ಊಟದ ನಂತರ ಸೋಂಪು ಏಕೆ ತಿನ್ನಬೇಕು ಗೊತ್ತಾ?

  • ಹೆಚ್ಚಿನ ಜನರು ಊಟದ ನಂತರ ಸೋಂಪು ತಿನ್ನುತ್ತಾರೆ.
  • ಸೋಂಪು ಉತ್ತಮ ನೈಸರ್ಗಿಕ ಮೌತ್ ಫ್ರೆಶ್ನರ್.
  • ಊಟದ ನಂತರ ಸೋಂಪು ತಿಂದರೆ ಏನಾಗುತ್ತದೆ

Fennel Seeds after Food : ಸೋಂಪು ಉತ್ತಮ ಮೌತ್ ಫ್ರೆಶ್ನರ್. ಅನೇಕ ಜನರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ಮನೆಯಲ್ಲಿ ಅಲ್ಲ.. ಹೋಟೆಲ್ ನಲ್ಲಿ ಊಟ ಮಾಡಿದ ನಂತರ ಖಂಡಿತವಾಗಿ ಸೋಂಪು ತಂದು ನಮ್ಮ ಮುಂದೆ ಇಡುತ್ತಾರೆ. ಊಟದ ನಂತರ ಸೋಂಪು ತಿನ್ನಬೇಕು ಎಂದು ಹಲವರು ಹೇಳುತ್ತಾರೆ. ಚ ಇದರಿಂದ ಆಗುವ ಪ್ರಯೋಜನಗಳು ಏನು..? ಇಲ್ಲಿದೆ ಮಾಹಿತಿ..

ಎಷ್ಟೋ ಜನರಿಗೆ ಊಟದ ನಂತರ ಸೋಂಪು ಏಕೆ ತಿನ್ನುತ್ತಾರೆ ಅಂತ ತಿಳಿದಿಲ್ಲ. ವಾಸ್ತವವಾಗಿ, ಊಟದ ನಂತರ ಸೋಂಪು ಸೇವನೆಯು ನಮ್ಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಬಾಯಿಯ ದುರ್ವಾಸನೆಯನ್ನೂ ಕಡಿಮೆ ಮಾಡುತ್ತದೆ. ಒಂದು ಚಮಚ ಸೋಂಪು ನಮ್ಮ ಆರೋಗ್ಯವನ್ನು ಸುಧಾರಿಸುವ ಅನೇಕ ಗುಣಗಳನ್ನು ಹೊಂದಿದೆ. 

ಸೋಂಪು ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಇದರ ವಾಸನೆಯೂ ಅದ್ಭುತವಾಗಿದೆ. ಸೋಂಪನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಊಟದ ನಂತರ ಸೋಂಪು ಕಾಳುಗಳನ್ನು ಏಕೆ ತಿನ್ನಬೇಕು ಎಂದು ಈಗ ತಿಳಿಯೋಣ. 

ಊಟದ ನಂತರ ಸೋಂಪು ಕಾಳು ತಿಂದರೆ ರಾತ್ರಿ ಉತ್ರಮ ನಿದ್ರೆ ಬರುತ್ತದೆ.. ಹೌದು.. ರಾತ್ರಿ ಸೋಂಪು ತಿಂದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಅಲ್ಲದೆ, ಕೂದಲು ಉದುರುವಿಕೆಯನ್ನು ಹೋಗಲಾಡಿಸಲು ಸೋಂಪು ತುಂಬಾ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ. 

ಸೋಂಪು ಜ್ಞಾಪಕಶಕ್ತಿಯನ್ನು ಬಲವಾಗಿಡಲು ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮಗೆ ಜ್ಞಾಪಕ ಶಕ್ತಿ ಕಡಿಮೆಯಿದ್ದರೆ ಪ್ರತಿದಿನ ಸೋಂಪು ಕಾಳು ತಿನ್ನಿ. ಬೆಳಗ್ಗೆ ಸೋಂಪು ತಿಂದರೆ ರಕ್ತ ಶುದ್ಧಿಯಾಗುತ್ತದೆ. ಅಲ್ಲದೆ ನಿಮ್ಮ ತ್ವಚೆಯು ಆರೋಗ್ಯಕರ ಮತ್ತು ಹೊಳೆಯುತ್ತದೆ. ಅಲ್ಲದೆ, ಬಾಯಿಯ ದುರ್ವಾಸನೆಯನ್ನು ಕಡಿಮೆಯಾಗುತ್ತದೆ..

ಸೋಂಪು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ಇದನ್ನು ತಿಂದರೆ ತೂಕ ಕಡಿಮೆಯಾಗುತ್ತದೆ. ಸೋಂಪು ನಿಮ್ಮ ತೂಕ ಹೆಚ್ಚಾಗದಂತೆ ತಡೆಯುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವವರೂ ಸೋಂಪು ತಿನ್ನಬಹುದು. 

Source : https://zeenews.india.com/kannada/health/why-should-eat-fennel-seeds-after-eating-food-and-fennel-health-benefits-nutrients-225418

Leave a Reply

Your email address will not be published. Required fields are marked *