Daily GK Quiz: 12 ವರ್ಷಕ್ಕೆ ಒಮ್ಮೆ ಮಾತ್ರ ಅರಳುವ ಹೂವು ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ದಿಮಟ್ಟವನ್ನು  ಪರೀಕ್ಷಿಸಿಕೊಳ್ಳಿರಿ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ದಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1 – ಭಾರತದ ಯಾವ ರಾಷ್ಟ್ರಪತಿಗಳು ಬಾಲ್ಯದಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡಿದ್ದರು?

ಉತ್ತರ 1 – ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಬಾಲ್ಯದಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು.

ಪ್ರಶ್ನೆ 2 – ಗೌತಮ ಬುದ್ಧನು ಯಾವ ಮರದ ಕೆಳಗೆ ಜ್ಞಾನೋದಯವನ್ನು ಪಡೆದನು?

ಉತ್ತರ 2 – ಬಿಹಾರ ರಾಜ್ಯದ ಗಯಾ ಜಿಲ್ಲೆಯ ಬೋಧಗಯಾದಲ್ಲಿರುವ ಮಹಾಬೋಧಿ ದೇವಾಲಯದ ಸಂಕೀರ್ಣದಲ್ಲಿರುವ ಅರಳಿ ಮರದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಯಿತು.

ಪ್ರಶ್ನೆ 3 – ಯಾವ ಪ್ರಾಣಿಯು ಮೇಲ್ಮುಖವಾಗಿ ನೋಡಲು ಸಾಧ್ಯವಿಲ್ಲ?

ಉತ್ತರ 3 – ಹಂದಿ ನೇರವಾಗಿ (90 ಡಿಗ್ರಿಗಳಲ್ಲಿ) ನೋಡಲು ಸಾಧ್ಯವಿಲ್ಲ.

ಪ್ರಶ್ನೆ 4 – ಸೂರ್ಯನು ಬಾಹ್ಯಾಕಾಶದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾನೆ?

ಉತ್ತರ 4 – ಬಾಹ್ಯಾಕಾಶದಲ್ಲಿ ಸೂರ್ಯನ ಬಣ್ಣವು ಬಿಳಿಯಾಗಿ ಕಾಣುತ್ತದೆ. ಬಾಹ್ಯಾಕಾಶದಿಂದ ಸೂರ್ಯನು ಪ್ರಕಾಶಮಾನವಾದ ಬೆಳಕಿನ ಚೆಂಡಿನಂತೆ ಗೋಚರಿಸುತ್ತಾನೆ.

ಪ್ರಶ್ನೆ 5 – ವಿಶ್ವದ ಯಾವ ಜೀವಿಯು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದೆ?

ಉತ್ತರ 5 – ಆಮೆ ಪ್ರಪಂಚದಲ್ಲಿಯೇ ಅತಿಹೆಚ್ಚು ಜೀವಿತಾವಧಿಯನ್ನು ಹೊಂದಿರುವ ಜಿವಿಯಾಗಿದೆ.

ಪ್ರಶ್ನೆ 6 – ಯಾವ ಹೂವು ಯಾವಾಗಲೂ ಸೂರ್ಯನ ಕಡೆಗೆ ನೋಡುತ್ತದೆ?

ಉತ್ತರ 6 – ಸೂರ್ಯಕಾಂತಿ ಹೂವು ಯಾವಾಗಲೂ ಸೂರ್ಯನ ಕಡೆಗೆ ನೋಡುತ್ತದೆ.

ಪ್ರಶ್ನೆ 7 – ಯಾವ ಹೂವು 12 ವರ್ಷಗಳಿಗೊಮ್ಮೆ ಮಾತ್ರ ಅರಳುತ್ತದೆ?

ಉತ್ತರ 7 – ನೀಲ್ ಕುರಿಂಜಿ(Neelakurinji) ಹೂವು 12 ವರ್ಷಗಳಿಗೊಮ್ಮೆ ಮಾತ್ರ ಅರಳುತ್ತದೆ.

ಪ್ರಶ್ನೆ 8- ಕೃಷ್ಣಾ ನದಿಯ ಅತ್ಯಂತ ದೊಡ್ಡ ಉಪನದಿಯ ಹೆಸರೇನು?

ಉತ್ತರ 8- ತುಂಗಭದ್ರಾ

ಪ್ರಶ್ನೆ 9- ಭಾರತದ ಅತ್ಯಂತ ಆಳವಾದ ಬಂದರು ಯಾವುದು?

ಉತ್ತರ 9- ವಿಶಾಖಪಟ್ಟಣ

ಪ್ರಶ್ನೆ 10- ಯಮುನಾ ನದಿಯ ದಂಡೆಗಳ ಮೇಲಿರುವ ನಗರಗಳು ಯಾವುವು..?

ಉತ್ತರ 10- ದೆಹಲಿ, ಮಥುರಾ, ಆಗ್ರಾ ಮತ್ತು ಅಲಹಾಬಾದ್

Source : https://zeenews.india.com/kannada/india/general-knowledge-quiz-which-flower-blooms-only-once-in-12-years-174024

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *