Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ವಾತಾವರಣದಲ್ಲಿನ ನೈಟ್ರೋಜನ್ ಅನ್ನು ಹೀರಿಕೊಳ್ಳುವ ಹಾಗೂ ಕರಗಿಸಿಬಲ್ಲ ಬ್ಯಾಕ್ಟೀರಿಯಾ
ರೈಜೋಬಿಯಮ್
2 . ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದ ಸ್ಥಾಪಕರು
ಹೈದರಾಲಿ
3 . ರೂಕರಿ ಎಂದರೆ
ಪೆಂಗ್ವಿನ್ ಗಳ ಗೂಡು
4 . ಹತ್ತನೇ ಪಂಚವಾರ್ಷಿಕ ಯೋಜನೆ ಅವಧಿ
2002-2007
5 . ದೇಶದ ಪ್ರಥಮ ಶ್ರೀಗಂಧದ ಮ್ಯೂಸಿಯಂ ಇರುವ ಸ್ಥಳ
ಮೈಸೂರು
6 . 2023 ಕರ್ನಾಟಕ ವಿಧಾನಸಭೆ ಚುನಾವಣೆಯ ರಾಯಭಾರಿ
ಮಂಜಮ್ಮ ಜೋಗತಿ
7 . DRDO ದ ವಿಸ್ತೃತ ರೂಪ
Defence research development organisation
8 . ಛತ್ರಪತಿ ಸಂಭಾಜಿ ನಗರ ಎಂದು ಮರುನಾಮಕರಣಗೊಂಡಿರುವ ನಗರ
ಔರಂಗಾಬಾದ್
9 . ರಾಷ್ಟ್ರೀಯ ಕ್ರೀಡಾ ದಿನವನ್ನು ಎಂದು ಆಚರಿಸಲಾಗುತ್ತದೆ
ಆಗಸ್ಟ್ 29
10 . ಜಾಗತಿಕ ಇಂಧನ ಪರಿವರ್ತನಾ ಸೂಚ್ಯಂಕದಲ್ಲಿ ಭಾರತದ ಸ್ಥಾನ
67ನೇ ಸ್ಥಾನ