ಚಿತ್ರದುರ್ಗ:ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವತಿಯಿಂದ ಕಾಮನಬಾವಿ ಬಡಾವಣೆ, ಚರ್ಚ ರೋಡ್, ಕೋಟೆ ಮುಂಭಾಗ ಮತ್ತು ಕರವಿನಕಟ್ಟೆ ಸರ್ಕಲ್ ಮುಂತಾದ ಪ್ರದೇಶದಲ್ಲಿ ಡೆಂಗ್ಯೂ, ಮಲೇರಿಯಾ, ತಡೆಗಟ್ಟುವಿಕೆ ಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು 6ನೇ ತರಗತಿ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ ಜಾಥಾ ವನ್ನು ಏರ್ಪಡಿಸಲಾಗಿತ್ತು.
ಪರಿಸರ ಸಂರಕ್ಷಣೆ, ನೀರಿನ ಸದ್ಭಳಕೆ, ಮಲೇರಿಯಾ ಡೆಂಗ್ಯೂ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಘೋಷಣೆಗಳನ್ನು ಕೂಗುತ್ತ ನಾಗರೀಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ಜಾಥಾವನ್ನು ಉದ್ಘಾಟಿಸಿದ ಶಿಕ್ಷಣ ಸಂಯೋಜಕರಾರ ಜಿ ಡಿ ರವೀಂದ್ರನಾಥ ರವರು ಮಾತಾನಾಡಿ ಪರಿಸರ ಸಂರಕ್ಷಣೆ ಮತ್ತು ಡೆಂಗ್ಯೂ ಮಲೇರಿಯಾ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್ ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ ಪ್ರಾಚಾರ್ಯರಾದ ಸಿ ಡಿ ಸಂಪತ್ ಕುಮಾರ್ ಮತ್ತು ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಕೆ ಬಸವರಾಜ್ ಮತ್ತು ಶಾಲೆಯ ಶಿಕ್ಷಕ/ಕಿಯರು, ಸೆಂಟ್ ಮೇರಿಸ್ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.