ಕೋವಿಡ್ mRNA ಲಸಿಕೆಗಳ ಆವಿಷ್ಕಾರ: ವಿಜ್ಞಾನಿಗಳಾದ ಕ್ಯಾಟಲಿನ್ ಕರಿಕೊ, ಡ್ರೂ ವೈಸ್‌ಮನ್‌ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.
ಸ್ಟಾಕ್‌ಹೋಮ್ (ಸ್ವೀಡನ್) : ವಿಶ್ವವನ್ನೇ ಕಾಡಿದ್ದ ಕೋವಿಡ್ ಸಾಂಕ್ರಾಮಿಕಕ್ಕೆ ಲಸಿಕೆ ಕಂಡುಹಿಡಿಯಲು ಸಾಧ್ಯವಾಗುವ ಅಧ್ಯಯನ ನಡೆಸಿದ್ದ ಇಬ್ಬರು ವಿಜ್ಞಾನಿಗಳಾದ ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್‌ಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.
ಕಳೆದ ವರ್ಷ ಕೈತಪ್ಪಿದ್ದ ಪ್ರತಿಷ್ಟಿತ ಪ್ರಶಸ್ತಿ ಈ ಬಾರಿ ಒಲಿದುಬಂದಿದೆ.
ಕೋವಿಡ್-19 ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಅನುವಾಗುವ ಸಂಶೋಧನೆಗಳನ್ನು ನಡೆಸಿದ ಹಂಗೇರಿಯ ಸಗನ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಅವರಿಗೆ ನೊಬೆಲ್ ಗೌರವ ಸಂದಿದೆ. ಇಂದು (ಅಕ್ಟೋಬರ್ 2) 2023ನೇ ಸಾಲಿನ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಯಿತು.
ಕೋವಿಡ್-19 ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆ ಉಂಟು ಮಾಡುವ ನ್ಯೂಕ್ಲಿಯೊಸೈಡ್ ಬೇಸ್ ಅಧ್ಯಯನಕ್ಕಾಗಿ ಕ್ಯಾಟಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಅವರಿಗೆ ಜಂಟಿಯಾಗಿ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ನೊಬೆಲ್ ಸಮಿತಿಯ ಕಾರ್ಯದರ್ಶಿ ಥಾಮಸ್ ಪರ್ಲ್‌ಮನ್ ಕೊರೊಲಿನ್ಸ್ಕಾ ತಿಳಿಸಿದರು.
ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಎಮ್‌ಆರ್‌ಎನ್‌ಎ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಕುರಿತ ಅವರ ನ್ಯೂಕ್ಲಿಯೊಸೈಡ್ ಬೇಸ್ ಸಂಶೋಧನೆಯಿಂದಲೇ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ವಿಜ್ಞಾನಿಗಳಿಬ್ಬರ ಆವಿಷ್ಕಾರ ವಿಶ್ವವನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ಮಟ್ಟಹಾಕಲು ನಿರ್ಣಾಯಕ ಅಂಶವಾಗಿದೆ ಎಂದು ನೊಬೆಲ್ ಸಮಿತಿ ಅಭಿಪ್ರಾಯಪಟ್ಟಿದೆ.
2005ರಲ್ಲಿ ನ್ಯೂಕ್ಲಿಯೊಸೈಡ್ ಬೇಸ್ ಸಂಶೋಧನೆ : 2020 ರಿಂದ ಕೊರೊನಾ ಸೋಂಕು ಆವರಿಸಿಕೊಂಡಿದೆ. ಈ ಸಾಂಕ್ರಾಮಿಕಕ್ಕೆ ಹಲವಾರು ಲಸಿಕೆಗಳನ್ನು ಕಂಡುಹಿಡಿಯಲಾಗಿದೆ. ವಿಜ್ಞಾನಿಗಳಾದ ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಅವರು 2005ರಲ್ಲೇ ಇಂಥದ್ದೊಂದು ವೈರಸ್ ದಾಳಿ ಮಾಡಿದಲ್ಲಿ ತಡೆಯಬಹುದಾದ ಸಂಶೋಧನೆ ನಡೆಸಿದ್ದರು ಎಂಬುದು ಗಮನಾರ್ಹ ಸಂಗತಿ.
