ಆನ್‌ಲೈನ್ ಮೋಸ: ಗಣೇಶ ಹಬ್ಬಕ್ಕೆ ಸೀರೆ ವ್ಯವಹಾರ ಆರಂಭಿಸಲು ಯತ್ನಿಸಿದ ದಂಪತಿಗೆ ದೋಖಾ!

ಆಗಸ್ಟ್ 27:
ಗಣೇಶ ಹಬ್ಬದ ಸಂಭ್ರಮದಲ್ಲಿ ಹೊಸ ವ್ಯಾಪಾರ ಆರಂಭಿಸಬೇಕು ಎಂಬ ಕನಸು ಕಂಡ ದಂಪತಿ ಆನ್‌ಲೈನ್ ದೋಖಾಗೆ ಬಲಿಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಮಹಾದೇವ ಹಾಗೂ ಕಾಳಮ್ಮ ದಂಪತಿಗಳು, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ “100 ರೂ.ಗೆ 3 ಸೀರೆ” ಎಂಬ ಆಕರ್ಷಕ ಜಾಹಿರಾತನ್ನು ನೋಡಿ ಮೆಚ್ಚಿಕೊಂಡಿದ್ದರು. ಮನೆಯಲ್ಲೇ ಕುಳಿತು ಸೀರೆ ವ್ಯಾಪಾರ ಆರಂಭಿಸುವ ಉದ್ದೇಶದಿಂದ ಅವರು ಜಾಹಿರಾತು ನೀಡಿದವರನ್ನು ಸಂಪರ್ಕಿಸಿ, ₹10,000 ಪೇ ಮಾಡಿ 70 ಸೀರೆಗಳನ್ನು ಆರ್ಡರ್ ಮಾಡಿದ್ದರು.

ಆದರೆ, ಒಂದು ವಾರದ ಬಳಿಕ ಮನೆಗೆ ಬಂದಿದ್ದ ಪಾರ್ಸಲ್ ನೋಡಿದಾಗ ಅವರು ಅಚ್ಚರಿ ತಿಂದಿದ್ದಾರೆ. ಬಟ್ಟೆಗಳು ಹರಿದು ಹೋಗಿದ್ದವು, ದುರ್ವಾಸನೆ ಬರುತ್ತಿದ್ದವು. ಕಂಗಾಲಾದ ದಂಪತಿ ಆನ್‌ಲೈನ್ ಮಾರಾಟಗಾರನನ್ನು ಸಂಪರ್ಕಿಸಿದಾಗ, ಮಾರಾಟಗಾರ ಬೇಕಾಬಿಟ್ಟಿಯಾಗಿ ಉತ್ತರಿಸಿದ್ದಾನೆ.

ದೂರು ನೀಡಲು ಹೋದಾಗ ಮಾನ್ವಿ ಠಾಣೆ ಪೊಲೀಸರು ಕೂಡ ತಕ್ಷಣ ದೂರು ಸ್ವೀಕರಿಸಲು ಹಿಂಜರಿದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಬೇಸರಗೊಂಡ ದಂಪತಿಗಳು – “ನಮಗೆ ನ್ಯಾಯ ಕೊಡಿಸಬೇಕು, ಮೋಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

👉 ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹಿರಾತುಗಳ ಮೇಲೆ ತಕ್ಷಣ ನಂಬಿಕೆ ಇಡುವುದು ಅಪಾಯಕಾರಿ. ಹಣ ಹೂಡುವ ಮುನ್ನ ಮಾರಾಟಗಾರರ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.

Views: 33

Leave a Reply

Your email address will not be published. Required fields are marked *