ಭಗವಾನ್ ಶ್ರೀರಾಮನ ಮಗ ಲವ ʼಪಾಕಿಸ್ತಾನʼದ ಈ ನಗರದಲ್ಲಿ ನೆಲೆಸಿದ್ದಾನೆ..! ಏಕೆ ಗೊತ್ತಾ..?

Lava temple in lahore : ಪಾಕಿಸ್ತಾನದ ನಗರವೊಂದು ಭಗವಾನ್ ಶ್ರೀರಾಮನ ಮಗ ಲವನಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ. ಅಲ್ಲದೆ, ಇಲ್ಲಿ ಲವ ಮಂದಿರವನ್ನೂ ನಿರ್ಮಿಸಲಾಗಿದೆ. ಇದು ಕಸೂರ್ ಜಿಲ್ಲೆಯಲ್ಲಿದ್ದು ಲವ- ಕುಶರು ಇಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. 

Lava Temple : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ ನಗರದ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಕೆಲವೊಮ್ಮೆ ಆಸಕ್ತಿದಾಯಕ ವಿಷಯಗಳು ಮತ್ತು ಸುಂದರವಾದ ಸ್ಥಳ ಇಲ್ಲಿ ಕಾಣಸಿಗುತ್ತದೆ. 1947 ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಲ್ಲಿ ಈ ನಗರವು ಪಾಕಿಸ್ತಾನಕ್ಕೆ ಸೇರಿತು. ಆದರೆ ಅನೇಕ ಭಾರತೀಯರು ಈ ನಗರದೊಂದಿಗೆ ಇಂದಿಗೂ ನಿಕಟ ಸಂಬಂಧವನ್ನು ಹೊಂದಿದ್ದಾರೆ. 

ಇಂದು ನಾವು ಈ ನಗರದ ಬಗ್ಗೆ ನಿಮಗೆ ಗೊತ್ತಿಲ್ಲದ ಆಶ್ಚರ್ಯಕರ ವಿಚಾರವೊಂದನ್ನು ಹೇಳುತ್ತೇವೆ. ಪಾಕಿಸ್ತಾನದ ಲಾಹೋರ್ ನಗರವು ಭಗವಾನ್ ಶ್ರೀರಾಮನ ಮಗನಾದ ಲವನಿಂದ ಸೃಷ್ಟಿಯಾಯಿತು ಎಂದು ಹೇಳಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ ಭಗವಾನ್ ರಾಮನು ವಾನಪ್ರಸ್ಥಕ್ಕೆ ಹೋಗಲು ನಿರ್ಧರಿಸಿದಾಗ, ಭರತನ ನಿರಾಕರಣೆಯ ಹೊರತಾಗಿಯೂ ತನ್ನ ರಾಜ್ಯವನ್ನು ತನ್ನ ಮಕ್ಕಳಾದ ಲವ್ ಮತ್ತು ಕುಶರಿಗೆ ಹಸ್ತಾಂತರಿಸಿದನೆಂದು ಹೇಳಲಾಗುತ್ತದೆ.

ಭಗವಾನ್ ಶ್ರೀರಾಮನು ದಕ್ಷಿಣ ಕೋಸಲ, ಕುಶಸ್ಥಲಿ (ಕುಶಾವತಿ) ಮತ್ತು ಅಯೋಧ್ಯೆಯನ್ನು ಕುಶನಿಗೆ ಮತ್ತು ಪಂಜಾಬ್ ಅನ್ನು ಲವನಿಗೆ ನೀಡಿದನು. ಲವ್‌ ತನ್ನ ರಾಜಧಾನಿಗೆ ಲವಪುರಿ ಎಂದು ಹೆಸರಿಟ್ಟನು, ಇಂದು ಅದೇ ಲಾಹೋರ್‌ ಎಂದು ಬದಲಾಗಿದೆ. ಆದರೆ, ವಾಲ್ಮೀಕಿಯ ರಾಮಾಯಣದಲ್ಲಿ ಇದರ ಉಲ್ಲೇಖವಿಲ್ಲ. 

ಪಾಕಿಸ್ತಾನದಲ್ಲಿ ಲವ ಮಂದಿರ ಎಂಬ ದೇವಸ್ಥಾನವೂ ಇದೆ. ಈ ದೇವಾಲಯವು ಲಾಹೋರ್ ಕೋಟೆಯೊಳಗೆ ಇದೆ. ಹಿಂದೆ ಈ ಸ್ಥಳ ಪಂಜಾಬ್ ಸಿಖ್ ಸಾಮ್ರಾಜ್ಯವಾಗಿತ್ತು, ಆಗ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಈ ದೇವಾಲಯ ಇಂದು ಖಾಲಿಯಾಗಿದ್ದು, ಇದನ್ನು ನೋಡಿಕೊಳ್ಳುವವರು ಯಾರೂ ಇಲ್ಲ.

ಇನ್ನು ಪಾಕಿಸ್ತಾನದ ಕಸೂರ್‌ಗೆ ಕುಶನ ಹೆಸರನ್ನು ಇಡಲಾಗಿದೆ. ಇದು ಲಾಹೋರ್‌ನಿಂದ ಸುಮಾರು 53 ಕಿಮೀ ದೂರದಲ್ಲಿದೆ. ಇತಿಹಾಸದ ಪ್ರಕಾರ, ಈ ನಗರವು 1525 ರಲ್ಲಿ ಅಸ್ತಿತ್ವಕ್ಕೆ ಬಂದಿತು ಎನ್ನಲಾಗಿದೆ. ಕಸೂರ್ ಸಿಂಧೂ ಕಣಿವೆಯ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ನಗರವಾಗಿದೆ. 

ಲಾಹೋರ್ ನಗರವು ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ವರದಿಯು ಹೇಳುತ್ತದೆ. ಅರಬ್ ಆಕ್ರಮಣದ ಮೊದಲು ಅನೇಕ ಶ್ರೇಷ್ಠ ಹಿಂದೂ ಮತ್ತು ಬೌದ್ಧ ಆಡಳಿತಗಾರರು ಇಲ್ಲಿಗೆ ಬಂದರು. ಟಿಬ್ಬಿ ಬಜಾರ್ ಲಾಹೋರ್‌ನ ಜನನಿಬಿಡ ಪ್ರದೇಶವಾಗಿದೆ ಎಂದು ಇಲ್ಲಿ ಉಲ್ಲೇಖಿಸಬೇಕು. ಇಲ್ಲಿ ಪುರಾತನವಾದ ಶಿವನ ದೇವಾಲಯವೂ ಇದೆ. ಇದನ್ನು ತಿಬ್ಬಿವಾಲ ಶಿವಾಲಯ ಎಂದು ಕರೆಯುತ್ತಾರೆ. 

Source : https://zeenews.india.com/kannada/world/lord-rama-son-lava-temple-in-pakistan-lahore-175398

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *