OM MANTRA HEALTH BENEFITS ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ದೇವರು ಓಂ ಶಬ್ಧದಲ್ಲಿದ್ದಾರೆ ಎಂಬುದು ಧಾರ್ಮಿಕ ನಂಬಿಕೆಯಿದೆ. ಓಂ ಮಂತ್ರ ಪಠಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನಗಳು ಲಭಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

Om Mantra chanting health benefits: ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಪದಗಳನ್ನು ಉಚ್ಛರಿಸುವ ಕ್ರಿಯೆಯನ್ನು ಮಂತ್ರ ಎಂದು ಹೇಳಲಾಗುತ್ತದೆ. ದೇಹ, ಮನಸ್ಸಿನ ಮೇಲೆ ಮಂತ್ರ ದೊಡ್ಡ ಪರಿಣಾಮ ಬೀರುತ್ತದೆ. ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ನಮ್ಮ ದೇಹ ಕೂಡ ಸದೃಢವಾಗಿರುತ್ತದೆ. ಮನುಷ್ಯನ ಜೀವನದಲ್ಲಿ ಉತ್ತಮ ಬದಲಾವಣೆ ತರುವಂತಹ ಮಂತ್ರಗಳು ವೇದ ಗ್ರಂಥಗಳ ಹಾಗೂ ವಿವಿಧ ಧಾರ್ಮಿಕ ಪುಸ್ತಕಗಳ ಸಂಪೂರ್ಣ ಪಠ್ಯದ ಆಧಾರವಾಗಿವೆ.
ಈ ಮಂತ್ರಗಳು ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆಯ ಭಾವನೆಗಳನ್ನು ಪ್ರಚೋದಿಸುವ ಪ್ರಬಲ ಮಾಧ್ಯಮವಾಗಿವೆ. ಹಿಂದೂ ಧರ್ಮದಲ್ಲಿ ಋಷಿಮುನಿಗಳು, ಜ್ಯೋತಿಷಿಗಳು ಹಾಗೂ ಸಾಮಾನ್ಯ ಜನರು ಧಾರ್ಮಿಕ ಆಚರಣೆಗಳಿಗಾಗಿ ಹಾಗೂ ಧ್ಯಾನ ಉದ್ದೇಶಕ್ಕಾಗಿ ವಿವಿಧ ಪವಿತ್ರ ಮಂತ್ರಗಳನ್ನು ಜಪಿಸುತ್ತಾರೆ. ನಿರ್ದಿಷ್ಟ ಶಕ್ತಿಶಾಲಿಯಾದ ಮಂತ್ರದೊಂದಿಗೆ ಒಟ್ಟಾರೆ ಆರೋಗ್ಯಕ್ಕೆ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಓಂ ಅಚ್ಚರಿ ಮಂತ್ರ: ಮನಸ್ಸು ಸದೃಢವಾಗಿರಬೇಕಾದರೆ ಮಂತ್ರ ಪಠಿಸುವುದು ಅಗತ್ಯವಾಗಿದೆ. ಓಂ ಪ್ರಮುಖವಾಗಿ ಮೂರು ಉಚ್ಚಾರಾಂಶಗಳಿಂದ ಸೇರಿರುವುದು ಅಚ್ಚರಿಯ ಮಂತ್ರವಾಗಿದೆ. ಅ, ಯು ಹಾಗೂ ಮ ಅಕ್ಷರಗಳಿಂದ ಕೂಡಿದ ಈ ಪದವು ಸರ್ವಶಕ್ತ ಮಂತ್ರ. ಓಂ ಮಂತ್ರ ಪಠಣದಿಂದ ದೇಹಕ್ಕೆ ಉತ್ತಮ ಶಕ್ತಿ ಲಭಿಸುತ್ತದೆ. ಬದುಕಿನಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ.
ಓಂ ಶಬ್ಧವು ಸೃಷ್ಟಿಯ ಆರಂಭದಲ್ಲಿ ಪ್ರತಿಧ್ವನಿಸಿತು. ಅದರ ಪ್ರತಿಧ್ವನಿ ಬ್ರಹ್ಮಾಂಡದಾದ್ಯಂತ ಹರಡಿಕೊಂಡಿತು. ಓಂ ಪದದಿಂದ ಶಿವ, ವಿಷ್ಣು ಮತ್ತು ಬ್ರಹ್ಮ ಕಾಣಿಸಿಕೊಂಡರು ಎಂಬುದು ಪುರಾಣಗಳಲ್ಲಿ ಕಂಡುಬರುತ್ತದೆ. ‘ಓಂ’ ಎಲ್ಲಾ ಮಂತ್ರಗಳ ಬೀಜ ಮಂತ್ರ, ಶಬ್ಧಗಳ ಹಾಗೂ ಪದಗಳ ತಾಯಿ ಎಂದು ಹೇಳಲಾಗುತ್ತದೆ. ಓಂ ಮಂತ್ರದ ನಿಯಮಿತವಾದ ಪಠಣದಿಂದ ದೇಹದಲ್ಲಿನ ಆತ್ಮವು ಜಾಗೃತವಾಗುತ್ತದೆ.

ಓಂ ಜಪಿಸದೇ ಯಾವುದೇ ಪೂಜೆ ಕೂಡ ಸಂಪೂರ್ಣವಾಗುವುದಿಲ್ಲ. ನಿಯಮ ಪ್ರಕಾರ ಓಂ ಪಠಣ ಮಾಡುವುದರಿಂದ ವಿವಿಧ ರೀತಿಯ ಸಮಸ್ಯೆಗಳು ಹಾಗೂ ರೋಗಗಳು ಬರದಂತೆ ತಡೆಯುತ್ತದೆ. ರಕ್ತದೊತ್ತಡ, ಹೃದಯದ ತೊಂದರೆಗಳಂತಹ ದೇಹದ ವಿವಿಧ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಮಕ್ಕಳಿಗೆ ಓಂಕಾರ ಜಪದ ಅಭ್ಯಾಸ ಮಾಡಿಸಿದರೆ ವಿದ್ಯಾಭಾಸದಲ್ಲಿ ಏಕಾಗ್ರತೆ ಮೂಡುವುದರೊಂದಿಗೆ ನೆನಪಿನ ಶಕ್ತಿ ವೃದ್ಧಿಸುತ್ತದೆ. ಧ್ಯಾನ, ಯೋಗದ ಮಹತ್ವದ ಭಾಗವಾಗಿ ಓಂ ಮಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಈ ಮಂತ್ರವನ್ನು ಪಠಿಸುವವರು ಶಾಂತ ಸ್ವಭಾವದವರಾಗಿರುತ್ತಾರೆ. ಓಂ ಏಕಾಗ್ರತೆ ವೃದ್ಧಿಸುತ್ತದೆ.
ಓಂ ಮಂತ್ರದ ಆರೋಗ್ಯದ ಪ್ರಯೋಜನಗಳೇನು?
- ಒತ್ತಡ ದೂರ: ಓಂ ಉಚ್ಛಾರ ಮಾಡುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಒತ್ತಡದಿಂದ ಉತ್ಪತ್ತಿಯಾಗುವ ಹಾರ್ಮೋನ್ಗಳನ್ನು ನಿಯಂತ್ರಿಸುತ್ತದೆ. ಓಂ ಜಪಿಸುವುದರಿಂದ ಒತ್ತಡ ದೂರವಾಗುತ್ತದೆ.
- ಭಯ ಮಾಯ: ನಿಮಗೆ ಬೇಗನೇ ಕೋಪಗೊಳ್ಳುವ ಸ್ವಭಾವದರಾಗಿದ್ದರೆ, ತಾಳ್ಮೆ ಇಲ್ಲದಿದ್ದರೆ ಓಂ ಪಠಿಸುವುದು ಉತ್ತಮವಾದ ಮಾರ್ಗವಾಗಿದೆ. ಮನಸ್ಸಿನಲ್ಲಿ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ದೀರ್ಘವಾಗಿ ಉಸಿರಾಟ ಮಾಡುವ ಮೂಲಕ ಐದು ಬಾರಿ ಓಂ ಉಚ್ಛರಿಸಿದರೆ ಸಾಕು ಮನಸ್ಸಿನಲ್ಲಿರುವ ಭಯ ದೂರವಾಗುತ್ತದೆ.
- ಯೌವನದ ಶಕ್ತಿ: ಓಂ ಉಚ್ಛಾರಣೆ ಮಾಡುವುದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ. ಇದರಿಂದ ಮತ್ತೆ ಯೌವನದ ಶಕ್ತಿ ದೇಹದಲ್ಲಿ ರವಾನೆಯಾಗುತ್ತದೆ.
- ಸುಸ್ತಿಗೆ ಪರಿಹಾರ: ಆಯಾಸ ತಪ್ಪಿಸಲು ಓಂ ಮಂತ್ರವು ಉತ್ತಮವಾಗಿದೆ. ಆಯಾಸವನ್ನು ದೂರ ಮಾಡಲು ಸುಲಭ ಉಪಾಯ ಓಂ ಉಚ್ಛಾರ ಮಾಡುವುದು.
- ಜೀರ್ಣಕ್ರಿಯೆ ಸುಧಾರಣೆ: ಓಂ ಉಚ್ಛಾರಣೆ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ. ಇದರಿಂದಾಗಿ ಜೀರ್ಣ ಶಕ್ತಿಯು ವೇಗಗೊಳ್ಳುತ್ತದೆ.
- ನಿದ್ರಾಹೀನತೆ ಹೋಗಲಾಡಿಸುತ್ತೆ: ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬಾರದಿದ್ದರೆ, ಓಂ ಎಂದು ಪಠಣ ಮಾಡಬೇಕಾಗುತ್ತದೆ. ಇದರ ಪರಿಣಾಮ ಮನಸ್ಸು ಶಾಂತವಾಗಿ ಉತ್ತಮ ನಿದ್ರೆ ಬರುತ್ತದೆ.
- ರಕ್ತ ಸಂಚಾರಕ್ಕೆ ಉತ್ತಮ: ಓಂ ಪಠಿಸುವುದರಿಂದ ಹೃದಯಕ್ಕೆ ರಕ್ತದ ಹರಿವನ್ನು ಸಮತೋಲನ ಮಾಡಲು ಸಾಧ್ಯವಾಗುತ್ತದೆ. ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ದೇಹದಲ್ಲಿರುವ ರಕ್ತ ಸಂಚಾರ ಸುಗಮಗೊಳ್ಳುತ್ತದೆ.
- ಶ್ವಾಸಕೋಶದ ಆರೋಗ್ಯ: ಓಂ ಜಪಿಸುವುದರಿಂದ ಶ್ವಾಸಕೋಶದ ಸಮಸ್ಯೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಪ್ರಾಣಯಾಮದೊಂದಿಗೆ ಓಂ ಪಠಣ ಮಾಡಿದರೆ ಶ್ವಾಸಕೋಶಗಳು ಬಲಗೊಳ್ಳುತ್ತವೆ.
- ಥೈರಾಯ್ಡ್ ಸಮಸ್ಯೆ: ಓಂ ಪಠಿಸಿದರೆ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಥೈರಾಯ್ಡ್ ಸಮಸ್ಯೆ ಬಾರದಂತೆ ತಡೆಯುತ್ತದೆ.
- ಬೆನ್ನೆಲುಬು ಸದೃಢ: ಓಂ ಮಂತ್ರ ಜಪಿಸಿದರೆ ಉಂಟಾಗುವ ಕಂಪನದಿಂದ ಬೆನ್ನೆಲುಬು ಸದೃಢವಾಗುತ್ತದೆ. ವಯಸ್ಸಾದ ನಂತರವೂ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.
ಓಂ ಪಠಿಸುವುದು ಹೇಗೆ?: ಬೆಳಗ್ಗೆ ಬೇಗ ಎದ್ದು ಓಂ ಮಂತ್ರವನ್ನು ಪಠಿಸಬಹುದು. ಪದ್ಮಾಸನ, ಅರ್ಧಪದ್ಮಾಸನ, ಸುಖಾಸನ, ವಜ್ರಾಸನಗಳಲ್ಲಿ ಕುಳಿತುಕೊಂಡು ಓಂ ಅನ್ನು ಜಪಿಸಿದೆ. ನಿಮ್ಮ ಸಮಯಕ್ಕೆ ತಕ್ಕಂತೆ ಇದನ್ನು 5, 7, 10, 21 ಬಾರಿ ಓಂ ಮಂತ್ರವನ್ನು ಉಚ್ಚರಿಸಬಹುದು. ಜೋರಾಗಿ ಅಥವಾ ನಿಧಾನವಾಗಿಯೂ ಉಚ್ಚರಿಸಬಹುದು. ಜಪಮಾಲೆಯೊಂದಿಗೂ ಓಂ ಅನ್ನು ಜಪಿಸಬಹುದು. ಈ ವೇಳೆಯಲ್ಲಿ ಇಡೀ ದೇಹ ಅಂದ್ರೆ, ಕಾಲು ಬೆರಳಿನಿಂದ ಹಿಡಿದು ಮೆದುಳಿನಿಂದ ಪಾದದವರೆಗೂ ಕಂಪಿಸುತ್ತದೆ.

ದೇಹದ ಜೊತೆಗೆ ನಿಮ್ಮೆ ಆತ್ಮವೂ ಜಾಗೃತಗೊಳ್ಳುವುದರಿಂದ ದೇಹದ ನರ ನಾಡಿಗಳು ಚೈತನ್ಯಯುತವಾಗಿ ಕಾರ್ಯನಿರ್ವಹಿಸುತ್ತವೆ. ಇದೇ ನಿಯಮದ ಪ್ರಕಾರವಾಗಿ ಪ್ರತಿನಿತ್ಯ ಓಂಕಾರ ಮಂತ್ರವನ್ನು 100 ಬಾರಿ ಪಠಿಸುತ್ತಾ ಬಂದರೆ ಮಾನಸಿಕ, ದೈಹಿಕ ರೋಗಗಳಾದ ತಲೆನೋವು, ಸುಸ್ತು, ಹೃದಯ ಸಂಬಂಧಿ ಕಾಯಿಲೆಗಳು, ಬಿಪಿ ಬರದೇ ಇರುವಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು.
Source : ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1