ಭಾರತದ ಬ್ಯಾಟಿಂಗ್ ಕಮ್ರಾಂಕವನ್ನೇ ನಡುಗಿಸಿ 5 ವಿಕೆಟ್ ಕಬಳಿಸಿದ 20 ವರ್ಷದ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಯಾರು ಗೊತ್ತಾ?

Who is Dunith Wellalage: ಲಂಕಾದ 20 ವರ್ಷದ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಾಗೆ 14 ಜೂನ್ 2022 ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ, ಪಲ್ಲೆಕೆಲೆಯಲ್ಲಿ ODI ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದರು.

IND vs SL, Dunith Wellalage: ಶ್ರೀಲಂಕಾದ 20 ವರ್ಷದ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಮಂಗಳವಾರ ಟೀಂ ಇಂಡಿಯಾ ವಿರುದ್ಧದ ಏಷ್ಯಾ ಕಪ್ 2023 ರ ಸೂಪರ್-4 ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಮೈದಾನದಲ್ಲಿ ಅಬ್ಬರಿಸಿದ್ದರು.

ಎಡಗೈ ಸ್ಪಿನ್ನರ್  ದುನಿತ್ ವೆಲ್ಲಲಾಗೆ ಆರ್ ಪ್ರೇಮದಾಸ ಸ್ಟೇಡಿಯಂನ ಪಿಚ್‌’ನಲ್ಲಿ ಶುಭ್ಮನ್ ಗಿಲ್ (19), ವಿರಾಟ್ ಕೊಹ್ಲಿ (3), ರೋಹಿತ್ ಶರ್ಮಾ (53), ಕೆಎಲ್ ರಾಹುಲ್ (39) ಮತ್ತು ಹಾರ್ದಿಕ್ ಪಾಂಡ್ಯ (5) ಅವರನ್ನು ಔಟ್ ಮಾಡಿದ್ದರು.

ಲಂಕಾದ 20 ವರ್ಷದ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಾಗೆ 14 ಜೂನ್ 2022 ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ, ಪಲ್ಲೆಕೆಲೆಯಲ್ಲಿ ODI ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದರು. ದುನಿತ್ ವೆಲಾಲಗೆ ಇದುವರೆಗೆ ಶ್ರೀಲಂಕಾ ಪರ 13 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ.

9 ಜನವರಿ 2003 ರಂದು ಕೊಲಂಬೊದಲ್ಲಿ ಜನಿಸಿದ ಅವರು, ಶ್ರೀಲಂಕಾ ಪರ ದೇಶೀಯ ಕ್ರಿಕೆಟ್ ನಲ್ಲಿ ಒಟ್ಟು 126 ವಿಕೆಟ್ ಪಡೆದಿದ್ದಾರೆ. 2022 ರ ಅಂಡರ್-19 ವಿಶ್ವಕಪ್‌’ನಲ್ಲಿ, ದುನಿತ್ ವೆಲ್ಲಲಾಗೆ ಪಂದ್ಯಾವಳಿಯಲ್ಲಿ ಗರಿಷ್ಠ 17 ವಿಕೆಟ್‌’ಗಳನ್ನು ಪಡೆದಿದ್ದರು.

ದುನಿತ್ ವೆಲ್ಲಲಾಗೆ ಎಡಗೈ ಲೆಗ್ ಸ್ಪಿನ್ನರ್ ಆಗಿದ್ದು, ಪ್ರಸ್ತುತ ಅವರ ವಯಸ್ಸು ಕೇವಲ 20 ವರ್ಷ. ತಮ್ಮ ಸಣ್ಣ ವೃತ್ತಿಜೀವನದಲ್ಲಿ ಡೇಂಜರಸ್ ಬೌಲರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಶ್ರೀಲಂಕಾ ಪರ ಇದುವರೆಗೆ 1 ಟೆಸ್ಟ್ ಮತ್ತು 13 ODI ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ದುನಿತ್ ವೆಲ್ಲಲಾಗೆ, ಭಾರತ ವಿರುದ್ಧದ ಈ ಪಂದ್ಯದಲ್ಲಿ 8 ಓವರ್‌’ಗಳಲ್ಲಿ 40 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಇನ್ನು ದುನಿತ್ ವೆಲಾಲಗೆ ಇದುವರೆಗೆ ಶ್ರೀಲಂಕಾ ಪರ 13 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/sports/who-is-dunith-wellalage-20-year-old-spinner-who-shook-indias-batting-line-up-and-took-5-wickets-158084

Leave a Reply

Your email address will not be published. Required fields are marked *