ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಜ.14:
ಬಳ್ಳಾರಿ ಟೂ ಬೆಂಗಳೂರು ಬಿಜೆಪಿ ಪಾದಯಾತ್ರೆ ಮಾಡಬೇಕು ಎಂಬುವುದು ರಾಜ್ಯದ ಎಲ್ಲಾ ನಾಯಕರ ಅಭಿಪ್ರಾಯವಾಗಿದ್ದು, ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಮಾಡಬೇಕು ಎಂಬುವುದು ಜನಾರ್ಧನರೆಡ್ಡಿ, ಶ್ರೀರಾಮುಲು ಅಭಿಪ್ರಾಯ ಮಾತ್ರ ಅಲ್ಲ, ನಮ್ಮೆಲ್ಲರ ಅಭಿಪ್ರಾಯವಾಗಿದೆ. ವರಿಷ್ಠರ ಜೊತೆ ಈಗಾಗಲೇ ನಾನು ಮಾತನಾಡಿದ್ದೇನೆ. ಒಂದೆರಡು ದಿನದಲ್ಲಿ ಪಾದಯಾತ್ರೆ ಬಗ್ಗೆ ಮಾಹಿತಿ ಸಿಗಲಿದೆ ಎಂದ ಅವರು, ರಾಜ್ಯದಲ್ಲಿ ಅರಾಜಕತೆ ವಿರುದ್ಧ ಹೋರಾಟಕ್ಕೆ ಪಕ್ಷ ನಿರ್ಧಾರ ಮಾಡಿದ್ದು, ಮೊದಲ ಹಂತದಲ್ಲಿ ಜ.17ಕ್ಕೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೆವೆ ಎಂದರು.
ಡಿಸಿಎಂ ಡಿಕೆಶಿ ಶಿಕಾರಿಪುರಕ್ಕೆ ಪಾದಯಾತ್ರೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಾದಯಾತ್ರೆ ಬೇಡ ಡಿ.ಕೆ.ಶಿವಕುಮಾರ್ ಶಿಕಾರಿಪುರಕ್ಕೆ ಬಂದು ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿ ಮೈಸೂರು ಹೆಲಿಪ್ಯಾಡ್‍ನಲ್ಲಿ ರಾಹುಲ್‍ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಚರ್ಚೆ ವಿಚಾರಕ್ಕೆ ಮಾತನಾಡಿ, ಒಬ್ಬರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಕಾತುರವಿದೆ. ನನ್ನ ತಾಳ್ಮೆ ಕೆಣಕಬೇಡಿ ಎಂದು ಉಳಿದವರು ಸಿದ್ಧರಾಗಿದ್ದಾರೆ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ. ಇರಲಿ ಬಿಡಿ ಪಾಪ ಎಂದು ಲೇವಡಿ ಮಾಡಿದರು.
ಮನರೇಗಾ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಗ್ರಾಮೀಣ ಅಭಿವೃದ್ಧಿಗಾಗಿ ಜಿ ರಾಮ್ ಜಿ ಯೋಜನೆ ಮಾಡಲಾಗಿದೆ. ಆದರೆ ಈ ಯೋಜನೆ ಬಗ್ಗೆ ಸಿದ್ಧರಾಮಯ್ಯ, ರಾಹುಲ್ ಗಾಂಧಿಯಿಂದ ಅಪಪ್ರಚಾರ ನಡೆಸಲಾಗುತ್ತಿದೆ. ಆದ್ದರಿಂದ ಬಿಜೆಪಿ ರಾಜ್ಯಾದೆಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಗುವುದು ಎಂದು ತಿಳಿಸಿದರು. ಹೆಚ್.ಡಿ.ದೇವೆಗೌಡ್ರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಅವರ ಕೈ ಬಲ ಪಡಿಸಲು ಎನ್‍ಡಿಎ ಸೇರಿದ್ದಾರೆ. ಅದರಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ವರಿಷ್ಠರೇ ತೀರ್ಮಾನಿ ಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಅಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷರಾದ ಎ.ಮುರಳಿ, ರಘುಮೂರ್ತಿ, ಮುಖಂಡರಾದ ಹನುಮಂತೇಗೌಡ, ಲಕ್ಷ್ಮೀಕಾಂತ, ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಸಿದ್ದಾಪುರ ಸುರೇಶ್, ಡಾ. ಸಿದಾರ್ಥ,ಅನಿತ್ ಕುಮಾರ್, ಲೋಕೇಶ್, ನಾಗರಾಜ್ ಭಾರ್ಗವು ದ್ರಾವಿಡ್ ಸೇರಿದಂತೆ ವೀರಶೈವ ಸಮಾಜದ ಮುಖಂಡರು ಹಾಜರಿದ್ದರು.
Views: 30