Health Tips: ನಿಮಗೆ ಗೊತ್ತಿರಲಿ ಈಗಾಗಲೇ ಹೈಬಿಪಿ ಕಾಯಿಲೆ ಇರುವವರು ಅಥವಾ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವವರು ವೈದ್ಯರು ನೀಡಿರುವ ಮಾತ್ರೆ ತೆಗೆದುಕೊಳ್ಳುವಾಗ ಕಾಫಿ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಇದಕ್ಕೆ ಪ್ರಮುಖ ಕಾರಣ ಕಾಫಿಯಲ್ಲಿ ಕಂಡು ಬರುವ ಕೆಫಿನ್ ಅಂಶ, ರಕ್ತದೊತ್ತಡ ಕಾಯಿಲೆಯನ್ನು ಇನ್ನಷ್ಟು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆಯಂತೆ!

ಮನುಷ್ಯನಿಗೂ ಕಾಫಿ-ಟೀಗೂ ಬಿಟ್ಟಿರಲಾರದ ನಂಟು ಎಂದೇ ಹೇಳಬಹುದು. ಕೆಲವರಿಗೆ ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಕುಡಿಯುವ ಅಭ್ಯಾಸ ಇದ್ದರೆ ಇನ್ನೂ ಕೆಲವರಿಗೆ ಕಾಫಿ ಕುಡಿ ಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಹೆಚ್ಚಿನವರು ಕಾಫಿ ಎಂದರೆ ತುಂಬಾನೇ ಇಷ್ಟಪಡುತ್ತಾರೆ. ಬೆಳಗ್ಗೆ ಯಾವುದೇ ಕೆಲಸ ಆರಂಭಿಸುವ ಮುನ್ನ ಒಂದು ಕಪ್ ಕಾಫಿ ಹೀರಿ ಕೆಲಸ ಆರಂಭಿಸುವುದು ಹೆಚ್ಚಿನವರ ಅಭ್ಯಾಸವಾಗಿ ಬಿಟ್ಟಿರುತ್ತದೆ.
ಇನ್ನೂ ಕೆಲವರು ಮೂಡ್ ಹಾಳಾದ್ರೆ, ಆಗಾಗ ತಲೆನೋವು ಬಂದ್ರೆ ಅಷ್ಟೆ ಯಾಕೆ ಯಾರಾದರೂ ಸ್ನೇಹಿತರು ಸಿಕ್ಕರೂ ಸಾಕು ಒಂದು ಕಪ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿ ರುತ್ತಾರೆ. ಆದರೆ ನೆನಪಿರಲಿ ಕೆಫೀನ್ ಅಂಶ ಹೆಚ್ಚಿರುವ ಕಾಫಿ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು! ಆದರೆ ಮಿತವಾದ ಕಾಫಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬನ್ನಿ ಹಾಗಾದ್ರೆ ಯಾವೆಲ್ಲಾ ಸಮಸ್ಯೆ ಇರುವವರು ಕಾಫಿ ಕುಡಿಯುವ ಅಭ್ಯಾಸದಿಂದ ದೂರ ಉಳಿಯಬೇಕು.
ಕಾಫಿಯ ಬಗ್ಗೆ ಹೇಳುವುದಾದರೆ

- ಕಾಫಿಯಲ್ಲಿ ಹಲವಾರು ಬಗೆಯ ಪದಾರ್ಥಗಳು ಕಂಡು ಬರುತ್ತವೆ. ಇವುಗಳಲ್ಲಿ ಕೆಫೀನ್, ಪಾಲಿಫಿನಾಲ್‌ಗಳು ಮತ್ತು ಇತರ ಉತ್ಕರ್ಷಣ ನಿರೋಧಕಗಳು ಕೂಡ ಸೇರಿವೆ. ಇವುಗಳ ಜೊತೆಗೆ, ಕಾಫಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಲಿಪಿಡ್‌ಗಳು, ಸಾರಜನಕ ಸಂಯುಕ್ತಗಳು, ಜೀವ ಸತ್ವಗಳು ಅಂದರೆ ವಿಟಮಿನ್ಸ್ ಗಳು, ಖನಿಜಾಂಶಗಳು, ಆಲ್ಕಲಾಯ್ಡ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳು ಸಹ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ.
- ಪ್ರಮುಖವಾಗಿ ಕಾಫಿಯಲ್ಲಿ ಕೆಫೀನ್ ಮತ್ತು ಪಾಲಿಫಿನಾಲ್ ಗಳಿಂದಾಗಿ ಜನರು ಮತ್ತೆ ಮತ್ತೆ ಕಾಫಿಗಾಗಿ ಹಂಬಲಿಸುತ್ತಾರೆ.ಅನೇಕ ಜನರು ದಿನಕ್ಕೆ 10 ರಿಂದ 12 ಬಾರಿ ಕಾಫಿ ಕುಡಿಯುತ್ತಾರೆ. ಕಾಫಿ ಕುಡಿಯುವುದರಿಂದ ಮಾನಸಿಕ ಒತ್ತಡದಿಂದ ಸ್ವಲ್ಪ ಪರಿಹಾರ ಸಿಗುತ್ತದೆ, ಆದರೆ ಅದರ ಅತಿಯಾದ ಸೇವನೆಯು ಬಿಪಿ ಮತ್ತು ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.
ಬಿಪಿ ಕಾಯಿಲೆ ಇರುವವರು ಕಾಫಿ ಕುಡಿಯಬಹುದಾ?

