Daily GK Quiz: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಪ್ರಶ್ನೆ 1: ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
a) ವಾಲಿಬಾಲ್ b) ದಂಡಿಬಯೋ
c) ಅರ್ಚರಿ d) ಕಬ್ಬಡ್ಡಿ
ಉತ್ತರ: ಕಬ್ಬಡ್ಡಿ
ಪ್ರಶ್ನೆ 2: ‘ಸಸ್ಯಶಾಸ್ತ್ರ’ದ ಪಿತಾಮಹ ಯಾರು?
a) ಅರಿಸ್ಟಾಟಲ್ b) ಹಿಪೊಕ್ರೇಟ್ಸ್
c) ಥಿಯೋಪ್ರಾಸ್ಟಸ್ d) ಮೇಲಿನ ಯಾರೂ ಅಲ್ಲ
ಉತ್ತರ: ಥಿಯೋಪ್ರಾಸ್ಟಸ್
ಪ್ರಶ್ನೆ 3: ಮಧ್ಯಪ್ರದೇಶದ ಸರ್ಕಾರದಿಂದ ಕೊಡಮಾಡುವ ‘ಕಬೀರ್ ಸಮ್ಮಾನ’ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
a)ಸಂಗೀತ b) ಶಿಲ್ಪಕಲೆ
c) ಸಾಹಿತ್ಯ d) ನಾಗರಿಕ ಸೇವೆ
ಉತ್ತರ: ಸಾಹಿತ್ಯ
ಪ್ರಶ್ನೆ 4: ‘ಕವಿರಾಜ’ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
a) 2ನೇ ಚಂದ್ರಗುಪ್ತ ವಿಕ್ರಮಾದಿತ್ಯ b) ಕುಮಾರ ಗುಪ್ತ
c) ರಾಮಗುಪ್ತ d) ಸಮುದ್ರಗುಪ್ತ
ಉತ್ತರ: ಸಮುದ್ರಗುಪ್ತ
ಪ್ರಶ್ನೆ 5: ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
a) ಅಕ್ಬರ್ b) ಚಂದ್ರಗುಪ್ತ
c) ಶಿವಾಜಿ d) ಕೃಷ್ಣದೇವರಾಯ
ಉತ್ತರ: ಅಕ್ಬರ್
6. ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ?
a) ಕೆಂಪು b) ಹಸಿರು
c) ಕಪ್ d) ಹಳದಿ
ಉತ್ತರ: ಹಳದಿ
ಪ್ರಶ್ನೆ 7: ಸಂಚಾರಿ ಹೈಕೋರ್ಟ್ ಅನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?
a) ಉತ್ತರಪ್ರದೇಶ b) ತೆಲಂಗಾಣ
c) ಪಂಜಾಬ್ d) ಹರಿಯಾಣ
ಉತ್ತರ: ಹರಿಯಾಣ
ಪ್ರಶ್ನೆ 8: ಸಂವಿಧಾನ ಪರಿಹರಾತ್ಮಕ ಹಕ್ಕನು ಸಂವಿಧಾನದ ಆತ್ಮ ಎಂದು ಕರೆದವರು ಯಾರು?
a) ಡಾ.ಬಿ.ಆರ್.ಅಂಬೇಡ್ಕರ್ b) ಡಾ.ಬಾಬು ರಾಜೇಂದ್ರ ಪ್ರಸಾದ್
c) ಇಂದಿರಾ ಗಾಂಧಿ d) ಮುರಾರ್ಜಿ ದೇಸಾಯಿ
ಉತ್ತರ: ಡಾ.ಬಿ.ಆರ್.ಅಂಬೇಡ್ಕರ್
ಪ್ರಶ್ನೆ 9: ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
a) A ಗುಂಪು b) B ಗುಂಪು
c) AB ಗುಂಪು d) O ಗುಂಪು
ಉತ್ತರ: AB ಗುಂಪು
ಪ್ರಶ್ನೆ 10: ‘ಅಷ್ಟದಿಗ್ಗಜರು’ ಯಾರ ಆಸ್ಥಾನದಲ್ಲಿದ್ದರು?
a) ಶಿವಾಜಿ b) ಶ್ರೀಕೃಷ್ಣದೇವರಾಯ
c) ಅಕ್ಬರ್ d) ಚಂದ್ರಗುಪ್ತ
ಉತ್ತರ: ಶ್ರೀಕೃಷ್ಣದೇವರಾಯ
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1