ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

Amazing Benefits Of Tulsi: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಬಹುಮುಖ್ಯ ಪ್ರಾಮುಖ್ಯತೆ ನೀಡಲಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತುಳಸಿಯನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಪೂಜೆ-ಪುನಸ್ಕಾರಗಳಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತದೆ. ಪುರಾಣಗಳ ಪ್ರಕಾರ ಅಮೃತಕ್ಕಾಗಿ ದೇವತೆಗಳು ಮತ್ತು ಅಸುರರು ಸೇರಿ ಸಮುದ್ರ ಮಂಥನ ಮಾಡಿದಾಗ ಉದ್ಭವವಾದ ಸಸ್ಯವೇ ತುಳಸಿ ಎಂದು ಹೇಳಲಾಗಿದೆ. ಇಷ್ಟೆಲ್ಲಾ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಆಯುರ್ವೇದ ಔಷಧಗಳಲ್ಲಿ ಹಿಂದಿನ ಕಾಲದಿಂದಲೂ ‌ತುಳಿಸಿಯನ್ನು ಬಳಸಿಕೊಂಡು ಬರಲಾಗುತ್ತಿದೆ. ತುಳಸಿ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ತುಳಸಿ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತುಳಸಿ ಸೇವನೆಯಿಂದ ನೀವು ಹಲವಾರು ಖಾಯಿಲೆಗಳಿಂದ ದೂರವಿರಬಹುದು. ಮಕ್ಕಳಲ್ಲಿ ಕಾಣಿಸುವ ಶೀತ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ಸಮಸ್ಯೆಗಳಿಗೆ ತುಳಸಿ ರಾಮಬಾಣವಾಗಿದೆ. ಜೇನುತುಪ್ಪದೊಂದಿಗೆ ತುಳಸಿ ಸೇವಿಸಿದರೆ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಒಂದು ಚಮಚ ತುಳಸಿ ಎಲೆಯ ಪುಡಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿದ್ರೆ ಅದ್ಭುತ ಚಮತ್ಕಾರವನ್ನು ನೀವೇ ಕಾರಣಬಹುದು.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಎಳೆ ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಬೇಕು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಮತ್ತು ಒತ್ತಡದಂತಹ ಕಾಯಿಲೆಗಳಿಂದ ನಿಮಗೆ ಮುಕ್ತಿ ನೀಡುತ್ತದೆ. ತುಳಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ. 

ತುಳಸಿ ಉತ್ತಮ ಆ್ಯಂಟಿಆಕ್ಸಿಡೆಂಟ್‌ ಆಗಿದ್ದು, ಆ್ಯಂಟಿ ಬ್ಯಾಕ್ಟೀರಿಯಾ ಗುಣಲಕ್ಷಣ ಹೊಂದಿದೆ. ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಇದು ನಿಮಗೆ ಸಹಕಾರಿಯಾಗಿದೆ. ತುಳಸಿಯನ್ನು ಟೀ ಜೊತೆಗೆ ಸೇವಿಸಿಬಹುದು. ಹರ್ಬಲ್‌ ಟೀ ಅಥವಾ ಹಾಲಿನಿಂದ ತಯಾರಿಸುವ ಚಹಾದಲ್ಲಿ ತುಳಸಿ ಎಲೆಗಳನ್ನು ಸೇರಿಸಬಹುದು. ಒಂದು ಕಪ್‌ ನೀರಿಗೆ ಚಹಾ ಎಲೆಗಳನ್ನು ಹಾಕಿ, ನಂತರ ಅದಕ್ಕೆ 6-7 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ಸೋಸಿ ಸೇವಿಸಬೇಕು.  

ತುಳಸಿ ರಸವು ಗಂಟಲು ನೋವಿನಿಂದ ಹಿಡಿದು ಹೊಟ್ಟೆ ನೋವಿನವರೆಗಿನ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. 10-15 ತುಳಸಿ ಎಲೆಗಳನ್ನು ತೆಗೆದುಕೊಂಡು ಜಜ್ಜಿ ಅದರ ರಸವನ್ನು ತೆಗೆಯಿರಿ. ಆ ರಸವನ್ನು ಒಂದು ಕಪ್‌ ನೀರಿಗೆ ಬೆರೆಸಿ ಸೇವಿಸಿರಿ. ಇದು ಹೊಟ್ಟೆಯ ತೊಂದರೆಗಳನ್ನು ದೂರಮಾಡುತ್ತದೆ ಮತ್ತು ದೇಹದ ತೂಕ ಇಳಿಸಲು ಸಹಕಾರಿಯಾಗಿದೆ.

ತುಳಸಿ ಎಲೆಯನ್ನು ಒಣಗಿಸಿ ನಂತರ ಪುಡಿ ಮಾಡಬೇಕು. ಅದನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ. ತುಳಸಿ ಕಷಾಯವನ್ನು ಈ ರೀತಿ ತಯಾರಿಸಬೇಕು. ಇದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ.

Source : https://zeenews.india.com/kannada/photo-gallery/tulsi-health-benefits-do-you-know-what-happens-if-you-eat-tulsi-on-an-empty-stomach-every-day-197322/amazing-benefits-of-tulsi-197323

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *