IPL 2023: RCB, CSK ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿದ 3 ಆಟಗಾರರು ಯಾರು ಗೊತ್ತಾ?

IPL 2023: ಐಪಿಎಲ್​ ಸೀಸನ್​ ಸೀಸನ್​ 16 ರಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.ಇದರೊಂದಿಗೆ ಐಪಿಎಲ್​ನಲ್ಲಿ 5 ಬಾರಿ ಚಾಂಪಿಯನ್ ಆಗಿ ದಾಖಲೆ ಬರೆದಿದ್ದ ಮುಂಬೈ ಇಂಡಿಯನ್ಸ್ ರೆಕಾರ್ಡ್ ಅನ್ನು ಸಿಎಸ್​ಕೆ ಸರಿಗಟ್ಟಿದೆ. ಈ ಮೂಲಕ ಬಲಿಷ್ಠ ಎರಡು ತಂಡಗಳು ಟ್ರೋಫಿ ಗೆಲ್ಲುವ ವಿಷಯದಲ್ಲಿ ಸಮಬಲ ಸಾಧಿಸಿದೆ.ಇತ್ತ ಎರಡು ತಂಡಗಳು 5 ಬಾರಿ ಚಾಂಪಿಯನ್ಸ್​ ಆಗಿ ದಾಖಲೆ ಬರೆದಿದ್ದರೆ, ಮತ್ತೊಂದೆಡೆ ಆರ್​ಸಿಬಿ ಈ ಬಾರಿ ಕೂಡ ನಿರಾಸೆ ಮೂಡಿಸಿದೆ. ವಿಶೇಷ ಎಂದರೆ ಕಳೆದ 15 ಸೀಸನ್​ಗಳಲ್ಲಿ ಈ ಮೂರೂ ತಂಡಗಳ ಪರ ಕೆಲವೇ ಕೆಲವು ಆಟಗಾರರು ಕಣಕ್ಕಿಳಿದಿದ್ದಾರೆ. ಅಂದರೆ ಆರ್​ಸಿಬಿ, ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿದ ಮೂರು ಆಟಗಾರರ ಪರಿಚಯ ಇಲ್ಲಿದೆ.1- ಟಿಮ್ ಸೌಥಿ: ನ್ಯೂಜಿಲೆಂಡ್ ಆಟಗಾರ ಟಿಮ್ ಸೌಥಿ 2011 ರಲ್ಲಿ ಸಿಎಸ್​ಕೆ ಪರ ಆಡಿದ್ದರು. ಇದಾದ ಬಳಿಕ 2016 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಇನ್ನು 2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್​ಸಿಬಿ ಪರ ಕೂಡ ಆಡಿದ್ದರು. ಪ್ರಸ್ತುತ ಅವರು ಕೆಕೆಆರ್ ತಂಡದ ಭಾಗವಾಗಿದ್ದಾರೆ.2- ಪಾರ್ಥೀವ್ ಪಟೇಲ್: 2010 ರಲ್ಲಿ ಸಿಎಸ್​ಕೆ ತಂಡದಲ್ಲಿ ಕಾಣಿಸಿಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಪಾರ್ಥೀವ್ ಪಟೇಲ್, 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಇನ್ನು 2018 ರಲ್ಲಿ ಆರ್​ಸಿಬಿ ಪರ ಆಡುವ ಮೂಲಕ ಮೂರು ಪ್ರಮುಖ ಫ್ರಾಂಚೈಸಿಗಳ ಪರ ಆಡಿದ ಪಟ್ಟಿಗೆ ಸೇರ್ಪಡೆಯಾಗಿದ್ದರು.3- ರಾಬಿನ್ ಉತ್ತಪ್ಪ: 2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ರಾಬಿನ್ ಉತ್ತಪ್ಪ, 2010 ರಲ್ಲಿ ಆರ್​ಸಿಬಿ ಪರ ಬ್ಯಾಟ್ ಬೀಸಿದ್ದರು. ಇನ್ನು 2022 ರಲ್ಲಿ ಸಿಎಸ್​ಕೆ ಕಣಕ್ಕಿಳಿದು ಭರ್ಜರಿ ಪ್ರದರ್ಶನದೊಂದಿಗೆ ಐಪಿಎಲ್​ಗೆ ವಿದಾಯ ಹೇಳಿದ್ದರು.

source https://tv9kannada.com/photo-gallery/cricket-photos/3-players-who-played-for-rcb-csk-and-mumbai-indians-kannada-news-zp-575670.html

Leave a Reply

Your email address will not be published. Required fields are marked *