Health Care Tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಿಯರ್ ಕುಡಿಯಲು ಇಷ್ಟಪಡುತ್ತಾರೆ. ಬಿಯರ್ ಇಲ್ಲದೆ ಯಾವುದೇ ಪಾರ್ಟಿ ಪೂರ್ಣಗೊಳ್ಳುವುದಿಲ್ಲ. ಇನ್ನೊಂದೆಡೆ, ಬಿಯರ್ ಕುಡಿಯುವುದರಿಂದ ಕೆಲ ಪ್ರಯೋಜನಗಳು ಕೂಡ ಇವೆ ಎನ್ನಲಾಗುತ್ತದೆ.

Health Care Tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಿಯರ್ ಕುಡಿಯಲು ಇಷ್ಟಪಡುತ್ತಾರೆ. ಬಿಯರ್ ಇಲ್ಲದೆ ಯಾವುದೇ ಪಾರ್ಟಿ ಪೂರ್ಣಗೊಳ್ಳುವುದಿಲ್ಲ. ಇನ್ನೊಂದೆಡೆ, ಬಿಯರ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಬಿಯರ್ ಜೊತೆಗೆ ಕೆಲವು ವಸ್ತುಗಳನ್ನು ಸೇವಿಸುವುದು ಹಾನಿಕಾರಕ ಎನ್ನಲಾಗುತ್ತದೆ. ಹೌದು, ಕೆಲವರು ಬಿಯರ್ ಜೊತೆ ಪಿಜ್ಜಾ, ಬರ್ಗರ್, ಚಿಕನ್ ಇತ್ಯಾದಿ ಸೇವಿಸುತ್ತಾರೆ.
1. ಬಿಯರ್ ಕುಡಿದ 2 ಗಂಟೆಗಳವರೆಗೆ ಬ್ರೆಡ್ ಅಥವಾ ಬ್ರೆಡ್ ಮಾಡಿದ ವಸ್ತುಗಳನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಬಿಯರ್ ಕುಡಿದ ನಂತರ ಬ್ರೆಡ್‌ನಿಂದ ಮಾಡಿದ ಪದಾರ್ಥಗಳನ್ನು ಸೇವಿಸಬೇಡಿ.
2. ನೀವು ಬಿಯರ್ ಸೇವಿಸಿದರೆ ಅದರೊಂದಿಗೆ ಫ್ರೆಂಚ್ ಫ್ರೈಸ್ ನಂತಹ ಪದಾರ್ಥಗಳನ್ನು ಸೇವಿಸಬೇಡಿ. ಬಿಯರ್ ಜೊತೆಗೆ ಫ್ರೆಂಚ್ ಫ್ರೈಸ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
3. ಬಿಯರ್ ಜೊತೆಗೆ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಬಾರದು. ಇದರ ಸೇವನೆಯು ನಿಮಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಉರಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.
4. ಜನರು ಉಪ್ಪುಸಹಿತ ಕಡಲೆಕಾಯಿಯನ್ನು ಬಿಯರ್‌ನೊಂದಿಗೆ ತಿನ್ನುತ್ತಾರೆ, ಆದರೆ ಹಾಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದನ್ನು ಸೇವಿಸುವುದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗಬಹುದು.
5. ಬಿಯರ್ ಸೇವನೆಯ ಬಳಿಕ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ, ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಳು ಕಾರಣವಾಗುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)