IPL 2023: 2 ಪಂದ್ಯಗಳಲ್ಲಿ ಎಷ್ಟು ಡಾಟ್ ಬಾಲ್​ ಆಗಿದೆ ಗೊತ್ತಾ?

IPL 2023: ಈ ಬಾರಿಯ ಐಪಿಎಲ್ ಪ್ಲೇಆಫ್ಸ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಹೊಸ ಅಭಿಯಾನ ಕೈಗೊಂಡಿತ್ತು. ಈ ಅಭಿಯಾನದಂತೆ ಪ್ಲೇಆಫ್ಸ್ ಪಂದ್ಯಗಳಲ್ಲಿ ಮಾಡುವ ಪ್ರತಿ ಡಾಟ್ ಬಾಲ್​ಗೆ ಟಾಟಾ ಕಂಪೆನಿಯ ಸಹಭಾಗಿತ್ವದಲ್ಲಿ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ. ಇದೇ ಕಾರಣದಿಂದಾಗಿ ಪ್ಲೇಆಫ್ಸ್​ ಪಂದ್ಯಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರದ ಗ್ರಾಫಿಕ್ಸ್​ ಅನ್ನು ಬಳಸಲಾಗುತ್ತಿದೆ. ಇದೀಗ ಪ್ಲೇಆಫ್ಸ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ಮುಗಿದಿವೆ.ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್​ಗಳು 40 ಓವರ್​ಗಳಲ್ಲಿ ಒಟ್ಟು 84 ಡಾಟ್ ಬಾಲ್​ಗಳನ್ನು ಎಸೆದಿದ್ದಾರೆ.ಇನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್​ಗಳು ಮಾಡಿದ ಒಟ್ಟು ಡಾಟ್ ಬಾಲ್ 96. ಅಂದರೆ ಎರಡು ಪಂದ್ಯಗಳಿಂದ ಒಟ್ಟು 180 ಡಾಟ್ ಬಾಲ್​ಗಳು ಮೂಡಿಬಂದಿದೆ.ಅದರಂತೆ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ಡಾಟ್​ ಬಾಲ್​ಗೆ ಅನುಗುಣವಾಗಿ ಬಿಸಿಸಿಐ ಒಟ್ಟು 42 ಸಾವಿರ ಗಿಡಗಳನ್ನು ನೆಡಲಿದ್ದಾರೆ.ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಮೂಡಿಬಂದ 96 ಡಾಟ್​ ಬಾಲ್​ಗೆ ಅನುಗುಣವಾಗಿ 48 ಸಾವಿರ ಗಿಡಗಳನ್ನು ನೆಡಲಿದ್ದಾರೆ. ಅಂದರೆ ಕೇವಲ 2 ಪಂದ್ಯಗಳಿಂದ ಬಿಸಿಸಿಐ ಒಟ್ಟು 90 ಸಾವಿರ ಸಸಿಗಳನ್ನು ಬೆಳೆಸಲಿದ್ದಾರೆ.ಇನ್ನು 2ನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಬಾಕಿಯಿದ್ದು, ಈ ಪಂದ್ಯಗಳ ಮುಕ್ತಾಯದ ವೇಳೆ ಸಸಿಗಳ ಸಂಖ್ಯೆ ಒಂದುವರೆ ಲಕ್ಷ ದಾಟುವ ಸಾಧ್ಯತೆಯಿದೆ.

source https://tv9kannada.com/photo-gallery/cricket-photos/ipl-2023-playoffs-bcci-to-plant-500-trees-for-every-dot-ball-kannada-news-zp-586909.html

Views: 0

Leave a Reply

Your email address will not be published. Required fields are marked *