Daily Horoscope 02 December 2024: ಡಿಸೆಂಬರ್ 02, 2024ರ ಸೋಮವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:08 ರಿಂದ 09:33ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ ಮಧ್ಯಾಹ್ನ 12:22 ರವರೆಗೆ, ಗುಳಿಕ ಕಾಲ ಮಧ್ಯಾಹ್ನ01:47 ರಿಂದ 03:12 ರವರೆಗೆ.
ಮೇಷ ರಾಶಿ: ನಿಮ್ಮವರೇ ಆದರೂ ಸಲುಗೆ ಅತಿಯಾದೀತು. ನಿಮ್ಮ ಇಂದಿನ ಕಾರ್ಯವು ಜನರಿಂದ ಮೆಚ್ಚುಗೆ ಪಡೆಯಬಹುದು. ಇಂದು ನಿಮ್ಮ ಜೀವನ ಸಂಗಾತಿಯನ್ನು ಆಶ್ಚರ್ಯಗೊಳಿಸುವಿರಿ. ಸಮಯ ನೋಡಿ ಸರಿಯಾದ ಮಾತನ್ನು ಆಡುವಿರಿ. ನಿಮ್ಮ ಎಲ್ಲ ಕಾರ್ಯವನ್ನು ಬಿಟ್ಟು ಇಂದು ನೀವು ಅವರ ಜೊತೆ ಸಮಯವನ್ನು ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ಉತ್ತಮಗೊಳಗಳುತ್ತ ಸಾಗುವುದು ತೃಪ್ತಿ ಕೊಡುವುದು. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ. ನಿಮ್ಮ ಸ್ನೇಹಿತರಲ್ಲಿ ಇಂದು ದೊಡ್ಡ ಸಾಲವನ್ನು ಕೇಳುವಿರಿ. ಸ್ವೋದ್ಯೋಗವನ್ನು ಮಾಡುತ್ತಿದ್ದರೆ ಸ್ವಲ್ಪ ನಷ್ಟವಾಗಬಹುದು. ಕುಟುಂಬವು ನಿಮ್ಮ ಜೊತೆಗೆ ನಿಲ್ಲುವುದು. ಆಪ್ತರ ಸಲಹೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಮಾತುಗಳಲ್ಲಿ ಪರಿಷ್ಕಾರವು ಇತರರಿಗೆ ಕಾಣಿಸುವುದು. ಮನೆಯನ್ನು ಸುಂದರವಾಗಿಸಿಕೊಳ್ಳುಬಿರಿ.
ವೃಷಭ ರಾಶಿ: ಸ್ಪರ್ಧಾತ್ಮಕ ಕಾರ್ಯಗಳಿಗೆ ಬಹಳ ಉತ್ಸಾವಿರುವುದು. ಗಂಧದ ಜೊತೆ ಗುದ್ದಾಟಮಾಡಿದರೆ ಮೈ ಸುಗಂಧವಾಗುವುದು. ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಕಛೇರಿಯ ಕಡೆಯಿಂದ ಭಡ್ತಿ ಸಿಗುವ ಸಂಭವವಿದೆ. ರಪ್ತು ಉದ್ಯಮದಲ್ಲಿ ನಿಮಗೆ ಲಾಭವಾಗುವುದು. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಫಲಿತಾಂಶ ಸಿಗದು. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ನಿಮಗಾದ ಸಹಾಯವನ್ನು ನೀವು ಸ್ಮರಿಸಿಕೊಳ್ಳುವಿರಿ. ಅಧಿಕಾರಿಗಳ ಪ್ರಶ್ನೆಗೆ ನಿಮ್ಮ ಉತ್ತರವು ಸರಿಯಾಗಿ ಇರಲಿ. ಸಿಟ್ಟನ್ನು ಬಿಟ್ಟು ಶಾಂತವಾಗಿ ಸಮಾಧಾನ ಚಿತ್ತದಿಂದ ಮಾತನಾಡಿ. ನೆರಹೊರೆಯರ ಸಂಕಷ್ಟಕ್ಕೆ ನೀವು ಇಂದು ನೆರವಾಗುವಿರಿ. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.
