ಕಲಾವಿದ ನಾಗರಾಜ್ ಬೇದ್ರೇ ಅವರ ಪಪ್ಪಾಯಿ ಗಿಡದಲ್ಲಿ ವಿನಾಯಕನ ರೂಪ ಕಂಡು ಭಕ್ತರು ಬೆರಗು.

ಚಿತ್ರದುರ್ಗ ಅ. 13

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಸರಸ್ವತಿಪುರಂ ಬಳಿಯಲ್ಲಿನ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿನ ಕಲಾವಿದ ನಾಗರಾಜ್ ಬೇದ್ರೇಯವರ ನಿವಾಸಿಯಾದಲ್ಲಿ ಪಪ್ಪಾಯಿ ಗಿಡದಲ್ಲಿ ವಿನಾಯಕನ ಸೊಂಡಿಲು ಇರುವ ಪಪ್ಪಾಯಿ ಮತ್ತೊಂದು ಪಪ್ಪಾಯಿಯಲ್ಲಿ ವಿನಾಯಕನಿಗೆ ಪ್ರಿಯವಾದ ಮೊದಕದ ರೂಪದಲ್ಲಿ ಮೂಡಿ ಬಂದಿದೆ.

ಕಲಾವಿದರಾದ ನಾಗರಾಜ್ ಬೇದ್ರೇಯವರ ತಮ್ಮ ನಿವಾಸದ ಹಿಂದಿನ ಭಾಗದಲ್ಲಿ ಪಪ್ಪಾಯಿ ಗಿಡವನ್ನು ಹಾಕಿದ್ದರು ಅದು ಹಣ್ಣು ಬಿಡಲು ಪ್ರಾರಂಭ ಮಾಡಿತು ಈ ಸಮಯದಲ್ಲಿ ಇಂದು ಅವರ ಶ್ರೀಮತಿಯವರಾದ ಉಷಾರವರು ಹಣ್ಣಾದ ಹಲವಾರು ಪಪ್ಪಾಯಿ ಹಣ್ಣನ್ನು ಕಿತ್ತುಕೊಂಡು ಬಂದು ಮನೆಯಲ್ಲಿ ಇಟ್ಟಿದ್ದರು. ಈ ಸಮಯದಲ್ಲಿ ಮನೆಗೆ ಬಂದ ನಾಗರಾಜ್‍ರವರು ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಂದು ಪಪ್ಪಾಯಿ ಹಣ್ಣಿನಲ್ಲಿ ವಿನಾಯಕನ ಸೊಂಡಿಲು ಮೂಡಿ ಬಂದರೆ ಮತ್ತೊಂದು ಪಪ್ಪಾಯಿ ಹಣ್ಣಲ್ಲಿ ವಿನಾಯ ಕನಿಗೆ ಪ್ರಿಯವಾದ ಮೊದಕದ ರೂಪದಲ್ಲಿ ಮೂಡಿ ಬಂದಿದೆ. ನಗರದ ಶ್ರೀ ಪಸನ್ನ ಗಣಪತಿ ಸೇವಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೇದ್ರೇಯವರಿಗೆ ವಿನಾಯಕ ಈ ರೀತಿಯಾಗಿ ದರ್ಶನವನ್ನು ನೀಡಿದ್ದಾನೆ ಎನ್ನಲಾಗಿದೆ.

Views: 23

Leave a Reply

Your email address will not be published. Required fields are marked *