ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ: ಕಾಂಗ್ರೆಸ್-ಬಿಜೆಪಿ ಚಿಂತನೆ ಬದಲಿಸಲಿ – ಆಪ್ ಜಿಲ್ಲಾಧ್ಯಕ್ಷ ಜಗದೀಶ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 02

ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ತಮ್ಮ ಚಿಂತೆಯನ್ನು ಬದಲಾಯಿಸಿಕೊಳ್ಳಬೇಕಿದೆ,ಬಿಟ್ಟಿ ಭಾಗ್ಯಗಳಿಂದ ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ, ಅಭಿವೃದ್ದಿಯಲ್ಲಿ ರಾಜ್ಯ ಶೂನ್ಯವಾಗಿದೆ. ಈಗ ದೆಹಲಿಯಲ್ಲಿ ಬೇರೆ ಪಕ್ಷ ಅಧಿಕಾರವನ್ನು ಹಿಡಿದ್ದು ಜನತೆ ಪರಿತಪ್ಪಿಸುತ್ತಿದ್ದಾರೆ ಎಂದು ಆಮ್ ಆದ್ಮೀ ಪಾರ್ಟಿಯ ಜಿಲ್ಲಾಧ್ಯಕ್ಷ ಜಗದೀಶ್ ದೂರಿದ್ದಾರೆ.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಮ್ ಆದ್ಮಿ ಪಾರ್ಟಿ ಉತ್ತಮವಾದ ಆಧಿಕಾರವನ್ನು ನಡೆಸಿದೆ. ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡುತ್ತಿದೆ. ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದೆ. ಇದರಿಂದ ಜನತೆ ಸಬಲರನ್ನಾಗಿ ಮಾಡಲು ಸಾಧ್ಯವಿಲ್ಲ ಇದರ ಬದಲಿಗೆ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯವನ್ನು ನೀಡುವುದರ ಮೂಲಕ ಜನತೆಯನ್ನು ಆರೋಗ್ಯವಂತರನ್ನಾಗಿ ಮಾಡಿ, ವಿದ್ಯಾವಂತರನ್ನಾಗಿ ಮಾಡಬೇಕಿದೆ. ಇಂದಿನ ರಾಜಕಾರಣಿಗಳಿಗೆ ದೇಶದ ಅಭೀವೃದ್ದಿ ಬೇಕಿಲ್ಲ ಇದರ ಬದಲಿಗೆ ತಮ್ಮ ಅಭೀವೃದ್ದಿಯನ್ನು ನೋಡುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗಿಗಳು ದಂಗೆ ಎದ್ದಿದ್ದಾರೆ, ಅವರು ತಿರುಗಿ ಬೀಳುವ ಮುನ್ನಾ ಸರ್ಕಾರಗಳು ಅವರಿಗೆ ಸ್ಥಾನವನ್ನು ನೀಡಬೇಕಿದೆ, ರಾಜ್ಯದಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿಗಳು ತಮ್ಮ ಚಿಂತನೆಯನ್ನು ಬದಲಾಯಿಸಬೇಕಿದೆ ಎಂದು ತಿಳಿಸಿದರು.

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸಿದ್ದು, ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳು ರಾಜಕೀಯ ಪಿತೂರಿ ಬಯಲಿಗೆ ಬಂದಿದೆ ಪಂಜಾಬ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದ ಬಳಿಕ ದೇಶಾದ್ಯಂತ ಪಕ್ಷದ ಪ್ರಭಾವ ಹೆಚ್ಚುತ್ತಿರುವುದನ್ನು ಸಹಿಸದ ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಆರೋಪಗಳನ್ನು ಹೊರಿಸಿತ್ತು ಎಂದು ಕಿಡಿಕಾರಿದ ಅವರು ಪ್ರಧಾನಿ, ಕೇಂದ್ರ ಸಚಿವರು ಪಕ್ಷದ ಜನಪ್ರಿಯತೆ ಸಹಿಸದೇ ನಾಯಕರನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ದೂರಿದರು.

ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಆರೋಗ್ಯ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಾದರಿ ಯೋಜನೆಗಳನ್ನು ಜಾರಿಗೆ ತಂದು ಜನಪ್ರಿಯತೆಗಳಿಸಿದೆ. ಇದನ್ನು ಸಹಿಸದ ಬಿಜೆಪಿ, ಪಕ್ಷವನ್ನು ಕುಗ್ಗಿಸಲು ಯತ್ನಿಸಿತು ಕೇಂದ್ರ ತನಿಖಾ ದಳ (ಸಿಬಿಐ) ಮೇಲೆ ಒತ್ತಡ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ. ಪ್ರಕರಣ ಸಂಬಂಧ ಸೇರಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದ ಅವರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ತಮ್ಮ ಚಿಂತೆಯನ್ನು ಬದಲಾಯಿಸಿಕೊಳ್ಳಬೇಕಿದೆ,ಬಿಟ್ಟಿ ಭಾಗ್ಯಗಳಿಂದ ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ, ಅಭಿವೃದ್ದಿಯಲ್ಲಿ ರಾಜ್ಯ ಶೂನ್ಯವಾಗಿದೆ ಬಡ ಜನರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡುವುದರ ಮೂಲಕ ಜನತೆಯನ್ನು ಸದೃಢರನ್ನಾಗಿ ಮಾಡಬೇಕಿದೆ, ಆಮ್ ಆದ್ಮಿ ಪಾರ್ಟಿ ಜನರಿಗೆ ನ್ಯಾಯವನ್ನು ನೀಡುವ ಸಲುವಾಗಿ ಹೋರಾಟವನ್ನು ನಡೆಸುತ್ತಿದೆ ಎಂದರು.

ಗೋಷ್ಟಿಯಲ್ಲಿ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ವಿನೋದಮ್ಮ, ರಾಮಪ್ಪ, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ತನ್ವೀರ್, ದಾಸಪ್ಪ, ರವಿ, ಫಾರೂಕ್, ತಿಪ್ಪೇಸ್ವಾಮಿ, ಕುಬೇಂದ್ರನಾಯ್ಕ್, ಪರಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಬಳಿಯಲ್ಲಿ ಪಟಾಕಿಯನ್ನು ಸಿಡಿಸಿ, ಸಿಹಿಯನ್ನು ಹಂಚುವುದರ ಮೂಲಕ ಕ್ರೇಜಿವಾಲ್‍ರವರ ಬಿಡುಗಡೆಯನ್ನು ಸಂಭ್ರಮಿಸಲಾಯಿತು

Leave a Reply

Your email address will not be published. Required fields are marked *