ನಿತ್ಯ ಭವಿಷ್ಯ: ಮಾರ್ಚ್ 2, ಇಂದು ಈ ರಾಶಿಯವರು ಆರ್ಥಿಕ ಉಳಿತಾಯದ ಬಗ್ಗೆ ತಜ್ಞರ ಸಲಹೆ ಪಡೆಯುವುದು ಉತ್ತಮ.

ಮಾರ್ಚ್ 1ರ ಇಂದಿನ ರಾಶಿ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ? ನಿಮ್ಮ ಇಂದಿನ ದಿನದ ವಿಶೇಷತೆಗಳು ಹಾಗೂ ಪಂಚಾಂಗದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದಿನ ಪಂಚಾಂಗ (02 ಮಾರ್ಚ್ 2026):

  • ಸಂವತ್ಸರ: ವಿಶ್ವಾವಸು (ಶಾಲಿವಾಹನ ಶಕೆ ೧೯೪೮)
  • ಅಯನ: ಉತ್ತರಾಯಣ
  • ಋತು: ಶಿಶಿರ ಋತು
  • ಮಾಸ: ಫಾಲ್ಗುಣ (ಚಾಂದ್ರಮಾಸ), ಕುಂಭ (ಸೌರಮಾಸ)
  • ಪಕ್ಷ: ಶುಕ್ಲ ಪಕ್ಷ
  • ತಿಥಿ: ಚತುರ್ದಶೀ
  • ನಕ್ಷತ್ರ: ಆಶ್ಲೇಷಾ (ಮಹಾನಕ್ಷತ್ರ: ಶತಭಿಷಾ)
  • ವಾರ: ಸೋಮವಾರ
  • ಯೋಗ: ಅತಿಗಂಡ
  • ಕರಣ: ಗರಜ
  • ಸೂರ್ಯೋದಯ: ಬೆಳಿಗ್ಗೆ 06:41 | ಸೂರ್ಯಾಸ್ತ: ಸಂಜೆ 06:31
  • ಅಶುಭ ಕಾಲ: ರಾಹುಕಾಲ (08:10 – 09:39), ಯಮಗಂಡ ಕಾಲ (11:08 – 12:37), ಗುಳಿಕ ಕಾಲ (14:05 – 15:34)

ದ್ವಾದಶ ರಾಶಿಗಳ ಇಂದಿನ ಭವಿಷ್ಯ:

ಮೇಷ ರಾಶಿ: ನಿಮ್ಮ ಕೆಲವು ಜವಾಬ್ದಾರಿಗಳು ಬೇರೆಯವರ ಪಾಲಾಗಲಿದ್ದು, ಇದು ಕೊಂಚ ಬೇಸರ ತರಿಸಬಹುದು. ಆದಾಗ್ಯೂ, ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅಧ್ಯಯನಕ್ಕಿಂತ ಕೆಲಸದ ಕಡೆ ಹೆಚ್ಚು ಗಮನ ಹರಿಯುವುದು. ಹಳೆಯದನ್ನು ಮರೆತು ಮುನ್ನಡೆಯುವುದು ಒಳಿತು. ದೂರದಲ್ಲಿರುವ ಪೋಷಕರೊಂದಿಗೆ ಮಾತನಾಡಿ. ಹೊಸ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ಕಲೆಹಾಕುವಿರಿ.

ವೃಷಭ ರಾಶಿ: ಅನಗತ್ಯ ಸಮಾರಂಭಗಳಲ್ಲಿ ಪಾಲ್ಗೊಂಡು ಸಮಯ ವ್ಯರ್ಥ ಮಾಡದಿರಿ. ಇಂದು ಸರಿ-ತಪ್ಪುಗಳನ್ನು ವಿಶ್ಲೇಷಿಸುವುದು ಕಷ್ಟಕರ. ಯಾವುದೇ ವಸ್ತುಗಳನ್ನು ಬಳಸುವ ಮುನ್ನ ಪರಿಶೀಲಿಸಿ. ಮಕ್ಕಳ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದು. ಮೃದುವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ. ಕೆಲಸದತ್ತ ಹೆಚ್ಚು ಗಮನಹರಿಸಿ. ಬಂಧುಗಳೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

ಮಿಥುನ ರಾಶಿ: ಸರ್ಕಾರಿ ಕೆಲಸಗಳಿಗಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾಗಬಹುದು. ಯಾರೊಂದಿಗೂ ಜೋರು ಧ್ವನಿಯಲ್ಲಿ ಮಾತನಾಡುವುದು ಬೇಡ. ಹೊಸ ವ್ಯಾಪಾರ ಆರಂಭಿಸಲು ಅನುಭವಿಗಳ ಸಲಹೆ ಪಡೆಯಿರಿ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಿ. ಉನ್ನತ ಹುದ್ದೆಯ ಅವಕಾಶಗಳು ಬಂದರೂ ಕೆಲವು ಕಾರಣಗಳಿಂದ ಅದನ್ನು ನಿರಾಕರಿಸುವಿರಿ.

ಕರ್ಕಾಟಕ ರಾಶಿ: ನಿಮ್ಮ ಮಾತುಗಳಿಂದ ಇತರರಿಗೆ ನೋವಾಗದಂತೆ ಎಚ್ಚರವಹಿಸಿ. ಕಲಾಕ್ಷೇತ್ರದಲ್ಲಿರುವವರಿಗೆ ತಕ್ಕ ಪ್ರೋತ್ಸಾಹ ದೊರೆಯಲಿದೆ. ಕೆಲಸದ ವೇಗ ಕೊಂಚ ಕಡಿಮೆಯಾಗಬಹುದು. ದೂರದ ಸಂಬಂಧಿಕರ ಭೇಟಿಯಿಂದ ವಿವಾಹದ ಮಾತುಕತೆಗಳು ಮುನ್ನೆಲೆಗೆ ಬರಬಹುದು. ಕಳೆದುಹೋದ ವಸ್ತುಗಳು ವಿಳಂಬವಾಗಿ ಕೈಸೇರಲಿವೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬರದಂತೆ ಎಚ್ಚರವಹಿಸಿ.

ಸಿಂಹ ರಾಶಿ: ಅಪರಿಚಿತರೊಂದಿಗೆ ಅತಿಯಾದ ಸಲುಗೆ ಬೇಡ, ಎಚ್ಚರಿಕೆಯಿಂದ ವ್ಯವಹರಿಸಿ. ಭವಿಷ್ಯದ ಬಗ್ಗೆ ಸಣ್ಣಪುಟ್ಟ ಗೊಂದಲಗಳು ಕಾಡಬಹುದು. ಇತರರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಆರ್ಥಿಕ ಉಳಿತಾಯದ ಬಗ್ಗೆ ತಜ್ಞರ ಸಲಹೆ ಪಡೆಯುವುದು ಉತ್ತಮ. ಕೆಟ್ಟ ಹವ್ಯಾಸಗಳಿಂದ ದೂರಾಗುವಿರಿ. ಬೇರೆಯವರ ಒತ್ತಡಕ್ಕೆ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು.

ಕನ್ಯಾ ರಾಶಿ: ವ್ಯಾಪಾರದಲ್ಲಿ ನಿರೀಕ್ಷಿತ ವೇಗ ಇರುವುದಿಲ್ಲ. ಕಲಾವಿದರು ಅವಕಾಶಗಳಿಗಾಗಿ ಅಲೆದಾಡಬೇಕಾಗಬಹುದು. ಆರ್ಥಿಕ ಹಾಗೂ ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಬಿಸಿಬಿಸಿ ಚರ್ಚೆ ನಡೆಯಲಿದೆ. ಬಹುದಿನಗಳಿಂದ ಬಾಕಿ ಉಳಿದಿದ್ದ ವೈಯಕ್ತಿಕ ಕೆಲಸಗಳು ಹಾಗೆಯೇ ಉಳಿಯಬಹುದು. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಬೇಡ, ತಾಯಿಯ ಆರೋಗ್ಯದ ಕಡೆ ವಿಶೇಷ ಗಮನಹರಿಸಿ.

ತುಲಾ ರಾಶಿ: ಸಣ್ಣಪುಟ್ಟ ವಿಚಾರಗಳಿಗೂ ಕೋಪಗೊಳ್ಳುವಿರಿ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡುವಿರಿ. ಸಹೋದ್ಯೋಗಿಗಳಿಂದ ಸೂಕ್ತ ಸ್ಪಂದನೆ ಸಿಗದಿರಬಹುದು. ಆತುರದ ಮಾತುಗಳಿಂದ ಕಲಹ ಉಂಟಾಗುವ ಸಾಧ್ಯತೆ ಇದೆ. ನಟನಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. ಅನಾರೋಗ್ಯದ ಕಾರಣದಿಂದಾಗಿ ವಿಶ್ರಾಂತಿಯ ಮೊರೆಹೋಗುವಿರಿ.

ವೃಶ್ಚಿಕ ರಾಶಿ: ಸಾಮರ್ಥ್ಯಕ್ಕೂ ಮೀರಿದ ಕೆಲಸದ ಜವಾಬ್ದಾರಿ ಹೆಗಲೇರಬಹುದು. ಇಷ್ಟವಿಲ್ಲದಿದ್ದರೂ ಒತ್ತಾಯದ ಮೇರೆಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಕಷ್ಟದ ಸಮಯದಲ್ಲಿ ಸ್ನೇಹಿತರ ಸಹಾಯ ಧೈರ್ಯ ತುಂಬಲಿದೆ. ಖರ್ಚಿಗೆ ಕಡಿವಾಣ ಹಾಕುವಿರಿ. ಉದ್ಯೋಗದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗಬಹುದು, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ಧನು ರಾಶಿ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಸಣ್ಣಪುಟ್ಟ ಸವಾಲುಗಳನ್ನು ಎದುರಿಸಿದರೂ ದಾಂಪತ್ಯ ಜೀವನ ಮಧುರವಾಗಿರುತ್ತದೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಪಡೆಯಬಹುದು. ಇತರರ ಹೊಗಳಿಕೆಯಿಂದ ಸಂಕೋಚಕ್ಕೊಳಗಾಗುವಿರಿ. ಅತಿಯಾದ ಓಡಾಟದಿಂದ ಆಯಾಸವಾಗಬಹುದು. ನಿಮ್ಮ ಗುರಿ ಸಾಧನೆಗೆ ಇತರರು ಪ್ರೇರಣೆಯಾಗಲಿದ್ದಾರೆ.

ಮಕರ ರಾಶಿ: ಸಂಗಾತಿಯೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಹಳೆಯ ಆಸ್ತಿ ಮಾರಾಟ ಅಥವಾ ಬಾಡಿಗೆಯಿಂದ ಆರ್ಥಿಕ ಲಾಭವಾಗಲಿದೆ. ವಾಹನ ಅಥವಾ ಜಮೀನು ನಿರ್ವಹಣೆಗೆ ಹಣ ಖರ್ಚಾಗಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗುವ ಬಗ್ಗೆ ಯೋಚಿಸುವಿರಿ. ಉದ್ಯೋಗದ ಸ್ಥಳದಲ್ಲಿನ ಕೆಲವು ವಿಚಾರಗಳಿಂದ ಅಸಮಾಧಾನ ಮೂಡಬಹುದು.

ಕುಂಭ ರಾಶಿ: ವೃತ್ತಿ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವಿರಿ. ಸಕಾರಾತ್ಮಕ ಚಿಂತನೆಗಳು ನಿಮ್ಮಲ್ಲಿ ಮೂಡಲಿವೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಬರಲಿದೆ. ಸಮಾಜ ಸೇವೆಯಲ್ಲಿ ಆಸಕ್ತಿ ಹೆಚ್ಚಾಗುವುದು. ಮನೆಗೆ ಅತಿಥಿಗಳು ಬರಲಿದ್ದಾರೆ, ಇದರಿಂದ ನಿಮ್ಮ ದೈನಂದಿನ ಕಾರ್ಯಗಳಲ್ಲಿ ಬದಲಾವಣೆಯಾಗಬಹುದು. ವಾಹನ ಖರೀದಿಸುವ ಸಾಧ್ಯತೆ ಇದೆ.

ಮೀನ ರಾಶಿ: ಆಸ್ತಿಯ ಮೇಲಿನ ಹೂಡಿಕೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲಿದೆ. ಬಹುದಿನಗಳ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಾಗುವುದು. ಕೆಲಸದ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಆರಂಭಿಸಿದರೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬಹುದು.

Leave a Reply

Your email address will not be published. Required fields are marked *