ವಿಟಮಿನ್ B12 ಕೊರತೆಯಿಂದ ದೇಹ ಟೊಳ್ಳಾಗುತ್ತದೆ, ನರಗಳು ನಿರ್ಜೀವವಾಗುತ್ತದೆ; ಇದರ ಲಕ್ಷಣಗಳು ಗೊತ್ತಾ?

  • ಹಸಿವು ಕಡಿಮೆಯಾಗುವುದು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣವಾಗಿದೆ
  • ನಿದ್ರಾಹೀನತೆ & ಖಿನ್ನತೆಯು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣವಾಗಿದೆ
  • ವಿಟಮಿನ್ B12 ಕೊರತೆಯು ಎಲ್ಲಾ ಸಮಯದಲ್ಲೂ ತಲೆನೋವು ಉಂಟುಮಾಡಬಹುದು

Vitamin B12 deficiency symptoms: ದೇಹವು ವಿಟಮಿನ್ B12ನಲ್ಲಿ ತೀವ್ರವಾಗಿ ಕೊರತೆಯಿರುವಾಗ, ದೇಹವು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಹೊಂದಿರುವುದಿಲ್ಲ. ವಾಸ್ತವವಾಗಿ ಕೆಂಪು ರಕ್ತ ಕಣಗಳನ್ನು ತಯಾರಿಸಲು ದೇಹಕ್ಕೆ ಈ ವಿಟಮಿನ್ ಅಗತ್ಯವಿದೆ. ಇದು ನಿಮ್ಮ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸುತ್ತದೆ. ಕೆಂಪು ರಕ್ತ ಕಣಗಳು ಇಲ್ಲದೆ, ನಿಮ್ಮ ಅಂಗಾಂಶಗಳು ಮತ್ತು ಅಂಗಗಳು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ. ಸಾಕಷ್ಟು ಆಮ್ಲಜನಕವಿಲ್ಲದೆ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಕಾರಣದಿಂದ ನಮ್ಮ ಮೂಳೆ ಮಜ್ಜೆಯು ಕಡಿಮೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ ಮತ್ತು ಈ ಕೊರತೆಯ ಲಕ್ಷಣಗಳು ದೇಹದಲ್ಲಿ ಗಂಭೀರವಾಗಿ ಕಂಡುಬರುತ್ತವೆ.

ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣಗಳು

ಹಸಿವಿನ ಕೊರತೆ: ಹಸಿವು ಕಡಿಮೆಯಾಗುವುದು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣವಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ಜೀರ್ಣಕ್ರಿಯೆಯ ಪ್ರಕ್ರಿಯೆಯೊಂದಿಗೆ ಹಲವಾರು ಹಾರ್ಮೋನುಗಳ ಅಡಚಣೆಗಳು ಉಂಟಾಗುತ್ತವೆ. ಇದರ ಲಕ್ಷಣಗಳು ದೇಹದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದಲ್ಲದೆ ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಲಕಾಲಕ್ಕೆ ಅನುಭವಿಸಬಹುದು. 

ನಿದ್ರಾಹೀನತೆ ಮತ್ತು ಖಿನ್ನತೆ: ನಿದ್ರಾಹೀನತೆ ಮತ್ತು ಖಿನ್ನತೆಯು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣಗಳಲ್ಲಿ ಒಂದಾಗಿದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ರಕ್ತವಾಗಲೀ ಶಕ್ತಿಯಾಗಲೀ ಇರುವುದಿಲ್ಲ, ಇದರಿಂದಾಗಿ ಯಾರು ಸಹ ಮಲಗಲು ಸಾಧ್ಯವಿಲ್ಲ. ಇದರಿಂದ ಕಿರಿಕಿರಿಯನ್ನು ಅನುಭವಿಸುತ್ತಾರೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಸಹ ಅನುಭವಿಸಬಹುದು. 

ತಲೆನೋವು: ವಿಟಮಿನ್ B12 ಕೊರತೆಯು ಎಲ್ಲಾ ಸಮಯದಲ್ಲೂ ತಲೆನೋವು ಉಂಟುಮಾಡಬಹುದು. ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆ ಉಂಟಾದಾಗ, ಅದು ಆಯಾಸವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಯಾವಾಗಲೂ ತಲೆನೋವು ಅನುಭವಿಸಬಹುದು. ಹೀಗಾಗಿ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ ಮತ್ತು ವೈದ್ಯರ ಸಲಹೆ ಪಡೆದುಕೊಳ್ಳಿರಿ. ನೀವು ಈ ವಿಟಮಿನ್ ಪರೀಕ್ಷೆ ಸಹ ಮಾಡಿಕೊಳ್ಳಬಹುದು. ಅದು ನಿಮ್ಮ ದೇಹದಲ್ಲಿ ಏನು ಕೊರತೆಯಿದೆ ಎಂಬುದನ್ನು ಸುಲಭವಾಗಿ ತಿಳಿಸುತ್ತದೆ. 

Source : https://zeenews.india.com/kannada/health/vitamin-b12-deficiency-makes-the-body-hollow-nerves-become-lifeless-know-its-symptoms-258087

Leave a Reply

Your email address will not be published. Required fields are marked *