಿ ದೆಹಲಿ ತಂಡ ಸೊಪ್ಪು ಹಾಕಲಿಲ್ಲ. ಈ ಅವಧಿಯಲ್ಲಿ ಪುಣೇರಿ ತಾನೇ ಮಾಡಿದ ತಪ್ಪುಗಳಿಂದ ಅಂಕಗಳನ್ನು ದಬಾಂಗ್ ತಂಡಕ್ಕೆ ನೀಡಿತು. ಈ ಅವಧಿಯಲ್ಲಿ ಪುಣೇರಿ ಪಲ್ಟನ್ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ದಬಾಂಗ್ ತಂಡವನ್ನು 2ನೇ ಅವಧಿಯ 17ನೇ ನಿಮಿಷದಲ್ಲಿ ಪುಣೇರಿ ಆಲ್‌ಔಟ್ ಮಾಡಿತು. ಆದರೆ ಕೊನೆಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಪುಣೇರಿ ವಿಫಲವಾಯಿತು. ಪರಿಣಾಮ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲವಾಗಿ ನಿರಾಸೆ ಅನುಭವಿಸಿತು. ದಬಾಂಗ್ ದೆಹಲಿ 2ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.
ಆವೃತ್ತಿ 🥇 ವಿಜೇತ ತಂಡ 🥈 ರನ್ನರ್‌ಅಪ್
1 ಜೈಪುರ್ ಪಿಂಕ್ ಪ್ಯಾಂಥರ್ಸ್ ಯು ಮುಂಬಾ
2 ಯು ಮುಂಬಾ ಬೆಂಗಳೂರು ಬುಲ್ಸ್
3 ಪಾಟ್ನಾ ಪೈರೇಟ್ಸ್ ಯು ಮುಂಬಾ
4 ಪಾಟ್ನಾ ಪೈರೇಟ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್
5 ಪಾಟ್ನಾ ಪೈರೇಟ್ಸ್ ಗುಜರಾತ್ ಜೈಂಟ್ಸ್
6 ಬೆಂಗಳೂರು ಬುಲ್ಸ್ ಗುಜರಾತ್ ಜೈಂಟ್ಸ್
7 ಬಂಗಾಳ ವಾರಿಯರ್ಸ್ ದಬಾಂಗ್ ದೆಹಲಿ
8 ದಬಾಂಗ್ ದೆಹಲಿ ಪಾಟ್ನಾ ಪೈರೇಟ್ಸ್
9 ಜೈಪುರ್ ಪಿಂಕ್ ಪ್ಯಾಂಥರ್ಸ್ ಪುಣೇರಿ ಪಲ್ಟನ್
10 ಪುಣೇರಿ ಪಲ್ಟನ್ ಹರಿಯಾಣ ಸ್ಟೀಲರ್ಸ್
11 ಹರಿಯಾಣ ಸ್ಟೀಲರ್ಸ್ ಪಾಟ್ನಾ ಪೈರೇಟ್ಸ್
12 🏆 ದಬಾಂಗ್ ದೆಹಲಿ ಕೆಸಿ ⚡ ಪುಣೇರಿ ಪಲ್ಟನ್
Views: 20