Daily Horoscope: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಧೃತಿ, ಕರಣ : ವಣಿಜ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 53 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:03 – 13:31 ಗುಳಿಕ ಕಾಲ 10:36 – 12:03 ಯಮಗಂಡ ಕಾಲ 07:41 – 09:08
ಮೇಷ ರಾಶಿ :
ಇಂದು ನೀವು ಯಾವುದೇ ವ್ಯಕ್ತಿ, ಘಟನೆಯನ್ನು ಆಧರಿಸಿ ಏನನ್ನೂ ಹೇಳಬೇಡಿ. ಪ್ರಭಾವೀ ವ್ಯಕ್ತಿಗಳಿಗೆ ನಿಮ್ಮಿಂದ ಸಹಾಯವಾಗಲಿದೆ. ಇಂದು ಶ್ರಮಪಟ್ಟು ಮಾಡಿದ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗಬಹುದು. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗದು. ನಿಮ್ಮ ದಾರಿಯ ಬಗ್ಗೆ ನಿಮಗೆ ವಿಶ್ವಾಸವು ಇರಲಿ. ನಿಮ್ಮಿಂದ ಕೆಲಸವನ್ನು ಮಾಡಿಕೊಳ್ಳಲು ಹೊಗಳಬಹುದು. ಉದ್ಯೋಗದಲ್ಲಿ ಬಡ್ತಿಯನ್ನು ನಿರೀಕ್ಷಿಸಬಹುದು. ಬಂಧುಗಳಿಗೆ ನಿಮ್ಮ ಆಗಮನವು ಇಂದು ಇಷ್ಟವಾಗದು. ನಿಮ್ಮ ಇಂದಿನ ಕಾರ್ಯದಲ್ಲಿ ಶ್ರದ್ಧೆಯ ಕಡಿಮೆ ಆಗಬಹುದು. ತಿಳಿವಳಿಕೆಯ ಕೊರತೆಯಿಂದ ನೀವು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ. ನಿಮ್ಮಂತೆ ವಿಭಿನ್ನತೆಯನ್ನು ಇತರರಿಂದ ನಿರೀಕ್ಷಿಸುವಿರಿ. ನಿಮಗೆ ಇಂದು ಚಂಚಲವಾದ ಮನಸ್ಸು ಇರಲಿದ್ದು ಸ್ಪರ್ಧೆಯಲ್ಲಿ ಸೋಲಬೇಕಾಗಬಹುದು. ಸ್ತ್ರೀಯರು ತಮ್ಮನ್ನು ಅತಿಯಾಗಿ ಅಂದುಕೊಳ್ಳುವ ಸನ್ಮಿವೇಶ ಬರಬಹುದು. ಸಣ್ಣ ವ್ಯಾಪರಿಗಳಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರವಿರಿಸಬೇಕಾಗುವುದು.
ವೃಷಭ ರಾಶಿ :
ಎಷ್ಟೇ ಆಪ್ತರಾದರೂ ಅವರಿಂದ ಹಣವನ್ನು ಪಡೆಯಲಾರಿರಿ. ವ್ಯವಹಾರಕ್ಕಿಂತ ಬಾಂಧವ್ಯ ನಿಮಗೆ ಮುಖ್ಯವಾಗಿರುವುದು. ಕೆಲವರು ಮಾತು ನಿಮಗೆ ನಿರುತ್ಸಾಹವನ್ನು ತರಿಸುವುದು. ಇಂದು ನಿಮ್ಮ ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ಈ ಇರುವವರು ಇನ್ನು ನಿಮಗೆ ಸಿಗದೇ ಹೋಗಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿಯು ಇರಲಿದ್ದು ಅಡೆತಡೆಗಳೂ ಇರಲಿವೆ. ನಿಯಮದ ಉಲ್ಲಂಘನೆಯ ಕಾರಣ ದಂಡ ತೆರಬೇಕಾದ ಸ್ಥಿತಿ ಇರಲಿದೆ. ನಿಮ್ಮಿಂದಾಗ ಕಾರ್ಯವನ್ನು ಬಿಟ್ಟುಬಿಡುವಿರಿ. ನಿಮಗೆ ಸಿಗುವ ಅವಕಾಶಗಳನ್ನು ಅನ್ಯರು ಬಳಸಿಕೊಳ್ಳುವರು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹ ಭಂಗವನ್ನು ಮಾಡುವುದು. ಹಳೆಯ ಸ್ನೇಹಿತರು ಉಪಕಾರ ಸ್ಮರಣೆಯ ಜೊತೆ ಸಹಾಯ ಮಾಡುವರು. ನಿಮಗೆ ನೀವು ಒಂಟಿ ಎನಿಸಬಹುದು. ಇನ್ನೊಬ್ಬರ ಮೇಲೆ ನಿಮಗೆ ತಪ್ಪನ್ನು ಹೇರಲಾಗದು. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು.
ಮಿಥುನ ರಾಶಿ :
ಬೋಧನೆಯ ಪ್ರಗತಿ ನಿಮಗೆ ಸಂತೋಷ ಕೊಡುವುದು. ನಿಮ್ಮ ಭರವಸೆಯು ಸುಳ್ಳಾಗುವುದು. ಯೋಚನೆಯ ದಿಕ್ಕನ್ನು ಬದಲಿಸದರೆ ತೊಂದರೆಗಳಿಗೆ ಉತ್ತರವೂ ಸಿಗಲಿದೆ. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ಕದಡುವುದು. ಅನ್ನಿಸಿದ್ದನ್ನು ಕೂಡಲೇ ಹೇಳುವುದು ಬೇಡ. ಸಮಯಕ್ಕಾಗಿ ಕಾಯಿರಿ. ನೀವು ದೂರಪ್ರಯಾಣ ಮಾಡಿ ಅತಂತ್ರರಂತೆ ಆಗುವಿರಿ. ಮಾಡಬೇಕೆಂದು ಹೊರಟ ಕೆಲಸಕ್ಕೆ ತೊಂದರೆ ಬಂದರೂ ಬಿಡದೇ ಮುಂದುವರಿಸುವಿರಿ. ಆದಾಯದ ವಿಚಾರದಲ್ಲಿ ನೀವು ಬಹಳ ಹಿಂದೆ. ನಿಮ್ಮ ಮೇಲಿನ ಗೌರವವು ನಿಮ್ಮ ನಡವಳಿಕೆಯಿಂದ ಇನ್ನೂ ಹೆಚ್ಚಾಗಬಹುದು. ಸುಖವಾದ ಪ್ರಯಾಣವನ್ನು ಮಾಡುವಿರಿ. ನೀವಿಂದು ಯಾವುದಕ್ಕೂ ಸ್ಪಂದಿಸಲಾರಿರಿ. ದಾಂಪತ್ಯದಲ್ಲಿ ಮನಸ್ತಾಪವು ಏಳಬಹುದು. ಆದರೆ ಅದನ್ನು ಮುಂದುವರಿಸಲು ಬಿಡದೇ ಜಾಣ್ಮೆಯಿಂದ ಅಲ್ಲೇ ಮೊಟಕುಗೊಳಿಸುವಿರಿ. ಸಹೋದ್ಯೋಗಿಗಳಿಂದ ಕಿರಿಕಿರಿ ಆಗುವುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ.
