mango benefits: ಇದು ವಿಟಮಿನ್ ಎ ಮತ್ತು ವಿಟಮಿನ್ ಸಿ ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ
- ಮಾವಿನ ಹಣ್ಣುಗಳು ಅನೇಕ ಪ್ರಯೋಜನ ಹೊಂದಿವೆ
- ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸುವುದು ಏಕೆ?
- ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟರೆ ಏನು ಲಾಭ?

Soaked mango benefits: ಬೇಸಿಗೆ ಕಾಲ ಶುರುವಾದ ತಕ್ಷಣ ನಮ್ಮ ನೆನಪಿಗೆ ಬರುವುದು ಮಾವಿನ ಹಣ್ಣು. ಮಾವಿನ ಹಣ್ಣುಗಳು ಅನೇಕರಿಗೆ ಇಷ್ಟವಾಗುತ್ತವೆ. ಅದು ಸಿಹಿಯಾಗಿರಲಿ, ಹುಳಿಯಾಗಿರಲಿ ಮಾವಿನ ಹಣ್ಣು ತಿನ್ನದೇ ಬೇಸಿಗೆ ಅಪೂರ್ಣ. ಮಾವಿನ ಹಣ್ಣನ್ನು ಮಾತ್ರವಲ್ಲದೆ ಯಾವುದೇ ಹಣ್ಣನ್ನು ತಿನ್ನುವ ಮೊದಲು ಶುದ್ಧ ನೀರಿನಿಂದ ತೊಳೆಯುವುದು ಬಹಳ ಮುಖ್ಯ. ಆದರೆ ಮಾವಿನಹಣ್ಣನ್ನು ಕೆಲ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ತಿನ್ನಬೇಕು.
ಮಾವಿನ ಹಣ್ಣು ಪ್ರಯೋಜನಗಳು:
ಮಾವಿನ ಹಣ್ಣು ವಿವಿಧ ಪ್ರಯೋಜನಗಳಿಂದ ಕೂಡಿದೆ. ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಇಷ್ಟಪಡುವ ಒಂದು ಹಣ್ಣು ಎಂದರೆ ಅದು ಮಾವು. ಇದು ವಿಟಮಿನ್ ಎ ಮತ್ತು ವಿಟಮಿನ್ ಸಿ ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಒದಗಿಸುತ್ತವೆ. ಮಾವು ದೃಷ್ಟಿಯನ್ನು ಸುಧಾರಿಸುವುದು, ತ್ವಚೆಯ ಹೊಳಪನ್ನು ಹೆಚ್ಚಿಸುವುದು ಮುಂತಾದ ವಿವಿಧ ಪ್ರಯೋಜನಗಳಿಂದ ಸಮೃದ್ಧವಾಗಿದೆ.
ಮಾವಿನ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಪೋಷಕಾಂಶಗಳೂ ಇವೆ. ದೇಹದಲ್ಲಿ ದೀರ್ಘಕಾಲದ ಕಾಯಿಲೆಗಳ ಪರಿಣಾಮಗಳನ್ನು ಸರಿಪಡಿಸಲು ಇವು ಸಹಾಯ ಮಾಡುತ್ತವೆ. ಇದರಿಂದ ಶ್ವಾಸಕೋಶ, ಹೃದಯ ಮತ್ತು ಮೂತ್ರಪಿಂಡಗಳ ಕಾರ್ಯವೂ ಉತ್ತಮವಾಗಿರುತ್ತದೆ. ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಕೆ ಇರುವುತ್ತದೆ.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸುವುದು ಏಕೆ?
ಅನೇಕ ಜನರು ನೀರಿನಲ್ಲಿ ನೆನೆಸಿದ ಮಾವಿನ ಹಣ್ಣುಗಳನ್ನು ತಿನ್ನುತ್ತಾರೆ. ಅಂಗಡಿಯಲ್ಲಿ ಮಾರುವ ಮುನ್ನ ಮಾವಿನ ಹಣ್ಣನ್ನು ಸರಿಯಾಗಿ ತೊಳೆಯದ ಕಾರಣ ಕೆಲವರು ಹೀಗೆ ಮಾಡುತ್ತಾರೆ. ಅಷ್ಟೇ ಅಲ್ಲ, ಮೇಲೆ ಹೇಳಿದ ಕೆಲವು ಔಷಧೀಯ ಪ್ರಯೋಜನಗಳು ಮಾವಿನ ಹಣ್ಣನ್ನು ನೆನೆಸಿದ ಮಾತ್ರಕ್ಕೆ ಸಿಗುತ್ತದೆ ಎಂದು ಕೆಲವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ಮಾವಿನ ಹಣ್ಣನ್ನು ತೊಳೆದು ತಿಂದರೂ ಅಥವಾ ನೆನೆಸಿ ತಿಂದರೂ ಅದರ ಲಾಭ ಮಾತ್ರ ಸಿಕ್ಕೇ ಸಿಗುತ್ತದೆ ಎನ್ನುತ್ತಾರೆ.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟರೆ ಏನು ಪ್ರಯೋಜನ?
ಕೆಲವು ಮಾವಿನಹಣ್ಣುಗಳು ತುಂಬಾ ಗಟ್ಟಿಯಾದ ಚರ್ಮವನ್ನು ಹೊಂದಿರುತ್ತವೆ. ಕೆಲವರು ಅದನ್ನು ಮೃದುಗೊಳಿಸಲು ನೀರಿನಲ್ಲಿ ನೆನೆಸುತ್ತಾರೆ. ರಫ್ತು ಮಾಡಿದ ಮಾವಿನಹಣ್ಣುಗಳನ್ನು ಸಂಸ್ಕರಿಸಲು ಮತ್ತು ದೀರ್ಘಕಾಲದವರೆಗೆ ಕೊಳೆಯದಂತೆ ತಡೆಯಲು ಕೆಲವು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಇದರಿಂದ ಉಂಟಾಗುವ ಆರೋಗ್ಯದ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಡಬಹುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
Source : https://zeenews.india.com/kannada/lifestyle/mangoes-should-be-soaked-in-water-before-eating-207351
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1
Views: 0