IPL 2023: ಅಂಡರ್-16 ಆಟಗಾರರೊಂದಿಗೆ ಸಂವಾದ ನಡೆಸಿದ ದಿನೇಶ್ ಕಾರ್ತಿಕ್

IPL 2023: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಅಂಡರ್-16 ಆಟಗಾರರ ವಿಶೇಷ ಶಿಬಿರದಲ್ಲಿ RCB ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.16 ವರ್ಷದೊಳಗಿನ ಈ ಶಿಬಿರದಲ್ಲಿ ಭಾಗವಹಿಸಿದ ದಿನೇಶ್ ಕಾರ್ತಿಕ್, ಯುವ ಪ್ರತಿಭೆಯೊಂದಿಗೆ ಸಂವಾದ ನಡೆಸಿದರು. ಅಲ್ಲದೆ ತಮ್ಮ ಕನಸುಗಳನ್ನು ಬೆನ್ನತ್ತಲು ಅಮೂಲ್ಯವಾದ ಸಲಹೆಗಳನ್ನು ಹಾಗೂ ಜೀವನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಈ ವಿಶೇಷ ಸಂವಾದದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ಬೆನ್ನಲ್ಲೇ ಡಿಕೆ ಟ್ರೋಲ್​ಗೂ ಒಳಗಾಗಿರುವುದು ವಿಶೇಷ.ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ದಿನೇಶ್ ಕಾರ್ತಿಕ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ 8 ಪಂದ್ಯಗಳಿಂದ DK ಕೇವಲ 83 ರನ್​ಗಳಿಸಿದ್ದಾರೆ. ಅಂದರೆ ತಂಡದ ಫಿನಿಶರ್ ಎನಿಸಿಕೊಂಡಿರುವ ಕಾರ್ತಿಕ್ ಅವರ ಬ್ಯಾಟ್​ನಿಂದ ಕೇವಲ 11.86 ಸರಾಸರಿಯಲ್ಲಿ ರನ್ ಮೂಡಿಬಂದಿದೆ.ಇತ್ತ ದಿನೇಶ್ ಕಾರ್ತಿಕ್ ಅವರಂತಹ ಅನುಭವಿ ಆಟಗಾರ ಮಧ್ಯಮ ಕ್ರಮಾಂಕದಲ್ಲಿ ವಿಫಲರಾಗುತ್ತಿರುವುದು ಆರ್​ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಇಂತಹ ಕಳಪೆ ಫಾರ್ಮ್​ನಲ್ಲಿರುವ ಡಿಕೆ ಯುವ ಕ್ರಿಕೆಟಿಗರಿಗೆ ಸಲಹೆ ನೀಡಲು ಹೋಗಿರುವುದನ್ನು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.ಕೆಲವರು ಯುವ ಆಟಗಾರರಿಗೆ ನೀಡುವ ಸಲಹೆಯನ್ನು ನಿಮ್ಮದೇ ಕೆರಿಯರ್​ನಲ್ಲಿ ಉಪಯೋಗಿಸಿ ಎಂದು ಕಿಚಾಯಿಸಿದರೆ, ಮತ್ತೆ ಕೆಲವರು ಕಳಪೆ ಫಾರ್ಮ್​ನಲ್ಲಿದ್ದರೂ ಸತತ ಹೇಗೆ ಅವಕಾಶ ಪಡೆಯಬಹುದೆಂದು ಬಿಟ್ಟಿ ಸಲಹೆ ನೀಡಿರಬಹುದೇ? ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ಸೀಮಿತ ಓವರ್​ ಕ್ರಿಕೆಟ್​ನಲ್ಲಿ 391 ಪಂದ್ಯಗಳನ್ನಾಡಿ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗದ ಆಟಗಾರನಿಂದ ಯುವ ಪ್ರತಿಭೆಗಳಿಗೆ ಕ್ರಿಕೆಟ್ ಪಾಠ...ಎಂದು ಕಾಲೆಳೆದಿದ್ದಾರೆ.ಒಟ್ಟಿನಲ್ಲಿ ಅಂಡರ್-16 ಆಟಗಾರರೊಂದಿಗೆ ಸಂವಾದ ನಡೆಸಿರುವ ದಿನೇಶ್ ಕಾರ್ತಿಕ್ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದಾಗ್ಯೂ ಅವರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಹಳೆಯ ಖದರ್ ತೋರಿಸುವ ಮೂಲಕ ಟ್ರೋಲರ್ಸ್​ಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.

source https://tv9kannada.com/photo-gallery/cricket-photos/ipl-2023-dinesh-karthik-interacted-with-u-16-players-kannada-news-zp-au50-566288.html

Leave a Reply

Your email address will not be published. Required fields are marked *