ಕರ್ಕಾಟಕ ರಾಶಿ :
ಸಂದರ್ಶನದಲ್ಲಿ ಧೈರ್ಯದ ಕೊರತೆ ಎದ್ದು ತೋರುವುದು. ಅಧಿಕಾರವನ್ನು ಅನುಭವಿಸುವ ಆಸೆ ಇದ್ದರೂ ಗೊಂದಲ ಭಯದಿಂದ ಹೊರಬರುವುದು ಕಷ್ಟವಾದೀತು. ಇಂದು ನಿಮ್ಮ ಮನೆಯ ಹಿರಿಯರ ಸೇವೆಯಿಂದ ನೆಮ್ಮದಿ ಸಿಗುವುದು. ಮನಸ್ಸು ಸ್ಥಿರವಿಲ್ಲದೇ ಇರುವ ಕಾರಣ ನಿಮ್ಮ ಗುರಿಯೂ ಬದಲಾಗುವುದು. ಬಂಧುಗಳು ನಿಮ್ಮನ್ನು ನೋಡಲು ಬರಬಹುದು. ಸಮಯ ಸ್ಫೂರ್ತಿಯಿಂದ ಕಾರ್ಯವನ್ನು ಸಾಧಿಸಿ. ಪ್ರೇಮದಲ್ಲಿ ಅಂತಿಮವಾಗಿ ನೀವೇ ಯಶಸ್ಸನ್ನು ಸಾಧಿಸುವಿರಿ. ರೋಗದ ಉಪಶಮನಕ್ಕೆ ಹೊಸ ವೈದ್ಯರನ್ನು ಸಂದರ್ಶಿಸಿ, ಚಿಕಿತ್ಸೆ ಪಡೆಯುವಿರಿ. ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ. ತುರ್ತು ಮಾಡಬೇಕಾದುದನ್ನು ಮಾಡಿ. ವ್ಯಾಪಾರದಲ್ಲಿ ನೀವು ತಜ್ಞರಾಗಿರುವಿರಿ. ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ನೀವು ಮುಜುಗರ ಪಡಬಹುದು. ಇಷ್ಟವಿಲ್ಲದಿದ್ದರೂ ಇನ್ನೊಬ್ಬರ ಮಾತಿಗೆ ನೀವು ಬೆಂಬಲ ಕೊಡಬೇಕಾದೀತು. ನಿಮ್ಮ ಕಾರ್ಯಕ್ಕೆ ಸಾಕ್ಷಿಗಳ ಅವಶ್ಯಕತೆ ಇರುವುದು. ಯಾವುದನ್ನೇ ಆದರೂ ಮಿತಿಯಲ್ಲಿ ಬಳಸಿದರೆ ಉತ್ತಮ.
ಸಿಂಹ ರಾಶಿ :
ಉದ್ಯೋಗದಲ್ಲಿ ಭಡ್ತಿಗಿಂತ ವಿಶೇಷ ಉಡುಗೊರೆ ನಿಮ್ಮ ಪಾಲಿಗಿದೆ. ಅಪರಿಚಿತರು ನಿಮ್ಮ ಬಳಿ ನೋವನ್ನು ಹೇಳಿಕೊಳ್ಳುವರು. ಕಷ್ಟಕ್ಕೆ ಸುಮ್ಮನೆ ಕಿವಿಯಾಗಿಸಾಕು. ಬದಲಾದ ನಿಮ್ಮ ವ್ಯಕ್ತಿತ್ವವೇ ನಿಮಗೆ ಅಚ್ಚರಿ ಮೂಡಿಸಬಹುದು. ಮನೆಯಲ್ಲಿಯೇ ಇದ್ದು ಬೇಸರ ಬಂದ ಕಾರಣ ಎಲ್ಲಿಗಾದರೂ ವಿಹಾರಕ್ಕೆ ಹೋಗುವಿರಿ. ಅಧಿಕಾರಿಗಳಿಂದ ನಿಮ್ಮ ಉದ್ಯಮದ ಪರಿಶೀಲನೆ ನಡೆಯುವುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿಬರುವುದು. ಶತ್ರುಗಳಿಗೆ ನಿಮ್ಮ ಮಾತು ನಡುಕ ತಂದೀತು. ಮನೆಯಲ್ಲಿ ಜಗಳವಾಡಿ ನೀವು ದೂರವಿರಬೇಕಾಗುವುದು. ನಿವೃತ್ತಿಯಾದ ನಿಮ್ಮ ಸ್ಥಳವು ಅನೇಕ ಉಪಯುಕ್ತ ಮಾಹಿತಿಯನ್ನು ಹೇಳುತ್ತದೆ. ನೀವು ನಿರೀಕ್ಷಿಸಿದ ಸ್ಥಳದಲ್ಲಿ ಉದ್ಯೋಗವು ಸಿಗದೇ ಬೇಸರವಾಗುವುದು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗದು. ಕೊಟ್ಟ ಹಣವನ್ನು ವಾಪಾಸು ಪಡೆಯಲು ನೀವು ಬಹಳ ಪ್ರಯತ್ನಿಸುವಿರಿ. ಆದಾಯಕ್ಕೆ ಸಮನಾದ ಖರ್ಚು ಇರಲಿದೆ. ಅತಿಯಾದ ಆಸೆಯಿಂದ ಮೋಸ ಹೋಗಬೇಕಾಗಬಹುದು. ಪ್ರೇಮವು ನಿಮಗೆ ಬಂಧನವಾಗಿ ಕಾಣಿಸುವುದು.
ಕನ್ಯಾ ರಾಶಿ :
ಇನ್ಮೊಬ್ಬರು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಲಿ ಎಂಬ ಆಸೆ ಇರಲಿದೆ. ಹೇಳದೇ ಇದ್ದರೂ ನಿಮ್ಮ ವರ್ತನೆಯಲ್ಲಿಯೇ ಅಳೆಯುವವರು ಇರುತ್ತಾರೆ. ವಿದೇಶದಲ್ಲಿ ಪಾಲುದಾರರಾಗಿ ಹೂಡಿಕೆ ಮಾಡುವಿರಿ. ಇಂದು ಮಾಡುವ ಕಾರ್ಯವು ನಿಮ್ಮ ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡುವುದು. ಇಂದು ನೀವು ಅಂದುಕೊಂಡ ವಿಚಾರದಲ್ಲಿ ಜಯವು ಸಿಗಲಿದೆ. ಕೆಟ್ಟವರ ಸಹವಾಸದಿಂದ ನಿಮಗೆ ಅಪಕೀರ್ತಿಯು ಬರುವುದು. ಕೆಲವು ವಿಚಾರಗಳಿಗೆ ನೀವು ಪ್ರತಿಕ್ರಿಯೆಯನ್ನು ನೀಡಬೇಕಿಲ್ಲ. ನಿಮ್ಮ ಕೆಲಸಗಳನ್ನು ನೀವು ಮುಂದುರಿಸುವಿರಿ. ಕಷ್ಟಪಟ್ಟು ಪಡೆಯಲಾಗದ್ದನ್ನು ಇಷ್ಟದಿಂದ ಪಡೆಯಲು ಪ್ರಯತ್ನಿಸಿ. ಕೋಪವನ್ನು ಕಡಿಮೆ ಮಾಡಿಕೊಂಡರೂ ತಾಳ್ಮೆ ಹೆಚ್ಚು ಮಾಡಿಕೊಳ್ಳಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದಿಲ್ಲ. ಉತ್ಪನ್ನದಾರರಿಗೆ ಹೆಚ್ಚು ಆದಾಯ ಬರಲಿದೆ. ನಿಮ್ಮ ಬೆಳವಣಿಗೆಯಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಸ್ತ್ರೀಯ ಆಗಮನದಿಂದ ಮನೆಗೆ ಕಳೆ. ವೈದ್ಯವೃತ್ತಿಯಲ್ಲಿ ಒತ್ತಡವಿರುವುದು. ನೀವು ಕಷ್ಟವನ್ನೂ ಸಂತೋಷದಿಂದ ಕಳೆಯುವಿರಿ. ನಿಮ್ಮ ಹೊಸ ವಸ್ತುಗಳನ್ನು ಬಳಸಲು ಮನಸ್ಸು ಹಿಂಜರಿಯುವುದು.
ತುಲಾ ರಾಶಿ :
ವ್ಯಾಪಾರಕ್ಕಾಗಿ ಪಡೆದ ಹಣವನ್ನು ಪುನಃ ಹಿಂದಿರುಗಿಸುವಿರಿ. ಬೆಲೆ ಇರುವಲ್ಲಿ ಮಾತ್ರ ಬೆಲೆಕೊಡಿ. ಇಂದು ನಿಮಗೆ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಾಗಬಹುದು. ದೇಹ ಪೀಡೆಯು ಅಧಿಕವಾಗಿ ಇರಲಿದೆ. ಇದರಿಂದ ನಿಮ್ಮ ಇಂದಿನ ಕೆಲಸವೂ ವಿಳಂಬವಾಗುವುದು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ಇಂದಿನ ಸಮಯವೇ ಗೊತ್ತಾಗದಂತೆ ಕಳೆದುಹೋಗುವುದು. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಳ್ಳುವಿರಿ. ಸಂಸಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಬಹುದು. ಆದಾಯದ ಪ್ರಮಾಣ ಉಳಿತಾಯದ ಪ್ರಮಾಣ ಅಧಿಕವಾಗಲಿದೆ. ಯಾರ ಜೊತೆಯೂ ನಿಮ್ಮ ಮಾತು ಸರಿಯಾಗಿ ಇರದು. ಭೂವ್ಯವಹಾರದಿಂದ ನಿಮಗೆ ಕೆಲವು ತೊಂದರೆಗಳೂ ಬರಲಿವೆ. ನಿಮ್ಮನ್ನು ಯಾರೂ ಸೇರಿಸಿಕೊಳ್ಳದೆ ಇರುವುದರಿಂದ ಬಹಳ ದುಃಖಿಸುವಿರಿ. ಯಾರನ್ನೂ ಸಮೀಪ ಸೇರಿಸಿಕೊಳ್ಳಲು ಬಿಡಲಾರಿರಿ. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ.
ವೃಶ್ಚಿಕ ರಾಶಿ :
ಪೂರ್ವಜರ ಆಸ್ತಿಯು ಅಪ್ರಯತ್ನವಾಗಿ ನಿಮ್ಮ ಬಳಿಗೆ ಬರಲಿದೆ. ಹಿರಿಯರಿಂದ ಬದುಕಿಗೆ ಕಿವಿಮಾತು ಸಿಗುವುದು. ಭವ್ಯ ಗೃಹದ ಕನಸನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಪ್ರೇಮವು ನಿಮಗೆ ಬಂಧನದಂತೆ ತೋರಬಹುದು. ಮಕ್ಕಳ ಪ್ರಗತಿಯಿಂದ ಸಂತೋಷವು ಇರಲಿದೆ. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ದ್ವೇಷವಾಗಿ ಪರಿಣಮಿಸಬಹುದು. ವ್ಯವಹಾರದಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಸೋಲನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿರುವುದಿಲ್ಲ. ನೀವು ಕಂಡ ಕನಸು ಸಫಲವೂ ವಿಫಲವೂ ಆಗದು. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾದೀತು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡಲು ಇಚ್ಛಿಸುವಿರಿ. ಎಲ್ಲರನ್ನೂ ಸಮಾನವಾಗಿ ಕಾಣುವುದು ನಿಮಗೆ ಬರದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವ ಮನೋಭಾವವು ಬರಬಹುದು. ಮಕ್ಕಳ ಜೊತೆ ಮನಸ್ತಾಪಬರಬಹುದು. ಏಕಾಂಗಿಯಾಗಿ ಪ್ರವಾಸ ಹೋಗುವ ಮನಸ್ಸಾದೀತು.
ಧನು ರಾಶಿ :
ಕೆಲಸದ ರೀತಿ ನೀತಿ ಬದಲಾವಣೆಯಾಗಬಹುದು. ಅದನ್ನು ಪೂರ್ಣಗೊಳಿಸಲು ಹೆಚ್ಚು ಕಠಿಣ ಪರಿಶ್ರಮವೂ ಬೇಕು. ನಿಮ್ಮ ಬದುಕಿಗೆ ಏನಾದರೂ ಹೊಸತು ಬೇಕು ಎನಿಸಬಹುದು. ಇಂದು ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ. ಹೊಂದಾಣಿಕೆಯ ಮನೋಭಾವವು ನಿಮಗೆ ಆಗದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತೆಯಿಂದ ಇರದು. ಆಸ್ತಿಯ ವಿಚಾರದಲ್ಲಿ ಆಂತರಿಕ ಕಲಹವು ದೊಡ್ಡದಾಗಬಹುದು. ದಾಂಪತ್ಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುವುದು. ನಿಮ್ಮದೇ ಆದ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ವೃತ್ತಿಯಲ್ಲಿ ನಿಮಗೆ ಸಹಕಾರವು ಸಿಗದು. ನಿಮ್ಮ ನಿರ್ಮಾಣ ಹಂತದ ಕಾರ್ಯಗಳಿಗೆ ತಡೆಯಾಗಲಿದೆ. ಸತ್ಯವನ್ನು ನೀವು ಮರೆಮಾಡಲು ಪ್ರಯತ್ನಿಸುವಿರಿ. ಒತ್ತಡಗಳು ಎಂದಿಗಿಂತ ಕಡಿಮೆ ಇರಲಿವೆ. ಇಲ್ಲವಾದರೆ ಅಜೀರ್ಣವಾದೀತು. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಅವಕಾಶವನ್ನು ಬಳಸಿಕೊಂಡು ಏನಾದರೂ ಸಾಧಿಸುವ ಛಲ ಬರುವುದು.
ಮಕರ ರಾಶಿ :
ಆರೋಗ್ಯದಲ್ಲಿ ಅಲ್ಪ ಕಿರಿಕಿರಿ ಆಗಾಗ ಕಾಣಿಸಿಕೊಳ್ಳಲಿದ್ದು ಸ್ನೇಹಿತರು, ಬಂಧುಗಳು ನಿಮಗೆ ಸರಿಯಾದ ಸಮಯಕ್ಕೆ ಸಹಕಾರ ನೀಡುವುದಿಲ್ಲ. ಪ್ರೀತಿಸುವ ಜನರನ್ನು ನೀವು ಉಳಿಸಿಕೊಳ್ಳಲಾಗದು. ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ಯಾವಾಗಲೂ ಸಿಟ್ಟು ಮಾಡುತ್ತಿದ್ದರೆ ನಿಮ್ಮ ಸಿಟ್ಟಿಗೆ ಯಾವ ಬೆಲೆಯೂ ಇರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆ ಇರುವುದು. ಅಧ್ಯಾತ್ಮದ ವಿಚಾರಕ್ಕೆ ಹೆಚ್ಚು ಒತ್ತು ಕೊಡುವಿರಿ. ಇನ್ನೊಬ್ಬರ ದುಃಖಕ್ಕೆ ನೀವು ಸ್ಪಂದಿಸುವಿರಿ. ಎಲ್ಲರ ಜೊತೆ ಸಂತೋಷದಿಂದ ಇರಲು ಇಷ್ಟಪಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರು ನಿಮಗೆ ಇಷ್ಟವಾಗುವರು. ಒಂದಾದಮೇಲೆ ಒಂದರಂತೆ ಸವಾಲುಗಳು ನಿಮಗೆ ಸಿಗುವುದು. ಇಂದು ನೀವು ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಲು ಬಯಸುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ಬಹಳ ಗೊಂದಲವಾಗಲಿದೆ. ಸಾಮಾಜಿಕ ಕಾರ್ಯವನ್ನು ಮಾಡಲು ಇಷ್ಟವಾಗುವುದು. ಎಲ್ಲ ಕೆಲಸವನ್ನೂ ನೀವೇ ಮಾಡಬೇಕೆಂಬ ಆಸೆ ಇರುವುದು.
ಕುಂಭ ರಾಶಿ :
ಮಂಕು ಕವಿದಂತೆ ನಿಮ್ಮ ವರ್ತನೆ ಇರಲಿದ್ದು, ಯಾವುದೂ ಕೆಲಸ ಮಾಡಲು ಇಷ್ಟ ಇಲ್ಲದೆ ದಿನ ಕಳೆಯುವಿರಿ. ಇಂದು ನಿಮ್ಮವರ ಅವಶ್ಯಕತೆ ತಿಳಿಯುವುದು. ಮನೆಯ ಕೆಲಸದಿಂದ ನಿಮಗೆ ಆಯಾಸವಾಗುವುದು. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಅನಿರೀಕ್ಷಿತ ವಾರ್ತೆಯಿಂದ ಬೇಸರವಾಗಲಿದೆ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ಪರರ ಮೇಲಿನ ಸುಪ್ತಭಾವವು ಜಾಗರೂಕವಾಗಲಿದೆ. ಯಾರಾದರೂ ನಿಮಗೆ ಬೇಸರ ಮಾಡಿಸುವರು. ಆದರೆ ನಿಮಗೆ ಮೌನವೇ ಇಷ್ಟವಾದೀತು. ಇಬ್ಬಗೆಯ ಮನಃಸ್ಥಿತಿಯನ್ನು ಇಟ್ಟಕೊಂಡರೆ ಕಷ್ಟವಾಗುವುದು. ಕುಟುಂಬದ ಹತ್ತಿರದವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವೈದ್ಯ ವೃತ್ತಿಯಲ್ಲಿ ಅಪವಾದವು ಬರಬಹುದು. ಮಾನಸಿಕ ಕಿರಿಕಿರಿಯಿಂದ ನೆಮ್ಮದಿ ಸಿಗಲಿದೆ. ಅವರಿಗೆ ಬೇಸರವಾಗುವಂತೆ ನೋಡಿಕೊಳ್ಳಬೇಡಿ. ಜನಪ್ರಿಯರಾಗುವ ಆಸೆ ಅತಿಯಾಗುವುದು. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ.
ಮೀನ ರಾಶಿ :
ಮಾನಸಿಕ ನಿರಾಳತೆಯ ದಿನವಾಗಲಿದ್ದು, ಹಿರಿಯರ ಭೇಟಿಯ ಸಂತಸದ ಕ್ಷಣಗಳನ್ನು ಆಸ್ವಾದಿಸುವಿರಿ. ಜಂಟಿಯಾಗಿ ನಿರ್ವಹಣೆ ಮಾಡುವ ಕಾರ್ಯವು ಕಷ್ಟವಾಗುವುದು. ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುವಿರಿ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದೂರ ಕಳಿಸುವಿರಿ. ಸ್ಥಾನಮಾನವನ್ನು ಪಡೆಯಲು ಯಾವುದಾದರೂ ಮಾರ್ಗವನ್ನು ಪಡೆಯುವಿರಿ. ಬೇರೆ ಬೇರೆ ಆಲೋಚನೆಯನ್ನು ಮಾಡುವಿರಿ. ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವಿರಿ. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋಗುವುದು. ನೌಕರರಿಗೆ ನಿಮ್ಮಿಂದ ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡುವರು. ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬೇಕಾಗಬಹುದು. ನಿಮ್ಮ ಮಾತಿಗೆ ವಿರೋಧವು ಬರಬಹುದು. ನೀವು ನಿಶ್ಚಿಂತರಾಗಿರಿ. ಹಿರಿಯರಿಂದ ಯೋಗ್ಯ ಸಲಹೆಯನ್ನು ಪಡೆದು ಮುಂದುವರಿಯಿರಿ. ನಿಮ್ಮಿಂದ ಸಹಾಯ ಪಡೆಯಲು ಏನಾದರೂ ನಟನೆ ಮಾಡುವರು.
Views: 65