ಮಿಥುನ ರಾಶಿ: ದೃಷ್ಟಿ ದೋಷದ ಕಾರಣದಿಂದ ನಿಮಗೆ ಬೇಸರ ಉಂಟಾಗಬಹುದು. ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕ್ಕೆ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ. ನಿಮ್ಮದಲ್ಲದ ವಸ್ತುಗಳನ್ನು ಯಾರಿಗಾದರೂ ಕೊಡುವ ಮೊದಲು ಯೋಚಿಸಿ. ಗೊತ್ತಿಲ್ಲ ಕೆಲಸಕ್ಕೆ ಹುಂಬುತನ ಮಾಡಿಕೊಂಡು ಕಷ್ಟದಿಂದ ಇರುವಿರಿ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗುವುದು. ಹೊಸ ಯೋಜನೆಗಳನ್ನು ಶುರು ಮಾಡಲು ಆಪ್ತರ ಜೊತೆ ಚರ್ಚಿಸಿ. ಹಣಕಾಸಿನ ವ್ಯವಹಾರದಲ್ಲಿ ನೀವು ಸಹೋದರರ ಜೊತೆ ಕುಳಿತು ಮಾತನಾಡಿ. ಕುಟುಂಬದವರ ಎಲ್ಲರ ಭೇಟಿಯಾಗಿ ಅವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಆದಾಯದ ಹೆಚ್ಚಿನ ಭಾಗವು ಸೌಂದರ್ಯಕ್ಕೆ ಹೋಗುವುದು.
ಕರ್ಕಾಟಕ ರಾಶಿ; ವ್ಯವಹಾರದ ಪ್ರಜ್ಞೆ ಇಲ್ಲದವರ ಜೊತೆ ವ್ಯಾಪಾರ ಕಷ್ಟವಾಗಬಹುದು. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಕೆಲವು ಕಾರ್ಯವನ್ನು ನೀವೇ ಹೋಗಿ ವಹಿಸಿಕೊಳ್ಳುವುದು ಸುಖ. ನಿಮಗೆ ಯಾವುದಾದರೂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಕರೆ ಬರಬಹುದು. ಇಂದು ಸಾಲದಿಂದ ನೀವು ಮುಕ್ತರಾಗಿ ಸ್ವಲ್ಪ ನೆಮ್ಮದಿ ಪಡೆಯುವಿರಿ. ಕೃಷಿಕರು ತಮ್ಮ ಉತ್ಪನ್ನದಿಂದ ಅಲ್ಪ ಲಾಭ ಪಡೆವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಬೇಡ. ಇನ್ನೊಬ್ಬರ ಮಾತನ್ನು ಕೇಳುವ ಸಹನೆ ಇರಲಿ. ನಿಮ್ಮ ಪ್ರೇಮ ಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ದೂರ ಪ್ರಯಾಣವನ್ನು ಇಂದು ಮಾಡಬೇಡಿ. ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ. ಹಂಗಿನಿಂದ ಹೊರಬರಲು ನಿಮಗೆ ದಾರಿ ಸಿಗದು. ಅತಂತ್ರ ಸ್ಥಿತಿಯನ್ನು ನಿಯಂತ್ರಣ ಮಾಡಿಕೊಳ್ಳಲಾಗದು.
ಸಿಂಹ ರಾಶಿ: ಅಧಿಕಾರಿ ವರ್ಗದಿಂದ ಒತ್ತಡ ಹೆಚ್ಚಾಗುವುದು. ಪ್ರಯಾಣದಲ್ಲಿ ನಿಮಗೆ ಏನಾದರೂ ತೊಂದರೆ ಕಾಣಿಸೀತು. ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಬಹುದು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಯಾರನ್ನೋ ಸಂಶಯಿಸುತ್ತ ಕುಳಿತುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿ ಮಾತ್ರ ಹೇಳಿ. ಇಂದಿನ ನಿಮ್ಮ ವ್ಯವಹಾರವು ಅಧಿಕವಾದ ಯಾವ ಲಾಭವನ್ನೂ ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಎದುರಾದೀತು. ಧಾರ್ಮಿಕ ವಿಚಾರದಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳುವಿರಿ. ನೀವು ಹೋಗುವ ಪ್ರಯಾಣವು ಸ್ಥಗಿತಗೊಂಡಿದ್ದು ನಿಮಗೆ ಒಳ್ಳೆಯದೇ. ಆಡಳಿತಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಇರುವುದು. ಇಂದು ಉದರಬಾಧೆಯಿಂದ ಸಂಕಟಪಡಬೇಕಾದೀತು.
ಕನ್ಯಾ ರಾಶಿ: ಬಹಳ ದಿನಗಳ ಅನಂತರ ಬಂಧುಗಳ ಭೇಟಿಯಾಗಲಿದೆ. ನಿಮ್ಮ ವಿರಾಮ ಸಮಯವನ್ನು ಯಾರಾದರೂ ಕಸಿದುಕೊಳ್ಳಬಹುದು. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ. ಯಾರದೋ ಮಾತನ್ನು ಕೇಳಿ ಇಂದು ಕುಟುಂಬದವರ ಜೊತೆ ಕಲಹವಾಡುವಿರಿ. ನಿಮ್ಮ ತಿಳಿವಳಿಕೆಯನ್ನೇ ಪೂರ್ಣ ಸತ್ಯ ಎಂದು ತಿಳಿಯುವುದು ಬೇಡ. ಇಂದು ನಿಮಗೆ ಕಛೇರಿಯ ಕಾರ್ಯಗಳು ಅತಿಯಾಗುವುದು. ಸಂಗಾತಿಗೆ ನಿಮ್ಮ ನಡವಳಿಕೆಯಲ್ಲಿ ವ್ಯತ್ಯಾಸವು ಕಾಣಿಸುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿ ಹುಡುಕಿ. ನಿಮ್ಮ ಪ್ರತಿಭೆಯಿಂದ ಉನ್ನತ ಹುದ್ದೆಗೆ ಏರುವಿರಿ. ಚಂಚಲವಾದ ಮನಸ್ಸಿನಿಂದ ನಿಮಗೆ ಅನೇಕ ಒಳ್ಳೆಯ ಆಯ್ಕೆಗಳು ತಪ್ಪಿಹೋಗುವುದು. ಕೃತಜ್ಞತೆಯು ನಿಮ್ಮ ಉನ್ನತ ಸ್ಥಾನಕ್ಕೆ ಕಾರಣವಾಗುವುದು.
ತುಲಾ ರಾಶಿ: ಭೋಗವಸ್ತುವಿನಿಂದ ದುಃಖವಾಗುವುದು. ಭಿನ್ನ ಮನಸ್ಸುಗಳ ಜೊತೆ ನಿಮಗೆ ಹೊಂದಾಣಿಕೆ ಅಸಾಧ್ಯನಿಮ್ಮ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇರದು. ಜಾಣ್ಮೆಯು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು. ಇಡೀ ದಿನದ ನಿಮ್ಮ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವನ್ನು ದೊಡ್ಡದಾಗಿಸಿಕೊಳ್ಳುವಿರಿ. ನಿರ್ಮಾಣದ ಕಾರ್ಯವು ಬಹಳ ನಿಧಾನವಾಗುವುದು. ಯಾರೋ ಮಾಡಿದ ತಪ್ಪಿಗೆ ನಿಮ್ಮ ಕುತ್ತಿಗೆಗೆ ಬರುವುದು. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಡುವುದು. ಅಧಿಕಾರಿಗಳು ನಿಮ್ಮ ಬಗ್ಗೆ ತಪ್ಪಾದ ಭಾವನೆಗಳನ್ನು ಇಟ್ಟುಕೊಳ್ಳುವರು.
