ಪ್ರತಿದಿನ ಬೆಳಗ್ಗೆ ಟೀ-ಕಾಫಿ ಜೊತೆ ಬ್ರೆಡ್ ತಿಂದರೆ ಏನಾಗುತ್ತೆ ಗೊತ್ತಾ?

Health Tips In Kannada: ನಮ್ಮಲ್ಲಿ ಬಹುತೇಕರು ಪ್ರತಿದಿನ ಬೆಳಗ್ಗೆ ಟೀ-ಕಾಫಿ ಅಥವಾ ಹಾಲಿನೊಂದಿಗೆ ಬ್ರೆಡ್‌ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಈ ಅಭ್ಯಾಸ ನಮ್ಮ ಆರೋಗ್ಯಕ್ಕೆ ಅಪಾಯಕಾರಿ ಅಂತಾ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರತಿದಿನ ಬೆಳಗ್ಗೆ ಟೀ-ಕಾಫಿ ಜೊತೆಗೆ ಬ್ರೆಡ್‌ ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ. 

ಪ್ರತಿದಿನ ಬೆಳಿಗ್ಗೆ ಟೀ-ಕಾಫಿಯೊಂದಿಗೆ ಬ್ರೆಡ್ ತಿನ್ನುವುದರಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬಹುದು. ಇದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪ್ರತಿನಿತ್ಯ ಚಹಾದೊಂದಿಗೆ ಬ್ರೆಡ್ ತಿನ್ನುವುದು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಅಂತಾ ಆರೋಗ್ಯ ತಜ್ಞರು ಹೇಳಿದ್ದಾರೆ.

ಬ್ರೆಡ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗುತ್ತದೆ. ಇದು ಇನ್ಸುಲಿನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಇದನ್ನು ತಿನ್ನಬಾರದು. ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದ್ದು, ಎಲ್ಲಾ ವಯಸ್ಸಿನ ಜನರು ಬ್ರೆಡ್ ತಿನ್ನುವುದನ್ನು ತಪ್ಪಿಸಬೇಕು.

ಟೀ-ಕಾಫಿ ಮತ್ತು ಬ್ರೆಡ್ ಸೇವನೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ನಿರಂತರವಾಗಿ ಚಹಾ ಮತ್ತು ಬ್ರೆಡ್ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಹೃದಯ ವೈಫಲ್ಯದ ಸಾಧ್ಯತೆ ಹೆಚ್ಚಾಗುತ್ತವೆ.

ಚಹಾದೊಂದಿಗೆ ಬ್ರೆಡ್ ಸೇವಿಸೋದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ತಿನ್ನುವುದರಿಂದ ಗಂಭೀರ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಚಹಾದೊಂದಿಗೆ ಬ್ರೆಡ್ ತಿನ್ನುವುದು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಚಹಾದೊಂದಿಗೆ ಬ್ರೆಡ್ ತಿನ್ನುವುದನ್ನು ನಿಲ್ಲಿಸಬೇಕು.

ಟೀ-ಕಾಫಿ ಮತ್ತು ಬ್ರೆಡ್ ಒಟ್ಟಿಗೆ ತಿನ್ನುವುದು ಅಧಿಕ ಬಿಪಿಯ ಸಮಸ್ಯೆ ಹೆಚ್ಚಿಸುತ್ತದೆ. ಇವುಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಿಸುತ್ತದೆ. ಹೀಗಾಗಿ ಬಿಪಿ ರೋಗಿಗಳು ಅದನ್ನು ತಿನ್ನುವುದನ್ನು ತಪ್ಪಿಸಬೇಕು. ಇಲ್ಲವಾದರೆ ಹೃದಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಬೆಳಗ್ಗೆ ಬ್ರೆಡ್ ಬದಲಿಗೆ ಆರೋಗ್ಯಕರ ಉಪಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

Source : https://zeenews.india.com/kannada/photo-gallery/health-tips-do-you-know-what-happens-if-you-eat-bread-with-tea-coffee-every-morning-214644/bread-with-tea-health-tips-214645

Leave a Reply

Your email address will not be published. Required fields are marked *