ಚಿತ್ರದುರ್ಗ ಪಾರ್ಶ್ವನಾಥ ವಿದ್ಯಾಸಂಸ್ಥೆಯಲ್ಲಿ 1500 ದೀಪಗಳಿಂದ ದೀಪಾವಳಿ ಸಂಭ್ರಮ – ಪರಿಸರ ಸ್ನೇಹಿ ಹಬ್ಬಕ್ಕೆ ಕರೆ.

ಚಿತ್ರದುರ್ಗ ಆ. 18

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಚಿತ್ರದುರ್ಗ ನಗರದ ಪಾರ್ಶ್ವನಾಥ ವಿದ್ಯಾಸಂಸ್ಥೆವತಿಯಿಂದ ಶನಿವಾರ ಶಾಲಾ ಆವರಣದಲ್ಲಿ ದೀಪಾವಳಿ ಹಬ್ಬವನ್ನು ಮಕ್ಕಳ ಸಮ್ಮುಖದಲ್ಲಿ ಆಚರಣೆಯನ್ನು ಮಾಡಲಾಯಿತು.
ಈ ಸಮಯದಲ್ಲಿ ಸುಮಾರು 1500 ದೀಪಗಳನ್ನು ಹಚ್ಚುವುದರ ಮೂಲಕ ದೀಪಾವಳಿಯನ್ನು ಆಚರಣೆ ಮಾಡಲಾಯಿತು. 


ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಶಾಲಾ ಆಧ್ಯಕ್ಷರಾದ ಬಾಬುಲಾಲ್ ಪೈಯಾದ್ ದೀಪವನ್ನು ಹಚ್ಚುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಈ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವಾಗಿ ಆಚರಣೆಯನ್ನು ಮಾಡಿ, ಹೆಚ್ಚಾಗಿ ಶಬ್ದವನ್ನು ಮಾಡುವಂತ ಹಾಗೂ ಹೆಚ್ಚಾಗಿ ಮಾಲಿನ್ಯವನ್ನು ಉಂಟು ಮಾಡುವಂತ ಪಟಾಕಿಗಳನ್ನು ಹಚ್ಚ ಬೇಡಿ ಇದರಿಂದ ನಮ್ಮ ಪರಿಸರಕ್ಕೆ ಹಾನಿಯಾಗುವುದ್ದಲ್ಲದೆ ನಮ್ಮ ಸುತ್ತಾ-ಮುತ್ತಲ್ಲಿನ ಪ್ರಾಣಿ ಪಕ್ಷಿಗಳಿಗೂ ಸಹಾ ತೊಂದರೆಯಾಗಲಿದೆ ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಮಕ್ಕಳು ಪಟಾಕಿಯನ್ನು ಹಚ್ಚುವಾಗ ಪೋಷಕರ ಸಹಾಯವನ್ನು ಪಡೆಯಿರಿ ನೀವೇ ಪಟಾಕಿಯನ್ನು ಹಚ್ಚುವಂತ ಕಾರ್ಯಕ್ಕೆ ಹೋಗಬೇಡಿ ಈ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಣೆಯನ್ನು ಮಾಡಿ ಎಂದು ಮಕ್ಕಳಿಗೆ ಕರೆ ನೀಡಿದರು.


ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಸುರೇಶ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶಾಂತ ಕುಮಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯರಾದ ನಾಜೀಮಾ ಸ್ವಾಲೇಹ, ಪ್ರೌಢ ಶಾಲಾ ಮುಖ್ಯಸ್ಥರಾದ ಜನಕರೆಡ್ಡಿ, ಶಾಲೆಯ ಆಡಳಿತ ಮಂಡಳಿ, ಭೋದಕ ಹಾಗೂ ಭೋದಕೇತರು ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ದೀಪಾವಳಿಯ ಹಬ್ಬದ ಅಂಗವಾಗಿ ದೀಪದ ಹಾಡುಗಳಿಗೆ ನೃತ್ಯವನ್ನು ಮಾಡಿದರು.

Views: 22

Leave a Reply

Your email address will not be published. Required fields are marked *