ಪ್ರತಿರಕ್ಷಣಾ ವ್ಯವಸ್ಥೆಗೆ mRNA ಅಗತ್ಯವಾಗಿದೆ ಎಂಬುದನ್ನು ವಿಜ್ಞಾನಿಗಳಿಬ್ಬರು ಕಂಡುಕೊಂಡಿದ್ದರು. ಸಸ್ತನಿ ಕೋಶಗಳಲ್ಲಿ ಎಂಆರ್‌ಎನ್‌ಎ ಪ್ರತಿಕ್ರಿಯೆ ಇಲ್ಲವೆಂಬುದನ್ನು ಗುರುತಿಸಿದ ಅವರು, ಕೆಲವು ನಿರ್ಣಾಯಕ ಗುಣಲಕ್ಷಣಗಳುಳ್ಳ ವಿವಿಧ ರೀತಿಯ mRNAಗಳನ್ನು ಪ್ರತ್ಯೇಕಿಸಬೇಕು ಎಂದು ಕಾರಿಕೋ ಮತ್ತು ವೈಸ್‌ಮನ್ ಅರಿತುಕೊಂಡರು.
ಆರ್‌ಎನ್‌ಎ ನಾಲ್ಕು ಬೇಸ್‌ಗಳನ್ನು ಹೊಂದಿದ್ದು, ಎ, ಯು, ಜಿ ಮತ್ತು ಸಿ ಎಂದು ವಿಂಗಡಿಸಲಾಗಿದೆ. ಡಿಎನ್‌ಎಯಲ್ಲಿನ ಎ, ಟಿ, ಜಿ ಮತ್ತು ಸಿ ಯಂತೆ ಇವುಗಳನ್ನು ಜೆನೆಟಿಕ್ ಕೋಡ್ಗಳಿಂದ ಗುರುತಿಸಲಾಗಿದೆ. ಸಸ್ತನಿ ಕೋಶಗಳಿಂದ ಆರ್‌ಎನ್‌ಎಯಲ್ಲಿನ ಬೇಸ್‌ಗಳು ಆಗಾಗ್ಗೆ ರಾಸಾಯನಿಕವಾಗಿ ಮಾರ್ಪಾಡಾಗುತ್ತವೆ ಎಂದು ಕಾರಿಕೋ ಮತ್ತು ವೈಸ್‌ಮನ್ ಅರಿತಿದ್ದರು. ವಿಟ್ರೊ ಟ್ರಾನ್ಸ್‌ಕ್ರಿಪ್ಟೆಡ್ ಎಮ್‌ಆರ್‌ಎನ್‌ಎ ಅಲ್ಲ. ಇನ್ ವಿಟ್ರೊ ಟ್ರಾನ್ಸ್‌ಕ್ರಿಪ್ಟೆಡ್ ಆರ್‌ಎನ್‌ಎ ಎಂದು ತಿಳಿದು ಆಶ್ಚರ್ಯಗೊಂಡಿದ್ದರು.
ಇದನ್ನೇ ಸಂಶೋಧನೆಗೆ ಒಳಪಡಿಸಿದ ಅವರು mRNAಗಳ ವಿಭಿನ್ನ ರೂಪಾಂತರಗಳನ್ನು ಉತ್ಪಾದಿಸಿದರು. ಬಳಿಕ ಅವನ್ನು ಡೆಂಡ್ರಿಟಿಕ್ ಕೋಶಗಳಿಗೆ ಸೇರಿಸಿದರು. ಗಮನಾರ್ಹ ಫಲಿತಾಂಶ ಬಂದವು. mRNA ಯಲ್ಲಿನ ಬೇಸ್ ಮಾರ್ಪಾಡಿನಿಂದ ಜೀವಕೋಶಗಳು ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಂಡುಕೊಳ್ಳಲಾಯಿತು. ಇದನ್ನೇ ವೈರಸ್ ವಿರುದ್ಧದ ಚಿಕಿತ್ಸೆಗೆ ಬಳಸುವುದಕ್ಕಾಗಿ ಸಂಶೋಧನೆ ನಡೆಸಿ ಯಶಸ್ವಿಯಾಗಿದ್ದರು. ಈ ಸಂಶೋಧನೆಯ ಫಲಿತಾಂಶಗಳನ್ನು 2005 ರಲ್ಲಿಯೇ ನಡೆಸಲಾಗಿತ್ತು. ಕೋವಿಡ್- 19 ಸಾಂಕ್ರಾಮಿಕ ರೋಗ ಹರಡು 15 ವರ್ಷಗಳ ಮೊದಲು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1