ಇದರ ಬದಲಿಗೆ ದಿನಕ್ಕೆ ಒಂದೆರಡು ಬಾರಿ ಕಾಫಿ ಕುಡಿದರೆ ಸಾಕು, ಇದರಿಂದ ದೇಹಕ್ಕೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗು ವುದಿಲ್ಲ. ಇದಕ್ಕಿಂತ ಹೆಚ್ಚು ಕಾಫಿ ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು
ಈಗಾಗಲೇ ಬಿಪಿ ಕಾಯಿಲೆಯಿಂದ ಬಳಲುತ್ತಿ ರುವವರು ಕಾಫಿ ಕುಡಿಯುವುದರಿಂದ ಸ್ವಲ್ಪ ಸಮಯದ ವರೆಗೆ ರಕ್ತದೊತ್ತಡ ಹೆಚ್ಚಾಗಬಹುದು. ಆದರೆ ಸ್ವಲ್ಪ ಸಮಯದ ನಂತರ ಅದು ಸಾಮಾನ್ಯವಾಗುತ್ತದೆ.
ಇದಕ್ಕೆಲ್ಲಾ ಕಾರಣ ಕಾಫಿಯಲ್ಲಿ ಕೆಫೀನ್ ಇರುವುದರಿಂದ ರಕ್ತನಾಳ ಗಳು ಕುಗ್ಗುತ್ತವೆ. ಇದರಿಂದಾಗಿ, ಬಿಪಿ ತಾತ್ಕಾಲಿಕವಾಗಿ ಹೆಚ್ಚಾಗುತ್ತದೆ. ಹಾಗಂತ ಈ ಕಾಯಿಲೆ ಇರುವವರು ಸಂಪೂರ್ಣವಾಗಿ ಕಾಫಿ ಬಿಟ್ಟು ಬಿಡಬೇಕು ಎಂದು ಹೇಳುವುದಿಲ್ಲ!
ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?

- ಒಂದು ವೇಳೆ ನಿಮಗೆ ಅಧಿಕರಕ್ತದೊತ್ತಡದ ಸಮಸ್ಯೆ ಇದ್ದರೆ, ಆದಷ್ಟು ಕಾಫಿ ಕುಡಿಯುವ ಅಭ್ಯಾಸದಿಂದ ದೂರವಿರಿ. ಹೈ ಬಿಪಿ ರೋಗಿಗಳಿಗೆ ಕಾಫಿ ತುಂಬಾ ಹಾನಿಕಾರಕ ಎಂದು ಡಾ. ಅಲೋಕ್ ರಂಜನ್ ಸಲಹೆ ನೀಡುತ್ತಾರೆ.
- ಯಾಕೆಂದ್ರೆ ಈ ಕಾಯಿಲೆ ಇರುವವರು ಆಗಾಗ ಕಾಫಿ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ರಕ್ತದೊತ್ತಡ ದಲ್ಲಿ ಏರುಪೇರು ಉಂಟಾಗಿ, ಯಾವಾಗ ಬೇಕಾದರೂ ಕೂಡ, ಬಿಪಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ!
- ಬಿಪಿ ಇದ್ದಕ್ಕಿದ್ದಂತೆ ಹೆಚ್ಚಾಗುವುದು ಒಳ್ಳೆಯದಲ್ಲ. ಹಾಗಂತ ಕಾಫಿ ಕುಡಿದ ನಂತರ ಬಿಪಿ ಹೆಚ್ಚಾಗುವುದು ಎಲ್ಲರಲ್ಲಿಯೂ ಕಂಡು ಬರುವುದಿಲ್ಲ. ಕೆಲವರಲ್ಲಿ ಮಾತ್ರ ಈ ಸಮಸ್ಯೆ ಬಹಳ ಬೇಗನೇ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಅತಿಯಾದರೆ ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ ಅತಿಯಾದ ಕಾಫಿ ಸೇವನೆಯಿಂದ ದೇಹಕ್ಕೆ ಹಾನಿಯೇ ಜಾಸ್ತಿ ಇರುವುದರಿಂದ, ಈ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿಕೊಂಡರೆ ಒಳ್ಳೆಯದು
ಈ ವಿಚಾರ ನಿಮಗೆ ಗೊತ್ತಿರಲಿ

