ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ನಿಮಗೂ ಇದೆಯಾ? ಈ ಸತ್ಯ ತಿಳಿದುಕೊಳ್ಳಿ

ಕಾಫಿ ಕುಡಿಯಲು ಉತ್ತಮ ಸಮಯ ಯಾವುದು? ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನಾಗುತ್ತದೆ  ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರು : ಒಂದು ಕಪ್ ಕಾಫಿ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ದೀರ್ಘಾಯುಷ್ಯ, ಹೃದ್ರೋಗ, ಮಧುಮೇಹ, ಆಲ್ಝೈಮರ್ ಕಾಯಿಲೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ಮೇಲೆ ಕಾಫಿ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎನ್ನುವುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಕಾಫಿಯಿಂದ ಆರೋಗ್ಯಕ್ಕೆ ಲಾಭ ಇದೆ ಎನ್ನುವ ಕಾರಣಕ್ಕೆ ಯಾವಾಗ ಬೇಕೋ ಆಗ ಕಾಫಿ ಕುಡಿಯುವ ಅಭ್ಯಾಸ ಕೂಡಾ ಸರಿಯಲ್ಲ. ಕೆಲವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಹೀಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಕಾಫಿ  ಒಳ್ಳೆಯದಕ್ಕಿಂತ  ಕೆಡುಕು ಮಾಡುವುದೇ ಹೆಚ್ಚು. ಇದು ಜೀರ್ಣಕಾರಿ ಸಮಸ್ಯೆಗಳು, ರಕ್ತದಲ್ಲಿನ ಸಕ್ಕರೆಯ ಅಸಮತೋಲನವನ್ನು ಹೆಚ್ಚಿಸುತ್ತದೆ. ಮುಂಜಾನೆ ಸಮಯದಲ್ಲಿ ನಮ್ಮ ಕಾರ್ಟಿಸೋಲ್ ಮಟ್ಟಗಳು  ಹೆಚ್ಚಾಗಿರುತ್ತವೆ. ಕಾಫಿ ಕುಡಿಯುವುದರಿಂದ  ಈ ಕಾರ್ಟಿಸೋಲ್  ಹಾರ್ಮೋನ್ ಮಟ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಮೂಡ್ ಸ್ವಿಂಗ್ ಮತ್ತು ಆತಂಕ ಹೆಚ್ಚಾಗುವುದಕ್ಕೆ ಕಾರಣವಾಗಬಹುದು.

ಅನೇಕ ಜನರಿಗೆ, ಕಾಫಿ ಅವರ ಬೆಳಗಿನ ದಿನಚರಿಯ ಪ್ರಮುಖ ಭಾಗವಾಗಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ  ಕಾಫಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಹಾಗಾದರೆ ಕಾಫಿ ಕುಡಿಯಲು ಉತ್ತಮ ಸಮಯ ಯಾವುದು? ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನಾಗುತ್ತದೆ  ಎನ್ನುವ ಮಾಹಿತಿ ಇಲ್ಲಿದೆ. 

ಹೊಟ್ಟೆ ಉಬ್ಬುವುದು, ವಾಕರಿಕೆ, ಅಜೀರ್ಣಕ್ಕೆ ಕಾರಣವಾಗಬಹುದು : 
– ಕಾಫಿ ಹೊಟ್ಟೆಯಲ್ಲಿ  ಆಸಿಡ್ ಉತ್ಪಾದನೆಯನ್ನು  ಹೆಚ್ಚಿಸುತ್ತದೆ. ಉದರದಲ್ಲಿ ಆಸಿಡ್ ಪ್ರಮಾಣ ಹೆಚ್ಚಾದರೆ ಅದು ಜೀರ್ಣಾಂಗ ವ್ಯವಸ್ಥೆಯನ್ನು ತೀವ್ರವಾಗಿ ಅಡ್ಡಿಪಡಿಸುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ವಾಕರಿಕೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ : 
– ಮೊದಲನೆಯದಾಗಿ, ಇದು ಕಾರ್ಟಿಸೋಲ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಇದು ಅಂಡೋತ್ಪತ್ತಿ, ತೂಕ ಹೆಚ್ಚಳ ಮತ್ತು ಹಾರ್ಮೋನುಗಳ ಸಮತೋಲನದ ಮೇಲೆ  ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಪರಿಣಾಮ  : 
– ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಸೇವಿಸುವುದರಿಂದ  ರಕ್ತದಲ್ಲಿನ ಸಕ್ಕರೆ  ಪ್ರಮಾಣ ಹೆಚ್ಚಾಗುತ್ತದೆ. 

ಹಾರ್ಮೋನ್ ಸಮಸ್ಯೆ : 
– ಲೆವೊಥೈರಾಕ್ಸಿನ್ (ಸಿಂಥೆಟಿಕ್ ಥೈರಾಯ್ಡ್ ಹಾರ್ಮೋನ್) ಹೀರಿಕೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ T4 ನಿಂದ T3 ಹಾರ್ಮೋನ್‌ಗಳ ಪರಿವರ್ತನೆಯ ಮೇಲೆ ಪರಿಣಾಮ ಬೀರುತ್ತದೆ.

ಉರಿಯೂತವನ್ನು ಉಂಟುಮಾಡುತ್ತದೆ : 
ಆಯಾಸ, ಚರ್ಮದ ಸಮಸ್ಯೆಗಳು, ಮಧುಮೇಹ ಮತ್ತು  ರೋಗ ನಿರೋಧಕ ಶಕ್ತಿ, ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. 

ಹಾಗಿದ್ದರೆ ಕಾಫಿ ಕುಡಿಯಲು ಉತ್ತಮ ಸಮಯ ಯಾವುದು ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಸರಿಯಾದ ಉತ್ತರ ಬೆಳಗಿನ ಉಪಹಾರ ಮುಗಿಸಿದ ಸ್ವಲ್ಪ ಸಮಯದ ನಂತರ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/health/side-effects-of-consuming-coffee-on-empty-stomach-156754

Leave a Reply

Your email address will not be published. Required fields are marked *