ಅಕ್ಟೋಬರ್ 16: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಮಘಾ, ಯೋಗ : ಸಿದ್ಧಿ, ಕರಣ : ವಣಿಜ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 58 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:34 – 15:02, ಗುಳಿಕ ಕಾಲ 09:08 – 10:37 ಯಮಗಂಡ ಕಾಲ 06:11 – 07:40
ಮೇಷ ರಾಶಿ: ಎಲ್ಲದಕ್ಕೂ ಇನ್ನೊಬ್ಬರನ್ನು ದೂರಿ ಸುಮ್ಮನಾಗುವಿರಿ. ಮಕ್ಕಳ ಭವಿಷ್ಯಕ್ಕೆ ಸಂಪತ್ತು ಮಾಡುವ ಯೋಚನೆ ಬರುವುದು. ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಪತ್ನಿಯ ಅನಗತ್ಯ ಖರ್ಚಿಗೆ ಕಡಿವಾಣ ಹಾಕುವಿರಿ. ಇದಕ್ಕಾಗಿ ವಾಗ್ವಾದವು ನಡೆಯಬಹುದು. ಮಕ್ಕಳನ್ನು ನಿರ್ಲಕ್ಷಿಸಿದರೆ ಕಷ್ಟವಾದೀತು. ನಿಮ್ಮ ಇಂದಿನ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಬೇಕಾದೀತು. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳದೇ ಪರಿಚಿತರನ್ನು ಕೇಳಿ. ಅಧಿಕಾರದ ವಿಸ್ತರಣೆಯ ಮುನ್ಸೂಚನೆ ಸಿಗುವುದು. ಎಂದೋ ಆದ ದೈಹಿಕ ಪೀಡೆಯು ಪುನಃ ಕಾಣಿಸಿಕೊಳ್ಳಬಹುದು. ವಿವಾಹ ಸಂಭ್ರಮದ ವಾತಾವರಣ ಮನೆಯಲ್ಲಿ ಇರಲಿದೆ. ಉದ್ಯೋಗಸ್ಥ ಸ್ತ್ರೀಯರು ಮಾನಸಿಕ ಕಿರಿಕಿರಿಯನ್ನು ಅನುಭವಿಸುವರು. ಲಾಭದ ದೃಷ್ಟಿಯಿಂದ ಕೆಲಸ ಮಾಡದೇ ಸಂತೋಷವನ್ನು ಹುಡುಕಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಯಾರಾದರೂ ತಮ್ಮ ಕಾರ್ಯವನ್ನು ಮಾಡಲು ಒತ್ತಾಯಿಸಬಹುದು.
ವೃಷಭ ರಾಶಿ: ಸಾಹಸ ಪ್ರವೃತ್ತಿಗೆ ಮನೆಯಿಂದ ಬ್ರೇಕ್ ಬೀಳುವುದು. ಹಿರಿಯರ ಮೇಲಿನ ಪ್ರೀತಿಯಿಂದ ನೀವು ಸೇವೆ ಮಾಡುವಿರಿ. ನಿಮ್ಮ ಸ್ಥಾನದ ರಕ್ಷಣೆಗಾಗಿ ಇನ್ನೊಬ್ಬರ ಮೇಲೆ ಆರೋಪವನ್ನು ಮಾಡುವಿರಿ. ಕೆಲವು ಕೆಲಸಗಳಿಗೆ ನೀವು ಆಲಸ್ಯವನ್ನು ತೋರುವಿರಿ. ನಿಮ್ಮ ಸಂಕಟಕ್ಕೆ ಸ್ಪಂದಿಸಿದವರನ್ನು ನೀವು ಗೌರವಿಸಿ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯ ಕೊರತೆ ಕಾಣಿಸುವುದು. ನಕಾರಾತ್ಮಕ ಆಲೋಚನೆಯನ್ನು ನೀವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಆಸಕ್ತಿಯ ಕ್ಷೇತ್ರವೂ ನಿಮಗೆ ಇಷ್ಟವಾಗದೇ ಹೋಗುವುದು. ಅಪವಾದದ ಭಯ ನಿಮ್ಮನ್ನು ಕಾಡುವುದು. ನಿಮ್ಮ ನಿರ್ಧಾರಗಳು ಬಲವಾದಂತೆ ಕಾರ್ಯಗಳಲ್ಲಿಯೂ ದೃಢತೆ ಇರಲಿ. ಸಿಕ್ಕ ಅಧಿಕಾರವನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಿ. ದೂರಾಲೋಚನೆಯನ್ನು ಅತಿಯಾಗಿ ಇಟ್ಟುಕೊಳ್ಳುವುದು ಬೇಡ. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ವಿಸ್ತರಿಸುವ ಯೋಚನೆ ಮಾಡುವಿರಿ.
ಮಿಥುನ ರಾಶಿ: ನೀವು ಬಿಟ್ಟ ಬಾಣವೇ ನಿಮ್ಮನ್ನು ಹುಡುಕಿಬರಬಹುದು. ಹಣವು ತಿರುಗಿ ಬರುವುದು ನಿಮಗೆ ಸಮಾಧಾನ ತರಲಿದೆ. ಹಣಕಾಸಿನ ವ್ಯವಹಾರದಿಂದ ನಿಮಗೆ ಅಪವಾದವು ಬರಬಹುದು. ದಾಂಪತ್ಯದಲ್ಲಿ ಅನಗತ್ಯ ವಾಗ್ವಾದಗಳು ನಡೆಯಬಹುದು. ಕುಟುಂಬದಲ್ಲಿ ಕೆಲವು ವಿಷಯಗಳನ್ನು ನಿಮಗೆ ಹೇಳದೇ ರಹಸ್ಯವಾಗಿ ಇಡುವರು. ಯಾರದೋ ಸಿಟ್ಟನ್ನು ಇನ್ನಾರದೋ ಮೇಲೆ ತೀರಿಸಿಕೊಳ್ಳುವಿರಿ. ಹಿತಶತ್ರುಗಳ ಬಾಧೆಯಿಂದ ತಪ್ಪಿಸಿಕೊಳ್ಳುವ ತನಕ ನಿಮ್ಮ ಯಾವ ಉದ್ಯೋಗವೂ ಊರ್ಜಿತವಾಗದು. ಆರೋಗ್ಯದ ಪುನಶ್ಚೇತನಕ್ಕೆ ಇನ್ನಷ್ಟು ಸಮಯಬೇಕಾಗುವುದು. ಪಾಲುದಾರಿಕೆಯ ವ್ಯವಹಾರವು ನಿಮಗೆ ಸಾಕು ಎನಿಸಬಹುದು. ಹಳೆಯ ವಾಹನವನ್ನು ನೀವು ಮಾರಾಟಮಾಡುವಿರಿ. ನೀವು ಇಂದು ಹೆಚ್ಚು ಒಂದೇ ಚಿಂತೆಯಲ್ಲಿ ಮಗ್ನರಾಗಿ ಇರುವಿರಿ. ಮನಸ್ಸು ನಿರ್ಲಿಪ್ತವಾಗಿ ಇರುವುದು. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ. ವೈಯಕ್ತಿಕ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಿ. ಶತ್ರುಗಳಿಗೆ ತಿರುಗೇಟು ನೀಡಲು ಸಮಯ ಕಾಯುವಿರಿ.
ಕರ್ಕಾಟಕ ರಾಶಿ: ಕಣ್ಣಿನ ದೋಷಕ್ಕೆ ಸೂಕ್ತ ಪರಿಹಾರ ಬೇಕು. ಹಳೆಯ ಪ್ರೀತಿಯಿಂದ ನಿಮಗೆ ಕಷ್ಟವಾದೀತು. ನೀವು ಅಂದುಕೊಂಡ ಕೆಲಸವು ಆಗದೇಹೋದೀತು. ಸರ್ಕಾರಿ ದಾಖಲೆಗಳನ್ನು ಭದ್ರವಾಗಿ ಇರಿಕೊಳ್ಳಿ. ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಚರ್ಚೆಯು ನಡೆಯಬಹುದು. ವಾಹನ ಚಲಾಯಿಸಲು ನಿಮಗೆ ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಎತ್ತಿಹೇಳಬಹುದು. ಸಾಹಿತ್ಯದ ಆಸಕ್ತರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಎಲ್ಲವನ್ನೂ ಬಾಹುಬಲದಿಂದ ಸಾಧಿಸುತ್ತೇನೆ ಎಂಬ ಹುಂಬುತನ ವ್ಯರ್ಥ. ಬುದ್ಧಿಯನ್ನು ಬಳಸಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ಹೊಸ ಉಡುಪುಗಳ ಬಳಕೆಯನ್ನು ಹೆಚ್ಚು ಮಾಡುವಿರಿ. ಇನ್ನೊಬ್ಬರ ಮೇಲಿನ ಅಸಮಾಧಾನವನ್ನು ನೀವು ಯಾವುದೋ ಸಂದರ್ಭದಲ್ಲಿ ಹೊರಹಾಕುವಿರಿ. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಯಾವುದೇ ಪ್ರೇರಣೆ ನಿಮಗೆ ಸಿಕ್ಕಿ, ಯೋಜನೆ ಬದಲಾಯಿಸುವಿರಿ. ಹೊಸ ಹೂಡಕೆ ನಿಮಗೆ ಪ್ರಶಸ್ತ ಎನಿಸಬಹುದು. ಇತರರ ಮಾತುಗಳು ನಿಮಗೆ ಹಿಡಿಸದೇ ಹೋಗಬಹುದು.
ಸಿಂಹ ರಾಶಿ: ಅತಿಥಿ ಸತ್ಕಾರದಿಂದ ಸಂತೋಷ ಪ್ರಾಪ್ತಿ. ನೀವು ಕೈಗೊಂಡ ಪ್ರಯಾಣವು ಸುಖಕರವಾಗದೇ ಇರಬಹುದು. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಆಡಳಿತಕ್ಕೆ ಸಂಬಂಧಿಸಿದಂತೆ ಲೋಪ ದೋಷಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭವನ್ನು ಎದುರಿಸುವಾಗ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಗೊಂದಲವು ಬರಬಹುದು. ಆಪ್ತರ ಜೊತೆಗಿನ ಒಡನಾಟವು ನಿಮ್ಮ ಭಾರವಾದ ಮನಸ್ಸನ್ನು ಹಗುರಗೊಳಿಸುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಕಡಿಮೆ ಇರಬಹುದು. ರಾಜಕೀಯವು ನಿಮ್ಮ ಪಾಲುದಾರಿಕೆಯನ್ನು ಪ್ರವೇಶಿಸಲಿದೆ. ಸ್ನೇಹಿತರ ನಡುವಿನ ಬಾಂಧವ್ಯವು ವೃದ್ಧಿಯಾಗಲಿದೆ. ಸ್ತ್ರೀಸುಖವನ್ನು ನೀವು ಅನುಭವಿಸುವಿರಿ. ಯಾರಿಗೂ ಹೇಳದೇ ಎಲ್ಲಿಗಾದರೂ ಹೋಗಿ ಆತಂಕವನ್ನು ಸೃಷ್ಟಿ ಮಾಡುವಿರಿ. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ವೃತ್ತಿಯಲ್ಲಿ ಜವಾಬ್ದಾರಿಯನ್ನು ಬೇರೆಯವರಿಗೆ ಹಾಕಿ, ಸುಮ್ಮನಾಗುವಿರಿ.
ಕನ್ಯಾ ರಾಶಿ; ಉದ್ಯೋಗದ ಸಮಸ್ಯೆಯಿದ್ದ ನಿಮಗೆ ಅನಾಯಾಸವಾಗಿ ಸಿಗುವುದು. ಆರ್ಥಿಕ ತೊಂದರೆಯನ್ನು ನೀವು ಸಲೀಸಾಗಿ ಸರಿಮಾಡಿಕೊಳ್ಳುವಿರಿ. ಸಮಯ ಹಾಗೂ ಸಂದರ್ಭಗಳನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳ ಜೊತೆ ಹಂಚಿಕೊಳ್ಳಿ. ವ್ಯಾಪರದ ವಹಿವಾಟನ್ನು ಮಾಡುತ್ತಿದ್ದರೆ ನಿಮಗೆ ಹೆಚ್ಚು ಕೆಲಸವೂ ಪ್ರಶಂಸೆಯೂ ಆರ್ಥಿಕಬಲವೂ ಬರಲಿದೆ. ಆಭರಣಗಳನ್ನು ಖರೀದಿಸುವ ಇಚ್ಛೆ ಇದ್ದರೆ ಖರೀದಿಸಿ. ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡುವುದು. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಅತಿಯಾದ ಶ್ರದ್ಧೆಯು ಬರುವುದು. ಪ್ರೇಮದ ಕಾರಣದಿಂದ ಆಟವಾಡುವಿರಿ. ನಿಮ್ಮದಲ್ಲದ ವಸ್ತುಗಳನ್ನು ನೀವು ಇಟ್ಟುಕೊಳ್ಳದೇ ಹಿಂದಿರುಗಿಸಿ. ಆಲಸ್ಯವನ್ನು ಬಿಟ್ಟು ಇಂದು ಕಾರ್ಯದಲ್ಲಿ ಹೆಚ್ಚು ತೊಡಗುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ವೃತ್ತಿಯಲ್ಲಿ ಭಡ್ತಿ ಕಷ್ಟವಾಗಬಹುದು. ಸಂಗಾತಿಯು ನಿಮಗೆ ಬೇಸರವಾಗಬೇಕೆಂದೇ ಮಾತನಾಡಬಹುದು.
ತುಲಾ ರಾಶಿ: ದುಡಿಮೆಯಲ್ಲಿ ಗೌರವ ಇಟ್ಟುಕೊಳ್ಳಿ. ಅಪರಿಚಿತ ಕರೆಗಳಿಂದ ನಿಮಗೆ ಭಯವಾಗಬಹುದು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗದೇ ಇರುವುದು ನಿಮ್ಮನ್ನು ಖಿನ್ನಗೊಳಿಸೀತು. ಋಣ ಬಾಧೆಯು ಮುಕ್ತಾಯವಾಯಿತು ಎನ್ನುತ್ತಿದ್ದಂತೆ ಇನ್ನೊಂದು ಆರಂಭವಾಗುವುದು. ಬಂಧುಗಳಿಂದ, ಮನೆಯ ಹಿರಿಯರಿಂದ ನೀವು ಅಲಕ್ಷ್ಯಕ್ಕೆ ಒಳಗಾಗುವಿರಿ. ನಿಮ್ಮ ಹೊಲಸು ಮಾತುಗಳಿಂದ ನಿಮ್ಮೊಂದಿಗೆ ಕಲಹ. ಇಂದು ನಿಮಗೆ ಬಹಳ ಬೇಸರವನ್ನು ತರಿಸುವುದು. ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುವಿರಿ. ಇಷ್ಟು ದಿನ ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ನಿರ್ವಹಿಸಲಾಗಾದೇ ಕಷ್ಟಪಡುವಿರಿ. ಬಂಧುಗಳ ಕಡೆಯಿಂದ ನಿಮಗೆ ಶುಭವಲ್ಲದ ವಾರ್ತೆಯೊಂದು ಬರಬಹುದು. ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಕಾರ್ಯದಲ್ಲಿ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಿ.
ವೃಶ್ಚಿಕ ರಾಶಿ: ನೌಕರರು ಅಸಮಾಧಾನವನ್ನು ತೋರಿಸಿ, ಸಿಟ್ಟು ತರಿಸುವರು. ಯಾವುದಾದರೂ ಕಾರ್ಯಕ್ಕೆ ನಿಮ್ಮವರ ವಿರೋಧ ಬರಬಹುದು. ಇನ್ನೊಬ್ಬರಿಂದ ಪ್ರೇರಿತರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ಆರ್ಥಿಕತೆಯ ಮೇಲೆ ನಿಮಗೆ ಮೋಹವು ಕಡಿಮೆ ಆಗಬಹುದು. ವಂಚನೆಗೆ ಪ್ರತಿವಂಚನೆಯನ್ನು ಮಾಡುವ ಬುದ್ಧಿಯು ಬರಬಹುದು. ಆಶಿಸ್ತಿನ ಕೆಲಸಕ್ಕೆ ಹಿರಿಯರಿಂದ ಬೈಸಿಕೊಳ್ಳುವಿರಿ. ಅಪರಿಚಿತ ವ್ಯಕ್ತಿಯಿಂದ ತೊಂದರೆಗಳು ಎದುರಾಗಬಹುದು. ಭವಿಷ್ಯದ ಬಗ್ಗೆ ಅಸ್ಪಷ್ಟ ಆಲೋಚನೆಗಳು ನಿಮಗೆ ಸಮಾಧಾನವನ್ನು ತರದು. ಆಪ್ತರ ಜೊತೆ ನಿಮ್ಮ ಸಮಸ್ಯೆಯನ್ನು ಹಂಚಿಕೊಂಡು ನಿಶ್ಚಿಂತರಾಗಿ. ಆರೋಗ್ಯದ ಬಗ್ಗೆ ಗಮನವು ಅವಶ್ಯಕ. ಇಷ್ಟದ ದೇವರ ಸನ್ನಿಧಿಯಲ್ಲಿ ಮನಶ್ಶಾಂತಿ ಇರುವುದು. ತಂದೆಯ ಕಡೆಯಿಂದ ನಿಮಗೆ ಉದ್ಯೋಗಕ್ಕೆ ಸಹಕಾರವನ್ನು ಕೊಡಬಹುದು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಇಂದು ನಿದ್ರೆಗೆ ಯೋಚನೆ ತೊಂದರೆಮಾಡುವುದು.
ಧನು ರಾಶಿ: ಒಬ್ಬರಿಗೆ ಸಾಧ್ಯವಾಗದ ಕಾರ್ಯಕ್ಕೆ ಮತ್ತೊಬ್ಬರನ್ನು ಜೋಡಿಸಿಕೊಳ್ಳಿ. ಕೌಟುಂಬಿಕ ಜವಾಬ್ದಾರಿಗಳು ಬರಬಹುದು. ನಿಮ್ಮ ಕಾರ್ಯಕ್ಕೆ ಹೆಚ್ಚಿನ ವೇತನವು ಸಿಗಬಹುದು. ಅನಗತ್ಯ ಖರ್ಚನ್ನು ಮಾಡಬೇಕಾಗಬಹುದು. ದೂರದ ಬಂಧುಗಳ ಭೇಟಿಯು ಸಂತಸವನ್ನು ಕೊಡಬಹುದು. ಎದುರಿನವರ ಜೊತೆ ನಿಮ್ಮದೇ ಸರಿ ಎಂಬಂತೆ ತಪ್ಪಿದ್ದರೂ ವಾದಿಸುವಿರಿ. ಶತ್ರುಗಳನ್ನು ತಿಳಿದುಕೊಳ್ಳುವ ಅಶಕ್ತಿಯು ನಿಮಗೆ ಇರುವುದು. ಆತುರದಿಂದ ಯಾವ ವ್ಯವಹಾರವನ್ನೂ ಮಾಡುವುದು ಬೇಡ. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಹಾಕಿಕೊಳ್ಳಿ. ಅಹಂಕಾರದಿಂದ ಬೀಗುವ ಅವಶ್ಯಕತೆ ಇಲ್ಲ. ಸಮಾಧಾನದಿಂದ ನೀವು ಮುಂದುವರಿಯುವುದು ಸೂಕ್ತ. ಪ್ರಾಪ್ತ ವಯಸ್ಕರಿಗೆ ವಿವಾಹದ ತಯಾರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೋವ್ಯಥೆಯ ಕಾರಣ ಎಲ್ಲರ ಮೇಲೂ ಸಿಟ್ಟಾಗುವಿರಿ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ಯಂತ್ರದಿಂದ ಕೆಲಸ ಮಾಡುವವರಿಗೆ ಕಷ್ಟವಾದೀತು. ಇಂದು ನಿಮಗೆ ಅಸ್ವತಂತ್ರತೆ ಕಾಡುವುದು.
ಮಕರ ರಾಶಿ: ನ್ಯಾಯವಾದಿಗಳಗೆ ಜಯ ಸಿಗುವುದು. ನಿಮ್ಮಿಂದ ಉಪಕಾರ ಪಡೆದವರು ಕೃತಜ್ಞತೆ ಸಲ್ಲಿಸಬಹುದು. ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ನಿಮ್ಮ ಮಾತಿನ ಹಾಸ್ಯವು ಇನ್ನೊಬ್ಬರಿಗೆ ನೋವನ್ನು ಮಾಡೀತು. ಆಕಸ್ಮಿಕ ಧನಲಾಭದ ನಿರೀಕ್ಷೆಯಲ್ಲಿ ಇರುವಿರಿ. ಇನ್ನೊಬ್ಬರ ಮೇಲಿಟ್ಟ ನಂಬಿಕಯು ಕಳೆದುಹೋಗಬಹುದು. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ಉದ್ಯೋಗದ ಕಾರಣ ಹೊರಗಡೆ ಹೋಗಬೇಕಾಗಬಹುದು. ಕೃಷಿಯ ಕಾರ್ಯಗಳಿಗೆ ಮಳೆಯಿಂದ ತೊಂದರೆ. ನಿಷ್ಠುರ ನಡತೆಯ ಕಾರಣ ನೀವು ಎಲ್ಲರಿಂದ ದೂರವಿರಬೇಕಾಗಬಹುದು. ನಿಮ್ಮದೇ ಕೆಲಸಗಳನ್ನು ಮಾಡುತ್ತ ಆರಾಮಾಗಿ ದಿನವನ್ನು ಕಳೆಯುವಿರಿ. ವ್ಯಾಪಾರಸ್ಥರು ಬಹುಮಟ್ಟಿಗೆ ಲಾಭವನ್ನೇ ಪಡೆಯುವರು. ಹಿರಿಯರಿಂದ ಆಶೀರ್ವಾದ ಸಿಗಲಿದೆ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ.
ಕುಂಭ ರಾಶಿ: ಅಧಿಕಾರಿಗಳು ತಪಾಸಣೆಗೆ ಓಡಾಟ ಮಾಡುವಿರು. ದೈವಭಕ್ತಿಯಿಂದ ನೀವು ನೆಮ್ಮದಿ ಕಾಣಲು ಸಾಧ್ಯ. ಇಂದು ಹೆಚ್ಚು ಮಾನಸಿಕ ಒತ್ತಡವು ಇರದಿದ್ದರೂ ಕೆಲಸವು ಬಹಳ ಇರಲಿದೆ. ಒಂದು ಕ್ಷಣವೂ ವಿರಾವಿಲ್ಲದಂತೆ ಕಾರ್ಯವನ್ನು ಮಾಡುವಿರಿ. ಇಷ್ಟವಿಲ್ಲದ ಕಾರ್ಯಕ್ಕೆ ಎಷ್ಟೇ ಒತ್ತಾಯ ಮಾಡಿದರೂ ನೀವು ಒಪ್ಪುವುದಿಲ್ಲ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಲು ನೀವು ಬಯಸುವಿರಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಅಪರಿಚಿತರ ನಿಮಗೆ ಕೆಲವು ತೊಂದರೆಗಳು ಬರಬಹುದು. ಆಹಾರ ಸೇವನೆಗೆ ಸಮಯ ನಿಗದಿ ಇರಲಿ. ಸೌಂದರ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ನಿಮ್ಮ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸುವಿರಿ. ಉನ್ನತ ವಿದ್ಯಾಭ್ಯಾಸವನ್ನು ಮಾಡುವ ಇಚ್ಛೆಯನ್ನು ಉಳಿಸಿಕೊಳ್ಳುವಿರಿ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ.
ಮೀನ ರಾಶಿ: ಆದಾಯದ ಪ್ರಮಾಣದ ಅಧಿಕ. ಉದ್ಯೋಗ ಬದಲಾವಣೆಯು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಅನುಮಾನದ ಕಾರಣದಿಂದ ಸಂಗಾತಿಯನ್ನು ದ್ವೇಷಿಸುವಿರಿ. ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ತೆಗೆದುಕೊಳ್ಳುವಿರಿ. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವನ್ನು ಮಾಡಬೇಕಾದೀತು. ಅಪರಿಚಿತರು ಆಪ್ತರಾಗಬಹುದು ಮಾತುಕತೆಯಿಂದ. ದುರಭ್ಯಾಸಕ್ಕೆ ಅವಕಾಶಗಳು ಬರಬಹುದು. ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕಾಗುವುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ವರ್ತನೆಯನ್ನು ಯಾರಾದರೂ ಕಂಡು ನಕ್ಕಾರು. ಅಹಂಕಾರವು ನಿಮ್ಮನ್ನೇ ನುಂಗಬಹುದು. ನಿಮ್ಮ ವೇಷಭೂಷಣದ ಬಗ್ಗೆ ಟೀಕೆಗಳನ್ನು ಮಾಡಬಹುದು. ಯಾವುದನ್ನೂ ನೀವು ಮನಸ್ಸಿಗೆ ತೆಗೆದುಕೊಳ್ಳದೇ ಇರುವಿರಿ. ಆರ್ಥಿಕತೆಯು ಬಲವನ್ನು ಪಡೆದುಕೊಂಡಿದ್ದು ನಿಮಗೆ ಸಂತೋಷವನ್ನು ತರುವುದು. ವಿವಿಧ ಮೂಲಗಳಿಂದ ಧನಾಗಮನವಾಗುವುದು.
Views: 58