Dragon Fruit : ಬೆಂಗಳೂರಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಡೆಂಘೀ ರೋಗಿಗಳ ರೋಗನಿರೋಧಕ ಶಕ್ತಿ ಹೆಚ್ಚಾಗಲು ವೈದ್ಯರು ಕಿವಿ ಹಣ್ಣಿಗಿಂತ ಡ್ರ್ಯಾಗನ್ ಫ್ರೂಟ್ಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ. ಏಕೆ ಅಂತ ಈ ಲೇಖನದಲ್ಲಿ ತಿಳಿಯೋಣ.
ಕಿವಿ ಹಣ್ಣು ಎಷ್ಟೇ ಒಳ್ಳೆಯದಾದರೂ ಹೊಟ್ಟೆ ಉಬ್ಬರಿಸುವ ಕಾರಣ ಡ್ರ್ಯಾಗನ್ ಫ್ರೂಟ್ ಹೆಚ್ಚು ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಜೊತೆಗೆ ಡ್ರ್ಯಾಗನ್ ಫ್ರೂಟ್ ಗೆ ದಿನೇ ದಿನೇ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಈ ಹಣ್ಣಿನ ಕ್ರೇಜ್ ಜನಸಾಮಾನ್ಯರಲ್ಲೂ ಜಾಸ್ತಿ ಆಗ್ತಿದೆ. ಕೊಂಚ ದುಬಾರಿ ಆದ್ರೂ ಪರವಾಗಿಲ್ಲ ಅಂತ ಈ ಆಕರ್ಷಕ ಹಣ್ಣನ್ನು ಖರೀದಿಸುತ್ತಿದ್ದಾರೆ..
ಡ್ರ್ಯಾಗನ್ ಹಣ್ಣನ್ನು ಅದರ ಬಹು ಗುಣಲಕ್ಷಣಗಳಿಂದ ಸೂಪರ್ ಫುಡ್ ಎಂದೂ ಕರೆಯುತ್ತಾರೆ. ಡ್ರ್ಯಾಗನ್ ಫ್ರೂಟ್ ನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಆದ್ದರಿಂದ, ಇದನ್ನು ತಿನ್ನುವುದರಿಂದ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಡೆಂಗ್ಯೂನಿಂದ ಬಳಲುತ್ತಿರುವ ಜನರ ಚೇತರಿಕೆಯಲ್ಲಿ ಈ ಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ..
ಡ್ರ್ಯಾಗನ್ ಫ್ರೂಟ್ ನಿಂದ ಆರೋಗ್ಯ ತುಂಬಾನೇ ಲಾಭಗಳಿವೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್ ಹಣ್ಣು ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ಆದ್ದರಿಂದ ಇದನ್ನು ಬೇಸಿಗೆಯಲ್ಲಿ ತಿನ್ನುವುದು ಉತ್ತಮ.
ಫೈಬರ್, ಆಂಟಿಆಕ್ಸಿಡೆಂಟ್ ಗಳು, ಪ್ರೋಟೀನ್ ಗಳು, ಕಾರ್ಬೋಹೈಡ್ರೇಟ್ ಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಇತ್ಯಾದಿಗಳಲ್ಲಿ ಸಮೃದ್ಧವಾಗಿರುವ ಡ್ರ್ಯಾಗನ್ ಹಣ್ಣುಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ. ಡ್ರ್ಯಾಗನ್ ಫ್ರೂಟ್ ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ತಪ್ಪಿಸಲು, ನೀವು ಡ್ರ್ಯಾಗನ್ ಹಣ್ಣನ್ನು ತಿನ್ನುವುದು ಉತ್ತಮ..
ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್ ಹಣ್ಣಿನ ಸೇವನೆಯಿಂದ ಹೃದಯವನ್ನು ಆರೋಗ್ಯವಾಗಿಡಬಹುದು. ಇದು ಹೃದಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಲ್ಲಿರುವ ಸಣ್ಣ ಕಪ್ಪು ಬಣ್ಣದ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಇದು ಹೃದಯಕ್ಕೆ ಆರೋಗ್ಯಕರ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಅಧಿಕವಾಗಿದ್ದರೆ, ಡ್ರ್ಯಾಗನ್ ಹಣ್ಣನ್ನು ತಿನ್ನುವ ಮೂಲಕ ಅದನ್ನು ನಿರ್ವಹಿಸಬಹುದು.
ಈ ಹಣ್ಣು ಮಧುಮೇಹಿಗಳಿಗೆ ಆರೋಗ್ಯಕರ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ಫೀನಾಲಿಕ್ ಆಸಿಡ್, ನಾರಿನಂಶವು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ತಡೆಯುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಏಕೆಂದರೆ ಇದರಲ್ಲಿ ವಿಟಮಿನ್ ಸಿ ಇದೆ. ಅಲ್ಲದೆ, ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿವೈರಲ್, ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
ಕಡಿಮೆ ಹಿಮೋಗ್ಲೋಬಿನ್ ಇರುವವರಿಗೆ ಈ ಹಣ್ಣು ತುಂಬಾ ಪ್ರಯೋಜನಕಾರಿ. ಈ ಹಣ್ಣಿನಲ್ಲಿ ಬಹಳಷ್ಟು ಕಬ್ಬಿಣಾಂಶವಿದೆ, ಇದು ರಕ್ತಹೀನತೆಯನ್ನು ಗುಣಪಡಿಸುತ್ತದೆ. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಈ ಹಣ್ಣು ಸುಲಭವಾಗಿ ಸಿಗುವುದಿಲ್ಲ, ಆದರೆ ಈ ಹಣ್ಣನ್ನು ಎಲ್ಲಿ ನೋಡಿದರೂ ಅದನ್ನು ಖರೀದಿಸಿ ತಿನ್ನುವುದು ನಿಜಕ್ಕೂ ಒಳ್ಳೆಯದು.
ಕಿವಿ ಫ್ರೂಟ್: ಕಿವಿ ಫ್ರೂಟ್ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ.
ಕಿವಿ ಹಣ್ಣು: ಡೆಂಗ್ಯೂ ರೋಗಿಯೂ ಅತಿ ಅಗತ್ಯವಾಗಿ ಸೇವಿಸಬೇಕಾದ ಹಣ್ಣುಗಳ ಪೈಕಿ ಕಿವಿ ಹಣ್ಣು ಅಗ್ರಸ್ಥಾನದಲ್ಲಿದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್, ಪಾಲಿಫಿನಾಲ್ ಮತ್ತು ಆಂಟಿಆಕ್ಸಿಡೆಂಟ್ಗಳಾದ ಗ್ಯಾಲಿಕ್ ಆಸಿಡ್ ಮತ್ತು ಟ್ರೋಲಾಕ್ಸ್ ಹೊಂದಿರುವ ಕಿವಿ ಹಣ್ಣು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೇ ಡೆಂಗ್ಯೂ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ.
Disclaimer: ಮೇಲಿನ ಲೇಖನ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ, ಯಾವುದೇ ವಿಧಾನವನ್ನು ಅನುಸರಿಸುವ ಮುನ್ನ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಮುಂದುವರೆಯಲು ಸಲಹೆ ನೀಡಲಾಗುವುದು.