ಚಹಾದೊಂದಿಗೆ ರಸ್ಕ್ ತಿನ್ನುವ ಹವ್ಯಾಸ ಖಂಡಿತಾ ಬೇಡ ! ರಸ್ಕ್ ತಿಂದರೆ ಎದುರಾಗುವುದು ಈ ಸಮಸ್ಯೆ.

ಮೈದಾ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಮೈದಾ, ರಿಫೈನ್ಡ್ ಎಣ್ಣೆ, ಸಕ್ಕರೆ ಇದ್ಯಾವುದೂ ಕೂಡಾನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

  • ಚಹಾದೊಂದಿಗೆ ರಸ್ಕ್ ತಿನ್ನಬಾರದು
  • ರಸ್ಕ್ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ
  • ಚಹಾದೊಂದಿಗೆ ರಸ್ಕ್ ತಿನ್ನುವ ಅನಾನುಕೂಲಗಳು ಇಲ್ಲಿವೆ

Side Effects of Rusk : ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ಕೂಡಲೇ ಚಹಾ ಕುಡಿಯುವ ಹವ್ಯಾಸ ಇರುತ್ತದೆ. ಹೀಗೆ ಚಹಾ ಹೀರುವಾಗ ಖಾಲಿ ಹೊಟ್ಟೆಯಲ್ಲಿ ಚಹಾ ಬೇಡ ಎನ್ನುವ ಉದ್ದೇಶದಿಂದ ಕೆಲವರು ರಸ್ಕ್ ತಿನ್ನುತ್ತಾರೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ತಿನ್ನುವ ರಸ್ಕ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ರಸ್ಕ್ ಅನ್ನು ಮೈದಾ ಹಿಟ್ಟಿನಲ್ಲಿ ತಯಾರಿಸಲಾಗುತ್ತದೆ. ಈ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಮೈದಾ, ರಿಫೈನ್ಡ್ ಎಣ್ಣೆ, ಸಕ್ಕರೆ ಇದ್ಯಾವುದೂ ಕೂಡಾ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ರಸ್ಕ್‌ನಲ್ಲಿ  ಏನೆಲ್ಲಾ ಅಡಗಿರುತ್ತದೆ ?:
ಮೈದಾ ಹಿಟ್ಟನ್ನು ರಸ್ಕ್‌ನಲ್ಲಿ ಬಳಸಲಾಗುತ್ತದೆ. ಇದರೊಂದಿಗೆ ರಿಫೈನ್ಡ್ ಎಣ್ಣೆ, ಆರ್ಟಿಫಿಶಿಯಲ್ ಫ್ಲೇವರ್, ಪ್ರಿಸರ್ವೆಟಿವ್ಸ್ ಗಳನನ್ನು ಬಳಸಿ ರಸ್ಕ್ ತಯಾರಿಸಲಾಗುತ್ತದೆ.  ಈ ಎಲ್ಲಾ ವಸ್ತುಗಳು ಆರೋಗ್ಯವನ್ನು ಕೆಡಿಸುತ್ತವೆ. ಹಾಗಾಗಿ ದಿನಕ್ಕೆ ಕೇವಲ ಎರಡು ರಸ್ಕ್ ತಿನ್ನುವುದರಿಂದ ಕೂಡಾ ಸ್ಥೂಲಕಾಯತೆಯ ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗುತ್ತದೆ. 

ಚಹಾದೊಂದಿಗೆ ರಸ್ಕ್ ತಿನ್ನುವ ಅನಾನುಕೂಲಗಳು:
ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ :

ಚಹಾದೊಂದಿಗೆ ರಸ್ಕ್ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ರಸ್ಕ್ ಹೆಚ್ಚಿಸುತ್ತದೆ.

ಕರುಳನ್ನು ಹಾನಿಗೊಳಿಸುತ್ತದೆ : ಚಹಾದೊಂದಿಗೆ  ರಸ್ಕ್ ಅನ್ನು ಸೇವಿಸುವುದರಿಂದ ಅಲ್ಸರ್ ಸಮಸ್ಯೆ ಕಾಣಿಸಬಹುದು. ಇದು ಗ್ಯಾಸ್, ಕಳಪೆ ಜೀರ್ಣಕ್ರಿಯೆ ಸೇರಿದಂತೆ ಉದರದ ಸಮಸ್ಯೆಗಳನ್ನು ಉಂಟುಮಾಡಬಹುದು.

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ.)

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *