ಬದನೆ ಕಂಡು ಮೂಗು ಮುರಿಯಬೇಡಿ! ಎರಡು ಅಪಾಯಕಾರಿ ಕಾಯಿಲೆ ತಡೆಯುವ ಶಕ್ತಿ ಇದಕ್ಕಿದೆ !

Benefits Of Brinjal:ಬದನೆಯನ್ನು ಪೋಷಕಾಂಶಗಳ ಪವರ್ ಹೌಸ್ ಎಂದು  ಕರೆಯಲಾಗುತ್ತದೆ.  ಇದನ್ನು ನಿಯಮಿತವಾಗಿ ತಿನ್ನುವ ಜನರು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾರೆ.

  • ಬದನೆ ಬಹಳ ಸಾಮಾನ್ಯವಾದ ತರಕಾರಿ.
  • ಎಲ್ಲಾ ಸೀಸನ್ ನಲ್ಲಿಯೂ ಈ ತರಕಾರಿ ಲಭ್ಯವಿರುತ್ತದೆ
  • ಬದನೆಕಾಯಿಯಲ್ಲಿಯೂ ಅಡಗಿದೆ ಪೋಷಕಾಂಶಗಳು

Benefits Of Brinjal : ಬದನೆ ಬಹಳ ಸಾಮಾನ್ಯವಾದ ತರಕಾರಿ. ಎಲ್ಲಾ ಸೀಸನ್ ನಲ್ಲಿಯೂ ಈ ತರಕಾರಿ ಲಭ್ಯವಿರುತ್ತದೆ. ಆದರೆ ಕೆಲವರು ಅದರ ರುಚಿಯನ್ನು ಇಷ್ಟಪಡುವುದಿಲ್ಲ. ಇದು ತಿಳಿ ಹಸಿರು, ನೇರಳೆ ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಬದನೆಕಾಯಿಯಲ್ಲಿ ಅನೇಕ ಆರೋಗ್ಯ ರಹಸ್ಯಗಳು ಅಡಗಿವೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. 

ಬದನೆಕಾಯಿಯಲ್ಲಿಯೂ ಅಡಗಿದೆ ಪೋಷಕಾಂಶಗಳು : 
ಬದನೆಯನ್ನು ಪೋಷಕಾಂಶಗಳ ಪವರ್ ಹೌಸ್ ಎಂದು  ಕರೆಯಲಾಗುತ್ತದೆ. ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ತರಕಾರಿಯಾಗಿದೆ. ವಿಟಮಿನ್,  ಫೈಬರ್, ಮೆಗ್ನೀಸಿಯಮ್, ನಿಯಾಸಿನ್ ಗಳಿಂದ ಈ ತರಕಾರಿ ಕೂಡಿದೆ. ಇದನ್ನು ನಿಯಮಿತವಾಗಿ ತಿನ್ನುವ ಜನರು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾರೆ.

ಬದನೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಬದನೆಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಹೇರಳವಾಗಿವೆ. ಫ್ರೀ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ನಮ್ಮ ದೇಹವನ್ನುರಕ್ಷಿಸುತ್ತದೆ. ಮಾತ್ರವಲ್ಲ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೃದಯಾಘಾತದಿಂದ ರಕ್ಷಣೆ:
ಬದನೆಯಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು, ಇದು ತೂಕ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸಲ್ ಕಾಯಿಲೆಯಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯುತ್ತದೆ. 

ಮಧುಮೇಹದಲ್ಲಿ ಪ್ರಯೋಜನಕಾರಿ:
ಮಧುಮೇಹಿಗಳು ತಮ್ಮ ನಿಯಮಿತ ಆಹಾರದಲ್ಲಿ ಬದನೆಯನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಇದು ಫೈಬರ್‌ನ ಸಮೃದ್ಧ ಮೂಲವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಫೈಬರ್ ಇರುವ ಕಾರಣ, ಸಕ್ಕರೆಯ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ಸಕ್ಕರೆಯ ಹೀರುವಿಕೆ ನಿಧಾನವಾಗುತ್ತದೆ. ಹೀಗಾಗಿ  ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಹೆಚ್ಚು ಸಮಸ್ಯೆಯಾಗುವುದಿಲ್ಲ. 

(  ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. )

Source : https://zeenews.india.com/kannada/health/brinjal-benefits-to-control-heart-diseas-and-diabetes-health-benefits-of-brinjal-176680

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *