ಮುಂಬೈ ಇಂಡಿಯನ್ಸ್ 206 ರನ್ ಗುರಿ ನೀಡಿದರೆ, ಡೆಲ್ಲಿ ಕ್ಯಾಪಿಟಲ್ಸ್ 193 ರನ್ ಗೆ ಆಲೌಟ್ ಆಗಿ ಸೋಲು ಕಂಡಿತು. ಕರುಣ್ ನಾಯರ್ 89 ರನ್ ಗಳಿಸಿದರೂ, ಉಳಿದ ಬ್ಯಾಟರ್‌ಗಳ ವೈಫಲ್ಯದಿಂದ ಡೆಲ್ಲಿ ಸೋಲು ಕಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಜೇಯ ಓಟಕ್ಕೆ ಅದರ ತವರಿನಲ್ಲೇ ಮುಂಬೈ ಇಂಡಿಯನ್ಸ್ ಬ್ರೇಕ್ ಹಾಕಿದೆ. ಭಾನುವಾರ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 206ರನ್‌ಗಳ ಗುರಿಯನ್ನ ಬೆನ್ನಟ್ಟುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಫಲವಾಗಿದೆ. ಕರುಣ್ ನಾಯರ್ 40 ಎಸೆತಗಳಲ್ಲಿ 89 ರನ್ಗಳಿಸಿದರಾದರೂ ಉಳಿದ ಬ್ಯಾಟರ್‌ಗಳ ವೈಫಲ್ಯದಿಂದ ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ಡೆಲ್ಲಿ ಸೋಲು ಕಂಡಿತು. ಇನ್ನು 1 ಓವರ್ ಇರುವಂತೆಯೇ ಡೆಲ್ಲಿ ತಂಡ 193ಕ್ಕೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
ಮುಂಬೈ ಇಂಡಿಯನ್ಸ್ ನೀಡಿದ್ದ 206ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಹಿಂದಿನ ಪಂದ್ಯಗಳಂತೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. ಇಡೀ ಟೂರ್ನಿಯಲ್ಲಿ ಫ್ಲಾಪ್ ಆಗಿರುವ ಜೇಕ್ ಪ್ರೇಸರ್ ಮೆಕ್ಗರ್ಕ್ ಇಂದೂ ಕೂಡ ಖಾತೆ ತೆರೆಯದೇ ಮೊದಲ ಎಸೆತದಲ್ಲೇ ದೀಪಕ್ ಚಾಹಗೆ ವಿಕೆಟ್ ಒಪ್ಪಿಸಿದರು. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ಕನ್ನಡಿಗ ಕರುಣ್ ನಾಯರ್ ಸಿಡಿಲಬ್ಬರದ ಅರ್ಧಶತಕ ಸಿಡಿಸಿದರು. ನಾಯರ್ ಅಭಿಷೇಕ್ ಪೊರೆಲ್ ಜೊತೆಗೂಡಿ 2ನೇ ವಿಕೆಟ್‌ಗೆ 61 ಎಸೆತಗಳಲ್ಲಿ 119 ರನ್ ಸೇರಿಸಿದರು.
ಪೊರೆಲ್25 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 33 ರನ್ಗಳಿಸಿ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ನಮನ್ ಧೀರ್ಗೆ ಕ್ಯಾಚ್ ನೀಡಿ ಔಟ್ ಆದರು. ಇದರ ಬೆನ್ನಲ್ಲೇ ಇಂದೇ ಮೊದಲ ಪಂದ್ಯವನ್ನಾಡಿದ ಕರುಣ್ ನಾಯರ್ ಕೂಡ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಾಯರ್ 40 ಎಸೆತಗಳಲ್ಲಿ 14 ಬೌಂಡರಿ, 5 ಸಿಕ್ಸರ್ ಸಹಿತ 89 ರನ್ಗಳಿಸಿ ಔಟ್ ಆದರು, ಕರುಣ್ ಇರುವವರೆಗೂ ಗೆಲುವು ಡೆಲ್ಲಿ ಕಡೆಯೇ ಇತ್ತು. ಆದರೆ ಕರುಣ್ ವಿಕೆಟ್ ಪತನದ ನಂತರ ಡೆಲ್ಲಿ ದಿಢೀರ್ ಕುಸಿತ ಕಂಡಿತು.
ಕೆಎಲ್ ರಾಹುಲ್ 15, ಅಕ್ಷರ್ ಪಟೇಲ್ 9, ಟ್ರಿಸ್ಟಾನ್ ಸ್ಟಬ್ಸ್ 1, ಅಶುತೋಷ್ ರಾಣಾ 17, ವಿಪ್ರಜ್ ನಿಗಮ್ 14, ಕುಲದೀಪ್ ಯಾದವ್ 1, ಮೋಹಿತ್ ಶರ್ಮಾ 0ಗೆ ವಿಕೆಟ್ ಒಪ್ಪಿಸಿದರು.
12 ಎಸೆತಗಳಲ್ಲಿ ಡೆಲ್ಲಿಗೆ ತಂಡಕ್ಕೆ 23 ರನ್‌ಗಳ ಅಗತ್ಯವಿತ್ತು. 19ನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ ಮಾಡಲು ಬಂದರು. ಮೊದಲ 3 ಎಸೆತಗಳಲ್ಲಿ ಅಶುತೋಷ್ ಶರ್ಮಾ 2 ಬೌಂಡರಿ ಬಾರಿಸಿದರು. ಕೊನೆಯ 9 ಎಸೆತಗಳಲ್ಲಿ ಡೆಲ್ಲಿಗೆ ಗೆಲ್ಲಲು 15 ರನ್‌ಗಳ ಅಗತ್ಯವಿತ್ತು. 4ನೇ ಎಸೆತದಲ್ಲಿ 2 ರನ್ ಕದಿಯಲು ಹೋದ ಅಶುತೋಷ್ ಶರ್ಮಾ ರನ್ ಔಟ್ ಆದರು. ನಂತರ ಎಸೆತದಲ್ಲಿ ಕುಲದೀಪ್ ಯಾದವ್ ಹಾಗೂ ಕೊನೆಯ ಎಸೆತದಲ್ಲಿ ಮೋಹಿತ್ ಶರ್ಮಾ ಕೂಡ ರನ್ ಔಟ್ ಆದರು. ಮೂರು ಎಸೆತಗಳಲ್ಲಿ 3 ರನ್ ಔಟ್ ಆಗುವ ಮೂಲಕ ಇನ್ನು ಒಂದು ಓವರ್ ಇರುವಂತೆಯೇ ಡೆಲ್ಲಿ ತಂಡ 12 ರನ್‌ಗಳ ಸೋಲು ಕಂಡಿತು.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ ನೀಡಿದರು.
ರೋಹಿತ್ 12 ಎಸೆತಗಳಲ್ಲಿ 18 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ನಿರಾಶೆ ಮೂಡಿಸಿದರು. ಆದರೆ ರಯಾನ್ ರಿಕಲ್ಟನ್ 25 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ ( 28 ಎಸೆತಗಳಲ್ಲಿ 40 ರನ್) ಜೊತೆ ಗಳಿಸಿದರು ತಿಲಕ್ ವರ್ಮಾ (33 ಎಸೆತಗಳಲ್ಲಿ 6 ಬೌಂಡಿರಿ, 3 ಸಿಕ್ಸರ್ಗಗಳ ನೆರವಿನಿಂದ 59ರನ್ಸ್) ಜೊತೆಗೂಡಿ 60 ರನ್ ಜೊತೆಯಾಟ ನೀಡಿದರು. ಸೂರ್ಯ ಬೆನ್ನಲ್ಲೇ ಬಂದ ಹಾರ್ದಿಕ್ ಪಾಂಡ್ಯ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ಬರಿಸಿದ ನಮನ್ ಧೀರ್ ( 17 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸ್ ಸಹಿತ ಅಜೇಯ 38 ರನ್ಸ್) ತಿಲಕ್ ವರ್ಮಾ ಜೊತೆಗೂಡಿ 33 ಎಸೆತಗಳಲ್ಲಿ 62 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳ ಪೈಕಿ ವಿಪ್ರಾಜ್ ನಿಗಮ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಮುಖೇಶ್ ಕುಮಾರ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
News18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1