12 ವರ್ಷಗಳಿಂದ ದಿನಕ್ಕೆ 30 ನಿಮಿಷ ಮಾತ್ರ ನಿದ್ದೆ! ಈತನ ಸೀಕ್ರೆಟ್​​ ಏನು ಗೊತ್ತಾ?

ಪಶ್ಚಿಮ ಜಪಾನ್‌ನ ಹ್ಯೊಗೊ ಪ್ರಿಫೆಕ್ಚರ್‌ನ ಕಂಪನಿಯ ಸಂಸ್ಥಾಪಕ ಡೈಸುಕೆ ಹೋರಿ ಅವರಿಗೆ 40 ವರ್ಷ. ಅವರು ತಮ್ಮ ದೇಹ ಮತ್ತು ಮನಸ್ಸನ್ನು ಸಾಮಾನ್ಯ ಮನುಷ್ಯನಿಗಿಂತ ಎರಡು ಪಟ್ಟು ಹೆಚ್ಚು ಬದುಕಲು ತರಬೇತಿ ನೀಡಿದರು.

ಅಭ್ಯಾಸ ಮಾಡುವ ಮೂಲಕ ಅವರು ದಿನಕ್ಕೆ 30-45 ನಿಮಿಷಗಳವರೆಗೆ ನಿದ್ರೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಕೆಲಸದ ಮೇಲೆ ಎಷ್ಟು ನಿದ್ದೆ ಮಾಡಬೇಕೆನ್ನುವುದು ಮುಖ್ಯವಲ್ಲ, ನಿದ್ರೆಯ ಗುಣಮಟ್ಟ ಮುಖ್ಯ . 2016 ರಲ್ಲಿ ಹೋರಿ ಜಪಾನ್ ಶಾರ್ಟ್ ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನ್ ​​ಅನ್ನು ಸ್ಥಾಪಿಸಿದರು.

ಇವರಿಂದ ತರಬೇತಿ ಪಡೆದವರೂ ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಯುವತಿಯೊಬ್ಬರು ತರಬೇತಿಯ ನಂತರ 8 ಗಂಟೆಯಿಂದ 90 ನಿಮಿಷಕ್ಕೆ ನಿದ್ರೆಯನ್ನು ಕಡಿಮೆ ಮಾಡಿಕೊಂಡರು. ನಾಲ್ಕು ವರ್ಷಗಳಿಂದ ಅದನ್ನೇ ಅನುಸರಿಸುತ್ತಿದ್ದು, ತ್ವಚೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಸಮರ್ಥಳಾಗಿದ್ದೇನೆ ಎನ್ನುತ್ತಾರೆ.

Source : https://www.vijayavani.net/japanese-man-has-slept-for-only-30-mins-a-day-for-12-years

Leave a Reply

Your email address will not be published. Required fields are marked *