ವೃಶ್ಚಿಕ ರಾಶಿ: ನಿಮ್ಮ ಸ್ಥಾನವು ಉನ್ನತವಾಗಲು ಆಸೆಪಡುವಿರಿ. ವಿದೇಶದ ವ್ಯವಹಾರದಲ್ಲಿ ನಿಮಗೆ ವ್ಯಾಪಕತೆ ಸಿಗಲಿದೆ. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ಯಾರ ಜೊತೆಗಾದರೂ ಸೇರಿಕೊಳ್ಳುವಿರಿ. ಮಕ್ಕಳನ್ನು ಪಡೆಯುವ ಬಯಕೆ ಇರುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣವನ್ನು ಹೂಡಿಕೆ ಮಾಡಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡುವಿರಿ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಕಲೆ ಗೊತ್ತಿದೆ. ನಿಮ್ಮನ್ನು ಗುರುತಿಸಬೇಕು ಎನ್ನುವ ಆಸೆ ಇರುವುದು. ಅನುಪಯುಕ್ತ ಆಹಾರವನ್ನು ಸೇವಿಸುವುದು ಬೇಡ. ನಿಮ್ಮ ಬಗ್ಗೆ ಅನುಕಂಪ ಬರುವುದು. ಪ್ರೀತಿಸಿದವರು ನಿಮಗೆ ಸಮಯ ಕೊಡದೇ ಬೇಸರಿಸಿಕೊಳ್ಳುವಿರಿ.
ಧನು ರಾಶಿ: ಉಪ್ಪಿನ ಋಣವನ್ನು ತೀರಿಸುವ ಅವಕಾಶ ಬರಲಿದೆ. ಮಕ್ಕಳು ಧೃತಿಗೆಡದಂತೆ ಅವರಿಗೆ ಧೈರ್ಯವನ್ನು ತುಂಬುವ ಅನಿವಾರ್ಯತೆ ಇದೆ. ಪ್ರಭಾವೀ ವ್ಯಕ್ತಿಗಳಿಂದ ಇಂದಿನ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲ್ಲಿ ಹೆಚ್ಚು ಮಾತನಾಡುವಿರಿ. ಭೂವಿವಾದವಾಗುವ ಸಾಧ್ಯತೆ ಇದೆ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಚಿಂತಿಸುವುದು ಉತ್ತಮ. ನಿಮಗೆ ಅನೇಕ ವಿಚಾರಗಳಿಗೆ ಸಾಂತ್ವನ ಸಿಗಬಹುದು. ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯ ವರ್ಧನೆಗೆ ಮೀಸಲಿಡುವಿರಿ. ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಅಧಿಕವಾಗಿ ಖರೀದಿಸುವಿರಿ. ಸ್ವೇಚ್ಛೆಯಿಂದ ಇಂದಿನ ವ್ಯವಹಾರವು ಇರುವುದು. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು.
ಮಕರ ರಾಶಿ: ಗುರಿಯ ಬಗ್ಗೆ ನಿಮಗೆ ಸರಿಯಾದ ಚಿತ್ರಣ ಸಿಗದು. ದೈವಾನುಗ್ರಹವಿದ್ದರೆ ಏನನ್ನೂ ಸಾಧಿಸಬಹುದು ಎಂಬ ಆತ್ಮವಿಶ್ವಾಸವು ಇರುವುದು. ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಪವು ಹೆಚ್ಚಾಗಿರುವುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು. ಅತಿಯಾದ ಒತ್ತಡದಿಂದ ಹೊರಬರಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಓದು ಹೆಚ್ಚು ಫಲಿಸುವುದು. ಅನಗತ್ಯ ಓಡಾಟದಿಂದ ನಿಮಗೆ ಬೇಸರವಾಗಲಿದೆ. ಸಂಗಾತಿಯನ್ನು ನೀವು ಇಂದು ದೂರ ಮಾಡಿಕೊಳ್ಳುವಿರಿ. ಒಂಟಿಯಾಗಿ ಇರಲು ನಿಮಗೆ ಆಗದು. ಸಾಲ ಹೊರೆಯ ಸ್ವಲ್ಪ ಕಡಿಮೆ ಆಗುವುದು. ಉನ್ನತ ಅಭ್ಯಾಸವನ್ನು ಸಮಸ್ಯೆಯ ಕಾರಣದಿಂದ ಮುಂದೂಡುವಿರಿ.
ಕುಂಭ ರಾಶಿ: ಇಂದು ನಿಮ್ಮ ಉನ್ನತ ಅಭ್ಯಾಸಕ್ಕೆ ಎಲ್ಲಿಂದಲಾದರೂ ಆರ್ಥಿಕ ಸಹಾಯವು ಬರಬಹುದು. ಇಂದಿನ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹವನ್ನು ಜಾಗರೂಕಗೊಳಿಸುವುದು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ. ನಿಮ್ಮ ಚೌಕಟ್ಟನ್ನು ಮೀರಿ ವರ್ತಿಸುವುದು ಬೇಡ. ಅಸಾಮಾನ್ಯ ವಿಚಾರವನ್ನು ಸರಳೀಕರಿಸುವಿರಿ. ಇಂದು ಕೆಲವು ವಿಚಾರಕ್ಕೆ ನಿಮ್ಮ ಆಲಸ್ಯವು ವರವಾಗುವುದು. ಉದ್ಯೋಗದ ಸ್ಥಳದಲ್ಲಿ ಯಾರ ಜೊತೆಯೂ ಕಲಹ ಮಾಡಿಕೊಳ್ಳುವುದು ಬೇಡ. ನಿಮ್ಮ ಪರಿಸ್ಥಿತಿಯನ್ನು ಆಪ್ತರಿಗೆ ಹೇಳಿ ಸಮಾಧಾನ ಪಡುವಿರಿ. ಯಾವ ಕಾರ್ಯಕ್ಕೂ ಧೈರ್ಯದಿಂದ ಮುನ್ನುಗ್ಗುವುದು ಬೇಡ. ಹಿರಿಯರ ಮಾತನನ್ನು ಅನಿಸರಿಸಲು ನೀವು ಹಿಂದೇಟು ಹಾಕಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾದಾರು. ನಿಮ್ಮ ಸಹಾಯವನ್ನು ಕೇಳಿಯಾರು.
ಮೀನ ರಾಶಿ: ಹೊಸ ಯೋಜನೆಗಳು ನಿಮ್ಮ ಕೈ ಸೇರಬಹುದು. ನಿಮ್ಮ ನಿಮ್ಮಲ್ಲಿ ವಿನೀತ ಸ್ವಭಾವವಿದ್ದರೆ ಏನನ್ನೂ ಪಡೆಯಲು ಸಾಧ್ಯ. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಸ್ತ್ರೀಯರು ನಿಮ್ಮ ಮೇಲೆ ಏನಾದರೂ ಆರೋಪ ಮಾಡಿಯಾರು. ಪಕ್ಷಪಾತ ಮಾಡುವುದು ಬೇಡ. ಸಂಬಂಧಿಸಿದ ವಿಚಾರಕ್ಕೆ ನಿಮ್ಮ ಸಮರ್ಥನೆ ಇರಲಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ. ನಿಮ್ಮ ಮನಸ್ಸು ಬಹಳ ದುರ್ಬಲವಾಗಿದ್ದು ಬಲಮಾಡಿಕೊಳ್ಳು ಮಾರ್ಗವನ್ನು ಕಂಡುಕೊಳ್ಳಿ. ವ್ಯಾಪಾರದಲ್ಲಿ ಲಾಭವನ್ನೇ ಗಮನದಲ್ಲಿಟ್ಟು ಉಳಿದುದನ್ನು ಮರೆಯುವಿರಿ. ಆಪ್ತರನ್ನು ಬಿಟ್ಟುಕೊಡಲು ಮನಸ್ಸು ಒಪ್ಪದು. ಕುಟುಂಬದ ಭಿನ್ನಾಭಿಪ್ರಾಯವು ಸರಿಯಾಗುವುದು. ತಾಯಿಯು ನಿಮ್ಮ ಪರವಾಗಿ ನಿಲ್ಲುವಳು. ವಾಹನ ಖರೀದಿಸುವ ಯೋಚನೆ ಮಾಡವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.