ಕಾಲು ಮತ್ತು ಪಾದಗಳಲ್ಲಿನ ಈ ಬದಲಾವಣೆ ಹೃದಯಘಾತದ ಲಕ್ಷಣವಾಗಿರಬಹುದು ನಿರ್ಲಕ್ಷಿಸದಿರಿ.

ಹೃದಯಾಘಾತದ ಲಕ್ಷಣಗಳು ಎದೆ ಮಾತು ಎದೆಯ ಸುತ್ತಮುತ್ತಲೂ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಕಾಲುಗಳು ಮತ್ತು ಪಾದಗಳಲ್ಲಿ ಕೂಡಾ ಕಾಣಿಸಿಕೊಳ್ಳುತ್ತದೆ.

ಬೆಂಗಳೂರು: ಹೃದಯ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಹೃದಯ 24 ಗಂಟೆಯೂ ತನ್ನ ಕೆಲಸ ಮಾಡುತ್ತಿರುತ್ತದೆ. ದೇಹದ ಈ ಪ್ರಮುಖ ಭಾಗದಲ್ಲಿ ಸಮಸ್ಯೆ ಉಂಟಾದಾಗ, ಸಂಬಂಧಿತ ಲಕ್ಷಣಗಳು ಮೊದಲೇ ಕಾಣಿಸಿಕೊಳ್ಳುತ್ತವೆ. ಆದರೆ ಆ ಲಕ್ಷಣವನ್ನು ಗುರುತಿಸಿಕೊಳ್ಳುವುದರಲ್ಲಿ ನಾವು ವಿಫಲರಾಗುತ್ತೇವೆ. 

ದೇಹದಲ್ಲಿನ ಯಾವುದೇ ಸಮಸ್ಯೆ ರಾತ್ರೋರಾತ್ರಿ ಸಂಭವಿಸುವುದಿಲ್ಲ. ದೇಹದ ಒಳಗೆ ಸ್ವಲ್ಪ ಮಟ್ಟಿನ ಬದಲಾವಣೆಯಾದರೂ ಅದರ ಪರಿಣಾಮ ಅಥವಾ ಲಕ್ಷಣಗಳು ದೇಹದ ಹೊರಗೆ ಕೂಡಾ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳನ್ನು ಗುರುತಿಸಿಕೊಳ್ಳುವುದು ಬಹಳ ಮುಖ್ಯ. 

ಹೃದಯಾಘಾತದ ಲಕ್ಷಣಗಳು ಎದೆ ಮಾತು ಎದೆಯ ಸುತ್ತಮುತ್ತಲೂ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಕಾಲುಗಳು ಮತ್ತು ಪಾದಗಳಲ್ಲಿ ಕೂಡಾ ಕಾಣಿಸಿಕೊಳ್ಳುತ್ತದೆ. 

ಕಳಪೆ ಜೀವನಶೈಲಿ ಮತ್ತು ಆಹಾರ ಪದ್ದತಿಯ ಬದಲಾವಣೆಯಿಂದಾಗಿ ಹೃದಯಾಘಾತದಂತಹ  ಸಮಸ್ಯೆಗಳ ಅಪಾಯ ಕೂಡಾ ಹೆಚ್ಚುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು, ಸರಿಯಾದ ಆಹಾರ ಮತ್ತು ಸರಿಯಾದ ಜೀವನಶೈಲಿಯನ್ನು ಅನುಸರಿಸುವುದು ಮಾತ್ರವಲ್ಲ, ಹೃದಯಾಘಾತದ ಮೊದಲು ದೇಹದಲ್ಲಿ ಹೆಚ್ಚಾಗಿ ಕಂಡುಬರುವ ರೋಗಲಕ್ಷಣಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಈ ಲಕ್ಷಣಗಳ ಬಗ್ಗೆ ನಿಗಾವಹಿಸಿದರೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುಣಪಡಿಸಬಹುದು. 

ಕಾಲು ಮತ್ತು ಪಾದಗಳಲ್ಲಿನ ಹೃದಯಘಾತದ ಲಕ್ಷಣಗಳು:

ಕಾಲುಗಳಲ್ಲಿ ಊತ : 
ಹೃದಯದಲ್ಲಿ ಸಮಸ್ಯೆ ಇದ್ದರೆ, ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ. ಕಾಲುಗಳಿಂದ ಹೃದಯಕ್ಕೆ ರಕ್ತ ಮರಳುವುಡು ವಿಳಂಬವಾಗುತ್ತದೆ. ಈ ಕಾರಣದಿಂದ ಕಾಳುಗಳಲ್ಲಿ ಊತ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬಾರದು.

ಪಾದಗಳಲ್ಲಿ ನೋವು : 
ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಕೆಲವು ಅಪರೂಪದ ಸಂದರ್ಭಗಳಲ್ಲಿ ಇದು ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವೂ ಆಗಿರಬಹುದು. ಆದರೆ, ಹೃದಯಾಘಾತದ ಮೊದಲು ಕಾಲು ನೋವು ಸಂಭವಿಸಬಹುದು. ಆದ್ದರಿಂದ ಹೃದಯ ಸಂಬಂಧಿ ರೋಗ ಇರುವವರು ಕಾಲು ನೋವಿನ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. 

ಪಾದಗಳ ಬಣ್ಣ ಬದಲಾಗುತ್ತದೆ : 
ಹೃದಯವು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ದೇಹದ ಎಲ್ಲಾ ಭಾಗಗಳಿಗೆ ಸಾಕಷ್ಟು ರಕ್ತವನ್ನು ಪಂಪ್ ಮಾಡುವುದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಆಮ್ಲಜನಕಯುಕ್ತ ರಕ್ತದ ಕೊರತೆಯಿಂದಾಗಿ, ದೇಹದ ಚರ್ಮವು ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಇದು ಹೃದಯಾಘಾತ,  ಹೃದಯ ವೈಫಲ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಂಕೇತವಾಗಿದೆ.

ಕಾಲುಗಳಲ್ಲಿ ದೌರ್ಬಲ್ಯ :
ನಿಮ್ಮ ಕಾಲುಗಳು ದುರ್ಬಲವಾಗುತ್ತಿವೆ ಎನ್ನುವ ಭಾವ ನಿಮ್ಮಲ್ಲಿ ಬರುತ್ತಿದ್ದರೆ, ಅದು ಹೃದಯ ಸಂಬಂಧಿ ಸಮಸ್ಯೆಗಳ ಸಂಕೇತವೂ ಆಗಿರಬಹುದು. ರಕ್ತ ಸರಿಯಾಗಿ ಪಂಪ್ ಆಗದ ಕಾರಣ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳಿರುವ ಜನರು ಕಾಲು ಮತ್ತು ಕಾಲುಗಳಲ್ಲಿನ ದೌರ್ಬಲ್ಯದಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *