Health: ನಿದ್ರಾಹೀನತೆಯ ಮನೆಮದ್ದುಗಳು: ನಿದ್ರೆಯ ಕೊರತೆಯು ಯಾವುದೇ ವ್ಯಕ್ತಿಯನ್ನು ತೊಂದರೆಗೊಳಿಸಬಹುದು, ಆದರೆ ಅನೇಕ ಬಾರಿ ನಾವು ನಮ್ಮದೇ ಆದ ತಪ್ಪಿನಿಂದ ಇಂತಹ ಸಮಸ್ಯೆಯನ್ನು ಎದುರಿಸುತ್ತೇವೆ. ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.

- ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಚಾಕೊಲೇಟ್ ಸೇವಿಸಬಾರದು
- ರಾತ್ರಿ ಚಿಪ್ಸ್ ತಿನ್ನುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ
- ರಾತ್ರಿ ಬೆಳ್ಳುಳ್ಳಿ ತಿನ್ನುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ
ನಿದ್ರಾಹೀನತೆಯು ಪ್ರಸ್ತುತ ಯುಗದ ಪ್ರಮುಖ ಸಮಸ್ಯೆಯಾಗಿದೆ, ಇದಕ್ಕೆ ಸಾಮಾನ್ಯವಾಗಿ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೇ ಕಾರಣವೆಂದು ಹೇಳಲಾಗುತ್ತದೆ. ಕೆಲವು ಜನರು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡುವುದಿಲ್ಲ. ರಾತ್ರಿಯಿಡೀ ನಿದ್ರೆಯಿಲ್ಲದೆ ಒತ್ತಡ ಅನುಭವಿಸುತ್ತಾರೆ. ಇಂತವರು ಮರುದಿನ ಕಚೇರಿಯಲ್ಲಿ ಅಥವಾ ಕೆಲಸದಲ್ಲಿ ಆಯಾಸ ಎದುರಿಸುತ್ತಾರೆ. ಕೆಲವರು ಕುರ್ಚಿಯ ಮೇಲೆಯೇ ಕುಳಿತು ಕಿರು ನಿದ್ದೆ ಮಾಡುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಹೇಗೆ?
ರಾತ್ರಿ ವೇಳೆ ನಿಮಗೆ ಏಕೆ ನಿದ್ರೆ ಬರುವುದಿಲ್ಲ? ನಿದ್ರಾಹೀನತೆಗೆ ಹಲವು ಕಾರಣಗಳಿವೆ. ಕೆಲವೊಮ್ಮೆ ರಾತ್ರಿಯ ಆಹಾರ ಪದ್ಧತಿಯಿಂದಲೂ ಈ ಸಮಸ್ಯೆ ಉಂಟಾಗಬಹುದು. ಸಾಮಾನ್ಯವಾಗಿ ರಾತ್ರಿ ಆಹಾರ ಸೇವಿಸದ ಜನರಿಗೆ ಶಾಂತಿಯುತ ನಿದ್ರೆ ಬರುವುದಿಲ್ಲ, ಆದರೆ ಕೆಲವೊಮ್ಮೆ ನಿಮ್ಮ ನಿದ್ರೆಗೆ ಭಂಗ ತರುವಂತಹ ಆಹಾರವನ್ನು ನೀವು ತಿನ್ನುತ್ತೀರಿ. ರಾತ್ರಿ ಮಲಗುವ ಮುನ್ನ ಯಾವ ಆಹಾರ ಸೇವಿಸಬಾರದು ಅನ್ನೋದರ ಬಗ್ಗೆ ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.
ರಾತ್ರಿ ಮಲಗುವ ಮುನ್ನ ಈ ಆಹಾರ ಸೇವಿಸಬೇಡಿ 1. ಚಾಕೊಲೇಟ್: ಪ್ರತಿ ವಯಸ್ಸಿನ ಜನರು ಚಾಕೊಲೇಟ್ ತಿನ್ನಲು ಇಷ್ಟಪಡುತ್ತಾರೆ, ಏಕೆಂದರೆ ಅದರ ರುಚಿ ತುಂಬಾ ಚೆನ್ನಾಗಿರುತ್ತದೆ. ಈ ಸಿಹಿ ಪದಾರ್ಥದಿಂದ ಆರೋಗ್ಯಕ್ಕೆ ಹಲವಾರು ಅನಾನುಕೂಲತೆಗಳಿವೆ, ಆದರೆ ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿದರೆ ಇದು ಶಾಂತಿಯುತ ನಿದ್ರೆಗೆ ಭಂಗ ತರುತ್ತದೆ.
2. ಚಿಪ್ಸ್: ನಾವು ಅನೇಕ ಬಾರಿ ರಾತ್ರಿಯಲ್ಲಿ ಚಿಪ್ಸ್ ತಿನ್ನುತ್ತೇವೆ. ಆದರೆ ಇದನ್ನು ಯಾವತ್ತೂ ಮಾಡಬೇಡಿ. ಏಕೆಂದರೆ ಇದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ. ರಾತ್ರಿ ವೇಳೆ ಚಿಪ್ಸ್ ತಿನ್ನುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ನಿಮ್ಮ ನಿದ್ರೆಯ ಮೇಲೆ ಸಂಪೂರ್ಣವಾಗಿ ತೊಂದರೆಯಾಗುತ್ತದೆ.
3. ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಮಸಾಲೆಯಾಗಿ ಬಳಸಲಾಗುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಬೆಳ್ಳುಳ್ಳಿ ಒಂದು ರೀತಿ ವಾಸನೆ ಹೊಂದಿರುತ್ತದೆ, ರಂಜಕ ಮತ್ತು ಪೊಟ್ಯಾಸಿಯಮ್ನಂತಹ ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದರ ಸಹಾಯದಿಂದ ನಮ್ಮ ದೇಹದ ಮೂಳೆಗಳು ಬಲಗೊಳ್ಳುತ್ತವೆ. ಆದರೆ ರಾತ್ರಿ ಇದನ್ನು ತಿನ್ನುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಇದರಲ್ಲಿರುವ ರಾಸಾಯನಿಕಗಳು ನಿಮ್ಮನ್ನು ಪ್ರಕ್ಷುಬ್ಧಗೊಳಿಸುತ್ತವೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಬೇಕು. Samagrasuddi.co.in ಇದನ್ನು ದೃಢಪಡಿಸುವುದಿಲ್ಲ.)