- ನಿಮಗೆ ಗೊತ್ತಿರಲಿ, ಪದೇ ಪದೇ ಕಾಫಿ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ರಕ್ತದಲ್ಲಿ ಏರುಪೇರು ಉಂಟಾಗಿ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
- ಕಾಫಿ ಕುಡಿಯುವ ಅರ್ಧ ಗಂಟೆಯ ಮೊದಲು ರಕ್ತದೊತ್ತಡವನ್ನು ಪರೀಕ್ಷೆ ಮಾಡಿಸಿಕೊಳ್ಳಿ. ಆ ಬಳಿಕ ಕಾಫಿ ಕುಡಿದ ಅರ್ಧ ಗಂಟೆಯ ನಂತರ ಇನ್ನೊಮ್ಮೆ ರಕ್ತದೊತ್ತಡವನ್ನು ಪರಿಶೀಲಿಸಿ.
- ಈ ಸಮಯದಲ್ಲಿ ಒಂದು ವೇಳೆ ರಕ್ತದೊತ್ತಡದಲ್ಲಿ ಏರುಪೇರಾಗಿದ್ದರೆ, ಕಾಫಿ ಕುಡಿಯುವ ಅಭ್ಯಾಸವನ್ನು ನಿಲ್ಲಿಸಿ ಬಿಡಿ! ಯಾವುದಕ್ಕೂ ಒಮ್ಮೆ ವೈದ್ಯರ ಸಲಹೆಗಳನ್ನು ಪಡೆದು ಕೊಳ್ಳುವುದು ಒಳ್ಳೆಯದು.
ಕೊನೆ ಮಾತು

- ಇನ್ನು ಬಿಪಿ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಕಾಫಿ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.ಇದಕ್ಕೆ ಪ್ರಮುಖ ಕಾರಣ ಕಾಫಿಯಲ್ಲಿ ಕಂಡು ಬರುವ, ಕೆಫಿನ್ ಅಂಶ, ರಕ್ತದೊತ್ತಡ ಕಾಯಿಲೆಯನ್ನು ಇನ್ನಷ್ಟು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆಯಂತೆ!
- ಇನ್ನು ನಿಮಗೆ ಗೊತ್ತಿರಲಿ ಒಂದು ಕಪ್ ಕಾಫಿಯಲ್ಲಿ 100 ಮಿಲಿ ಗ್ರಾಂ ಕೆಫೀನ್ ಅಂಶ ಕಂಡು ಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನಕ್ಕೆ 300 ಮಿಲಿ ಗ್ರಾಂಗಳಿಗಿಂತ ಕಡಿಮೆ ಪ್ರಮಾಣ ದಲ್ಲಿ ಕೆಫೀನ್ ಸೇವನೆ ಸುರಕ್ಷಿತ ಎಂದು ಹೇಳಲಾಗುತ್ತದೆ.
- ಹೀಗಾಗಿ ನೀವೇ ಲೆಕ್ಕಾ ಹಾಕಿ, ಆರೋಗ್ಯದ ದೃಷ್ಟಿಯಿಂದ ದಿನಕ್ಕೆ ಎಷ್ಟು ಕಪ್ ಕಾಫಿ ಒಳ್ಳೆಯದು ಎಂದು! ಅದರಲ್ಲೂ ಸ್ಟ್ರಾಂಗ್ ಕಾಫಿ ಕುಡಿಯು ವವರು ದಿನಕ್ಕೆ ಎರಡು ಕಪ್ ನಷ್ಟು ಕಾಫಿಗೆ ಸೀಮಿತ ಗೊಳಿಸುವುದು ಉತ್ತಮ! ಈ ಸಲಹೆ ಕೇವಲ ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಾತ್ರವಲ್ಲ, ಉಳಿದವರಿಗೂ ಕೂಡ ಅನ್ವಯವಾಗುತ್ತದೆ!
Vijayakarnataka
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1