ವಿಟಮಿನ್ ದೇಶಕ್ಕೆ ಅಗತ್ಯವಿರುವ ಜೀವಸತ್ವ. ಇದರ ಕೊರತೆಯಾದರೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
- ವಿಟಮಿನ್ ಡಿ ಕೊರತೆಯಾದರೆ ಸ್ನಾಯುಗಳು ದುರ್ಬಲವಾಗುತ್ತದೆ.
- ವಿಟಮಿನ್ ಡಿ ಕೊರತೆಯಾದರೆ ಅದರ ಲಕ್ಷಣಗಳು ದೇಹದಲ್ಲಿಯೇ ಕಾಣಿಸುತ್ತದೆ.
- ವಿಟಮಿನ್ ಡಿ ಕೊರತೆಯ ಲಕ್ಷಣಗಳು
ಬೆಂಗಳೂರು : ವಿಟಮಿನ್ ಡಿ ಕೊರತೆಯಾದರೆ ಸ್ನಾಯುಗಳು ದುರ್ಬಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಅದರ ಲಕ್ಷಣಗಳು ದೇಹದಲ್ಲಿಯೇ ಕಾಣಿಸುತ್ತದೆ. ನಾವದನ್ನು ನಿರ್ಲಕ್ಷಿಸಬಾರದು.
ವಿಟಮಿನ್ ಡಿ ಕೊರತೆಯ ಲಕ್ಷಣಗಳು :
ಕೂದಲು ಉದುರುವಿಕೆ:
ಒಂದೆರಡು ಕೂದಲು ಉದುರುತ್ತಿದ್ದರೆ ಅದು ಸಮಸ್ಯೆಯಲ್ಲ. ಆದರೆ ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೊರತೆಯಿಂದ ಕೂದಲು ವಿಪರೀತವಾಗಿ ಉದುರುತ್ತದೆ.ವಿಟಮಿನ್ ಡಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅವುಗಳ ಬೇರುಗಳಿಂದಲೇ ಬಲಪಡಿಸುತ್ತದೆ.
ತೂಕ ಹೆಚ್ಚಾಗುವುದು :
ಹಠಾತ್ ತೂಕ ಹೆಚ್ಚಾಗುವುದು ಕೂಡಾ ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರುತ್ತದೆ. ವಿಟಮಿನ್ ಡಿ ನಮ್ಮ ದೇಹಕ್ಕೆ ನೈಟ್ರಿಕ್ ಆಕ್ಸೈಡ್ ಅನ್ನು ನೀಡುತ್ತದೆ.ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ.ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯು ತೂಕ ಹೆಚ್ಚಾಗಲು ಕಾರಣವಾಗಬಹುದು.
ಸುಸ್ತು :
7 ರಿಂದ 8 ಗಂಟೆಗಳ ನಿದ್ದೆ ಮಾಡಿದ ನಂತರವೂ, ಸುಸ್ತು, ಆಲಸ್ಯವಾಗುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವೂ ಆಗಿರಬಹುದು.
ಮನಸ್ಥಿತಿಯ ಮೇಲೆ ಪರಿಣಾಮ :
ಮಾರು ಮಾತಿಗೂ ಸಿಟ್ಟು, ಖಿನ್ನತೆಗೆ ಒಳಗಾಗುವುದು, ಸಣ್ಣ ಸಣ್ಣ ವಿಚಾರಗಳಿಗೆ ಅಳುವುದು ಸಹ ವಿಟಮಿನ್ ಡಿ ಕೊರತೆಯ ಸಂಕೇತವಾಗಿರುತ್ತದೆ. ವಿಟಮಿನ್ ಡಿಯನ್ನು ಸೂರ್ಯನ ಕಿರಣಗಳಿಂದ ನೈಸರ್ಗಿಕವಾಗಿ ಪಡೆಯಬಹುದು. ಸೂರ್ಯನ ಕಿರಣ ಮೆದುಳಿನಲ್ಲಿ ಹಾರ್ಮೋನ್ ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ.
ಕೀಲು ಮತ್ತು ಸ್ನಾಯು ನೋವು :
ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೊರತೆಯಿಂದಾಗಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುತ್ತದೆ.ಇದರಿಂದಾಗಿ ಮೂಳೆಗಳು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ವಿಟಮಿನ್ ಡಿ ಆಹಾರ :
ಅಣಬೆ, ಮೊಟ್ಟೆ, ಹಾಲು, ಸೋಯಾ ಹಾಲು, ಕಿತ್ತಳೆ ರಸ, ಕೊಬ್ಬಿನ ಅಂಶಗಳಿರುವ ಮೀನು ಇತ್ಯಾದಿಗಳನ್ನು ಸೇವಿಸುವುದರಿನದ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.